ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಉಗ್ರರ ಭೀತಿ: ಜೇಟ್ಲಿ ಮೈದಾನಕ್ಕೆ ಟೈಟ್ ಸೆಕ್ಯೂರಿಟಿ!

ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಇನ್ನು ನಾಲ್ಕೇ ದಿನ ಬಾಕಿಯಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನ ಅಂತಾ ಮರುನಾಮಕರಣ ಮಾಡಿಕೊಂಡಿರುವ ಫಿರೊಝ್ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಕೋಟ್ಲಾ ವಾಯು ಮಾಲಿನ್ಯದಿಂದ ಹದಗೆಟ್ಟಿದೆ. ಆದ್ರೀಗ ವಾಯುಮಾಲಿನ್ಯ ಹಾಳಾಗಲಿ, ಕೋಟ್ಲಾ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟಿಗರೇ ಬೆಚ್ಚಿ ಬಿದ್ದಿದ್ದಾರೆ. ಕಿಂಗ್ ಕೊಹ್ಲಿ ಮೇಲೆ ಉಗ್ರರ ಕಣ್ಣು! ಉಗ್ರರು ಟಾರ್ಗೆಟ್ ಮಾಡಿರೋದೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ. ಕೇರಳದ ಕೋಝಿಕೋಡ್​ನಿಂದ […]

ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಉಗ್ರರ ಭೀತಿ: ಜೇಟ್ಲಿ ಮೈದಾನಕ್ಕೆ ಟೈಟ್ ಸೆಕ್ಯೂರಿಟಿ!
Follow us
ಸಾಧು ಶ್ರೀನಾಥ್​
| Updated By: Team Veegam

Updated on:Oct 30, 2019 | 4:04 PM

ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಇನ್ನು ನಾಲ್ಕೇ ದಿನ ಬಾಕಿಯಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನ ಅಂತಾ ಮರುನಾಮಕರಣ ಮಾಡಿಕೊಂಡಿರುವ ಫಿರೊಝ್ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಕೋಟ್ಲಾ ವಾಯು ಮಾಲಿನ್ಯದಿಂದ ಹದಗೆಟ್ಟಿದೆ. ಆದ್ರೀಗ ವಾಯುಮಾಲಿನ್ಯ ಹಾಳಾಗಲಿ, ಕೋಟ್ಲಾ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟಿಗರೇ ಬೆಚ್ಚಿ ಬಿದ್ದಿದ್ದಾರೆ.

ಕಿಂಗ್ ಕೊಹ್ಲಿ ಮೇಲೆ ಉಗ್ರರ ಕಣ್ಣು! ಉಗ್ರರು ಟಾರ್ಗೆಟ್ ಮಾಡಿರೋದೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ. ಕೇರಳದ ಕೋಝಿಕೋಡ್​ನಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎಗೆ ಈ ಮೇಲ್ ಮಾಡಿರೋ ಲಷ್ಕರ್ ಎ ತೋಯ್ಬಾ ಸಂಘಟನೆ ಉಗ್ರಗಾಮಿಗಳು, ದೇಶದ ಪ್ರಮುಖ ರಾಜಕಾರಣಿಗಳ ಜೊತೆ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನೂ ಟಾರ್ಗೆಟ್ ಮಾಡಿದ್ದಾರೆ.

ಕೋಟ್ಲಾ ಪಂದ್ಯಕ್ಕೆ ಟೈಟ್ ಸೆಕ್ಯೂರಿಟಿ! ಲಷ್ಕರ್​ಎ-ತೋಯ್ಬಾ ಸಂಘಟನೆ ಮಾಡಿರೋ ಈ ಮೇಲ್ ಅನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ಬಿಸಿಸಿಐಗೆ ಕಳುಹಿಸಿಕೊಟ್ಟಿದೆ. ಬಿಸಿಸಿಐ ಉಗ್ರಗಾಮಿಗಳು ಕಳುಹಿಸಿರೋ ಈ ಮೇಲ್ ನೋಡಿ ಬೆಚ್ಚಿ ಬಿದ್ದಿದೆ. ಹೀಗಾಗಿ ಕೋಟ್ಲಾ ಮೈದಾನದಲ್ಲಿ ಹೆಚ್ಚಿನ ಬಿಗಿಬದ್ರತೆ ಒದಗಿಸುವಂತೆ ದೆಹಲಿ ಪೋಲಿಸರಿಗೆ ತಿಳಿಸಿದ್ದಾರೆ. ಆದ್ರೆ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದು ಕೊಂಡಿರೋದ್ರಿಂದ ಹೆಚ್ಚಿನ ತಲೆನೋವಿಲ್ಲ ನಿಜ.

ವಿಂಡೀಸ್ ಪ್ರವಾಸದಲ್ಲೂ ಬಂದಿತ್ತು ಜೀವ ಬೆದರಿಕೆ! ಇನ್ನು ಇದೇ ವರ್ಷ ಅಗಸ್ಟ್​ನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಆಂಟಿಗುವಾದಲ್ಲಿ ನಡೆಯೋ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಜೀವ ಬೆದರಿಕೆ ಬಂದಿತ್ತು. ಇಡೀ ಟೀಮ್ ಇಂಡಿಯಾವನ್ನ ವಿಂಡೀಸ್ ನೆಲದಲ್ಲಿ ಮುಗಿಸ್ತೀವಿ ಅನ್ನೋ ಇ ಮೇಲ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಂದಿತ್ತು ಆ ಇ ಮೇಲ್ ಅನ್ನ ಪಿಸಿಬಿ ಬಿಸಿಸಿಐಗೆ ಕಳುಹಿಸಿಕೊಟ್ಟಿತ್ತು. ಹೀಗಾಗಿ ಆಂಟಿಗುವಾದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಈ ಹಿಂದೆ ಸಾಕಷ್ಟು ಬಾರಿ ಉಗ್ರಗಾಮಿಗಳು ಭಾರತದ ರಾಜಕಾರಣಿಗಳನ್ನ ಟಾರ್ಗೆಟ್ ಮಾಡಿ ಬೆದರಿಸಿದ್ರು. ಆದ್ರೆ ಇದೆ ಮೊದಲ ಬಾರಿಗೆ ಉಗ್ರಗಾಮಿಗಳು ಕ್ರಿಕೆಟಿಗನೊಬ್ಬನನ್ನ ಟಾರ್ಗೆಟ್ ಮಾಡಿದ್ದಾರೆ. ಅದು ಕೂಡ ಕಿಂಗ್ ಕೊಹ್ಲಿಯನ್ನ. ಈ ಗೊಡ್ಡು ಬೆದರಿಕೆಗೆ ಭಾರತ ಹಿಂಜರಿಯೋದಿಲ್ಲ. ಭಾರತೀಯ ಕ್ರಿಕೆಟಿಗರ ಒಂದು ರೋಮ ಸೋಕಿದ್ರೂ ಉಗ್ರರು ಅದಕ್ಕೆ ಸರಿಯಾದ ದಂಡ ತೆರಬೇಕಾಗುತ್ತೆ ಅನ್ನೋದನನ್ ಮರೆಯೋ ಹಾಗಿಲ್ಲ.

Published On - 9:44 am, Wed, 30 October 19

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ