ಪತ್ನಿ ಜೊತೆ ‘ಬುಟ್ಟ ಬೊಮ್ಮ’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಡೇವಿಡ್ ವಾರ್ನರ್

ಪತ್ನಿ ಜೊತೆ ‘ಬುಟ್ಟ ಬೊಮ್ಮ’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಡೇವಿಡ್ ವಾರ್ನರ್

ಲಾಕ್​ಡೌನ್​ನಿಂದಾಗಿ ವಿಶ್ವದಾದ್ಯಂತ ಎಲ್ಲರೂ ತಮ್ಮ ಹೆಚ್ಚಿನ ಸಮಯವನ್ನ ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಅದ್ರಲ್ಲೂ ಸ್ಟಾರ್ ಸೆಲೆಬ್ರಿಟಿಗಳು ಮನೆಯಲ್ಲಿದ್ರೂ, ವಿಡಿಯೋಗಳನ್ನ ಪೋಸ್ಟ್ ಮಾಡೋ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಡೆಡ್ಲಿ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್, ಭಾರತದಲ್ಲಿರೋ ತಮ್ಮ ಅಭಿಮಾನಿಗಳನ್ನ ಸಖತ್ ಆಗೇ ರಂಜಿಸಿದ್ದಾರೆ.

ಸದಾ ತನ್ನ ಫನ್ನಿ ವಿಡಿಯೋಗಳಿಂದ ಅಭಿಮಾನಿಗಳಿಗೆ ಮುದ ನೀಡೋ ಡೇವಿಡ್ ವಾರ್ನರ್, ಈಗ ತೆಲುಗಿನ ಹಾಡೊಂದಿಗೆ ಸ್ಟೆಪ್ಸ್ ಹಾಕಿದ್ದಾರೆ. ಯಾಕಂದ್ರೆ ಐಪಿಎಲ್​ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕನಾಗಿರುವ ವಾರ್ನರ್, ಹೈದರಾಬಾದ್‌ ಅಭಿಮಾನಿಗಳನ್ನು ಗೆಲ್ಲಲು ತೆಲುಗು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ ಮತ್ತು ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಂಲೋ ಸಿನಿಮಾದ ‘ಬುಟ್ಟ ಬೊಮ್ಮ’ ಹಾಡಿಗೆ ಸ್ಟೆಪ್‌ ಹಾಕಿ ಮಿಂಚಿದ್ದಾರೆ.

ವಾರ್ನರ್ ಜೊತೆ ಪತ್ನಿ ಕ್ಯಾಂಡೀಸ್‌ ಕೂಡ ಸ್ಟೆಪ್: ಡೇವಿಡ್ ವಾರ್ನರ್ ಜೊತೆಗೆ ಪತ್ನಿ ಕ್ಯಾಂಡೀಸ್‌ ವಾರ್ನರ್‌ ಕೂಡ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಡೀ ಭಾರತದಾದ್ಯಂತ ಶುರುವಾದ ಈ ‘ಬುಟ್ಟ ಬೊಮ್ಮ’ ಹಾಡಿನ ಕ್ರೇಜ್ ಆಸ್ಟ್ರೇಲಿಯಾಕ್ಕೂ ತಲುಪಿದೆ ಅನ್ನೋದಕ್ಕೆ ವಾರ್ನರ್ ಮಾಡಿದ ಈ ವಿಡಿಯೋನೇ ಸಾಕ್ಷಿ.

ಕೆಲ ದಿನಗಳ ಹಿಂದೆ ಡೇವಿಡ್ ವಾರ್ನರ್ ತಮ್ಮ ಮುದ್ದಿನ ಮಗಳಾದ ಐವೀ ಜೊತೆ ಕತ್ರೀನಾ ಕೈಫ್‌ ನಟಿಸಿದ್ದ ಸೂಪರ್‌ ಹಿಟ್‌ ಶೀಲಾ ಕಿ ಜವಾನಿ ಹಾಡಿಗೆ ಸ್ಟೆಪ್‌ ಹಾಕಿರೋ ವಿಡಿಯೋ ವೈರಲ್ ಆಗಿತ್ತು.

ಇತ್ತಿಚೆಗಷ್ಟೇ ತಮ್ಮ ಮಗಳಿಗಾಗಿ ಅಧಿಕೃತವಾಗಿ ಟಿಕ್‌ಟಾಕ್‌ ಆಪ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್‌, ಹಲವು ಡ್ಯಾನ್ಸ್​ಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ವಾರ್ನರ್ ಹೆಚ್ಚು ಭಾರತೀಯ ಸಿನಿಮಾ ಹಾಡುಗಳಿಗೆ ಸ್ಪೆಪ್ಸ್ ಹಾಕಿ, ಭಾರತದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ.

https://www.instagram.com/p/B_mINrppW7d/?utm_source=ig_web_copy_link

Click on your DTH Provider to Add TV9 Kannada