ಕೆಚ್ಚೆದೆಯ ಆಟಗಾರ ಎಂದೇ ಕ್ರಿಕೆಟ್ ಪ್ರೇಮಿಗಳಿಂದ ಗುರುತಿಸಲ್ಪಟ್ಟಿರುವ ಆರ್ ಅಶ್ವಿನ್ ಅವರು ಈ ಬಾರಿಯ ಐಪಿಎಲ್ 2021 ಗೆ ಗುಡ್ ಬೈ ಹೇಳಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಸಕ್ತ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ತಾವು ದೂರ ಸರಿಯುತ್ತಿರುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಸ್ಪಿನ್ನರ್ ತಮ್ಮ ನಿರ್ಧಾರ ಘೋಷಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ.. ಕೊರೊನಾ ಕಾಟ ಎಂಬುದಾಗಿ ಅವರು ಹೇಳಿದ್ದಾರೆ. ಕೊರೊನಾ ಸೋಂಕಿನಿಂದ ತಮ್ಮ ಕುಟುಂಬಸ್ಥರು ಬಳಲುತ್ತಿದ್ದಾರೆ. ಹಾಗಾಗಿ, ಈ ಪರಿಸ್ಥಿತಿಯಲ್ಲಿ ನಾನು ಅವರ ಜೊತೆಗೆ ಇರಬೇಕಾಗಿದೆ. ಹಾಗಾಗಿ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಟ್ವೀಟ್ ಮಾಡಿ ಅಶ್ವಿನ್ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಅಶ್ವಿನ್ ಅವರ ಈ ನಿರ್ಧಾರವನ್ನು ಸ್ವಾಗತಿಸಿ, ಟ್ವೀಟ್ ಮಾಡಿದ್ದಾರೆ.
ಕೆಚ್ಚೆದೆಯ ಆಟಗಾರ 34 ವರ್ಷದ ಆರ್ ಅಶ್ವಿನ್ ಐಪಿಎಲ್ ಟೂರ್ನಿಯಿಂದ ದೂರ ಸರಿದಿರುವುದರಿಂದ ತಾವು ಆಡುವ ತಂಡ ಡೆಲ್ಲಿ ಕ್ಯಾಪಿಟಲ್ಸ್ಗೆ ಭಾರಿ ಹೊಡೆತ ಬಿದ್ದಂತಾಗಿದೆ. ಜೊತೆಗೆ ಐಪಿಎಲ್ ಟೂರ್ನಿಗೂ ಇದು ನುಂಗಲಾರದ ತುತ್ತಾಗಿದೆ. ಆದರೆ ಕೊರೊನಾ ಮಾರಿ ದಿನೇದಿನೆ ದೇಶದಲ್ಲಿ ತನ್ನ ಕದಂಬಬಾಹುಗಳನ್ನು ಚಾಚುತ್ತಿರುವಾಗ ಪರಿಸ್ಥಿತಿ ಭೀಕರವೆನಿಸುತ್ತಿದೆ. 77 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ ರವಿಚಂದ್ರನ್, 111 ODIs, 46 T20 Internationals ಪಂದ್ಯಗಳನ್ನು ಆಡಿದ್ದಾರೆ.
? UPDATE ?
Ravichandran Ashwin has decided to take a break from #IPL2021 to support his family in the fight against #COVID19, with the option to return should things get better.
We at Delhi Capitals extend him our full support ?#YehHaiNayiDilli pic.twitter.com/A9BFoPkz7b
— Delhi Capitals (@DelhiCapitals) April 25, 2021
ಈ ಮಧ್ಯೆ, ಇಡೀ ದೇಶವೇ ಕೊರೊನಾದಿಂದ ನಲುಗುತ್ತಿರುವಾಗ ಐಪಿಎಲ್ ನಗುತ್ತಿರುವುದರ ಬಗ್ಗೆ ಕ್ರಿಕೆಟ್ ಪ್ರೇಮಿಗಳೂ ಸೇರಿದಂತೆ ಎಲ್ಲೆಡೆಯೂ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಕೊರೊನಾದಿಂದಾಗಿ ಹಾಲಿ ಟೂರ್ನಿಯನ್ನು ಇಲ್ಲಿಗೇ ನಿಲ್ಲಿಸಿ ಎಂದು ಜನ ಕೇಳತೊಡಗಿದ್ದಾರೆ. ಹಾಲಿ ಐಪಿಎಲ್ ಟೂರ್ನಿ ಮೇ 30 ರವರೆಗೂ ನಡೆಯಲಿದೆ.
(Delhi Capitals spinner Ravichandran Ashwin withdraws from IPL to support family over COVID-19)
I would be taking a break from this years IPL from tomorrow. My family and extended family are putting up a fight against #COVID19 and I want to support them during these tough times. I expect to return to play if things go in the right direction. Thank you @DelhiCapitals ??
— Stay home stay safe! Take your vaccine?? (@ashwinravi99) April 25, 2021
ಕೊರೊನಾ ಕಾಟವು ಆರ್ಸಿಬಿ ತಂಡಕ್ಕೂ ಬರೆ ಹಾಕಿದೆ. ತಂಢದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಆರ್ಸಿಬಿ ತಂಡದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್ ಮತ್ತು ಅಡಂ ಜಂಪಾ ಅವರಿಬ್ಬರೂ ಕೊರೊನಾ ಸೋಂಕಿನ ಪ್ರಮಾಣ ಮಾರಣಾಂತಿಕವಾಗಿ ಹೆಚ್ಚುತ್ತಿರುವುದರಿಂದ ಸ್ವದೇಶಕ್ಕೆ ಮರಳಿದ್ದಾರೆ.
Official Announcment:
Adam Zampa & Kane Richardson are returning to Australia for personal reasons and will be unavailable for the remainder of #IPL2021. Royal Challengers Bangalore management respects their decision and offers them complete support.#PlayBold #WeAreChallengers pic.twitter.com/NfzIOW5Pwl
— Royal Challengers Bangalore (@RCBTweets) April 26, 2021
Published On - 10:15 am, Mon, 26 April 21