AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್‌ ಟೆಸ್ಟ್ ತಂಡಕ್ಕೆ ಜೋ ರೂಟ್ ನಾಯಕ, ಸ್ಟೀಫನ್ ಫ್ಲೆಮಿಂಗ್ ಹೆಡ್ ಕೋಚ್

New Era for England Test Cricket: ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ನಾಯಕತ್ವ ಮತ್ತು ಕೋಚಿಂಗ್ ಮಹತ್ವದ ಬದಲಾವಣೆಗಳಾಗಿವೆ. ಬೆನ್ ಸ್ಟೋಕ್ಸ್ ಹಾಗೂ ಬ್ರೆಂಡನ್ ಮೆಕಲಮ್ ನಿರ್ಗಮನದ ಬಳಿಕ ಇಸಿಬಿ ಹೊಸ ನೇಮಕಾತಿಗಳನ್ನು ಘೋಷಿಸಿದೆ. ಜೋ ರೂಟ್ ಅವರನ್ನು ಮತ್ತೆ ಟೆಸ್ಟ್ ನಾಯಕರನ್ನಾಗಿ ನೇಮಿಸಿದ್ದರೆ, ಸ್ಟೀಫನ್ ಫ್ಲೆಮಿಂಗ್ ಹೊಸ ಮುಖ್ಯ ಕೋಚ್ ಆಗಿದ್ದಾರೆ. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದು, ತಂಡಕ್ಕೆ ಹೊಸ ಶಕ್ತಿ ತುಂಬುವ ನಿರೀಕ್ಷೆ ಇದೆ.

ಪೃಥ್ವಿಶಂಕರ
|

Updated on: Jul 30, 2026 | 5:25 PM

Share
ಇಂಗ್ಲೆಂಡ್‌ ಟೆಸ್ಟ್ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳಾಗಿವೆ. ಕೆಲವೇ ದಿನಗಳ ಹಿಂದೆ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಹಾಗೆಯೇ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಕೂಡ ಟೆಸ್ಟ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ಇದೀಗ ಈ ಎರಡು ಸ್ಥಾನಗಳಿಗೆ ಹೊಸ ಆಯ್ಕೆಗಳನ್ನು ಮಾಡಲಾಗಿದೆ(PC-PTI).

1 / 5
ಅದರಂತೆ ಬ್ರೆಂಡನ್ ಮೆಕಲಮ್ ಬದಲಿಗೆ ಇಸಿಬಿ ಸ್ಟೀಫನ್ ಫ್ಲೆಮಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಜೋ ರೂಟ್ ಅವರನ್ನು ಇಂಗ್ಲೆಂಡ್‌ನ ಟೆಸ್ಟ್ ನಾಯಕರನ್ನಾಗಿ ಮತ್ತೆ ನೇಮಿಸಲಾಗಿದೆ. ರೂಟ್ ಈ ಹಿಂದೆ ಇಂಗ್ಲೆಂಡ್‌ನ ನಾಯಕತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿ ಇಂಗ್ಲೆಂಡ್ 27 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವುದು ಕೂಡ ಒಂದು ದಾಖಲೆಯಾಗಿದೆ(PC-PTI).

2 / 5
ಗುರುವಾರ ಇಸಿಬಿ ಹೊಸ ನಾಯಕ ಮತ್ತು ಮುಖ್ಯ ತರಬೇತುದಾರರನ್ನು ನೇಮಿಸಿರುವ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ. ನ್ಯೂಜಿಲೆಂಡ್ ಪರ 111 ಟೆಸ್ಟ್ ಪಂದ್ಯಗಳನ್ನು ಆಡುವುದರ ಜೊತೆಗೆ, ಫ್ಲೆಮಿಂಗ್ 18 ವರ್ಷಗಳ ಕಾಲ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ತರಬೇತಿ ನೀಡಿದ್ದರು. ಫ್ಲೆಮಿಂಗ್ ಕೊಂಚಿಂಗ್ ಹುದ್ದೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದು ಅವರ ಈ ಅನುಭವವು ಈಗ ಇಂಗ್ಲೆಂಡ್‌ಗೆ ಉಪಯುಕ್ತವಾಗಲಿದೆ(PC-PTI).

3 / 5
ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆದ ನಂತರ ಈ ಬಗ್ಗೆ ಮಾತನಾಡಿರುವ ಸ್ಟೀಫನ್ ಫ್ಲೆಮಿಂಗ್, ‘ಇಂಗ್ಲೆಂಡ್ ಸೇರಲು ನನಗೆ ತುಂಬಾ ಸಂತೋಷವಾಗಿದೆ. ಇದು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಷ್ಠಿತ ಕೋಚಿಂಗ್ ಹುದ್ದೆಗಳಲ್ಲಿ ಒಂದಾಗಿದೆ ಮತ್ತು ಈ ಹುದ್ದೆಯನ್ನು ವಹಿಸಿಕೊಂಡಿರುವುದಕ್ಕೆ ನನಗೆ ಹೆಮ್ಮೆ ಇದೆ. ಆಟಗಾರರೊಂದಿಗೆ ಕೆಲಸ ಮಾಡಲು ಮತ್ತು ಮೆಕಲಮ್ ಮತ್ತು ಸ್ಟೋಕ್ಸ್ ಮಾಡಿದ ಸಾಧನೆಗಳನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ(PC-PTI).

4 / 5
ಇತ್ತ ನಾಲ್ಕು ವರ್ಷಗಳ ನಂತರ ಜೋ ರೂಟ್ ಮತ್ತೊಮ್ಮೆ ಟೆಸ್ಟ್ ನಾಯಕರಾಗಿದ್ದಾರೆ. ಈ ಮೊದಲು ರೂಟ್ 65 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, ಅವುಗಳಲ್ಲಿ 27 ರಲ್ಲಿ ಗೆಲುವು ಸಾಧಿಸಿದ್ದಾರೆ. ರೂಟ್ ಈ ಹಿಂದೆ 2017 ರಿಂದ 2022 ರವರೆಗೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಈಗ, ಅವರು ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡಿದ್ದಾರೆ(PC-PTI).

5 / 5
Follow Us