AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಿತೀಯ ಪಂದ್ಯದ ಕಂಟಕ: ಘಾನಾ ವಿರುದ್ಧ ಗೆಲ್ಲದ ಇಂಗ್ಲೆಂಡ್..!

FIFA World Cup 2026: ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ಫೇವರೇಟ್ ತಂಡಗಳಲ್ಲಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಘಾನಾ ತಂಡ ಬಿಗ್ ಶಾಕ್ ನೀಡಿದೆ. ಅದು ಕೂಡ ಬಲಿಷ್ಠ ಮುನ್ಪಡೆ ಆಟಗಾರರಾದ ಹ್ಯಾರಿ ಕೇನ್, ಜೂಡ್ ಬೆಲ್ಲಿಂಗ್‌ಹ್ಯಾಮ್, ನೋನಿ ಮಡುವೆಕೆ, ಬುಕಾಯೊ ಸಾಕಾ, ನಿಕೊ ಒ'ರೈಲಿ, ಮತ್ತು ಮಾರ್ಕಸ್ ರಾಶ್‌ಫೋರ್ಡ್ ಅವರನ್ನು ಕಟ್ಟಿಹಾಕುವ ಮೂಲಕ ಎಂಬುದು ವಿಶೇಷ.

ದ್ವಿತೀಯ ಪಂದ್ಯದ ಕಂಟಕ: ಘಾನಾ ವಿರುದ್ಧ ಗೆಲ್ಲದ ಇಂಗ್ಲೆಂಡ್..!
England Image Credit source: independent.co.uk
ಝಾಹಿರ್ ಯೂಸುಫ್
|

Updated on: Jun 24, 2026 | 10:32 AM

Share

ಇಂಗ್ಲೆಂಡ್ ಫುಟ್‌ಬಾಲ್ ತಂಡದ ಪಾಲಿನ ಶಾಪ ಎಂದೇ ಪರಿಗಣಿಸಲಾಗಿರುವ “ಎರಡನೇ ಪಂದ್ಯದ ಕಂಟಕ” 2026ರ ಫಿಫಾ ವಿಶ್ವಕಪ್‌ನಲ್ಲೂ ಮುಂದುವರಿದಿದೆ. ಫಾಕ್ಸ್‌ಬರೋದಲ್ಲಿರುವ ‘ಬಾಸ್ಟನ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವು ಘಾನಾ ತಂಡವನ್ನು ಎದುರಿಸಿತ್ತು.

ಬಲಿಷ್ಠ ಕ್ರೊಯೇಷಿಯಾ ವಿರುದ್ಧ ಮೊದಲ ಪಂದ್ಯದಲ್ಲಿ 4-2 ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್ ತಂಡವು ಘಾನಾ ವಿರುದ್ಧ ಕೂಡ ಪ್ರಚಂಡ ಪ್ರದರ್ಶನ ನೀಡಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಯನ್ನು ಘಾನಾ ಡಿಫೆಂಡರ್​ಗಳು ಮೊದಲಾರ್ಧದಲ್ಲೇ ಸುಳ್ಳಾಗಿಸಿದ್ದರು.

ಏಕೆಂದರೆ ಈ ಪಂದ್ಯದಲ್ಲಿ  ಶಿಸ್ತುಬದ್ಧ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಘಾನಾ ಮೊದಲ 45 ನಿಮಿಷಗಳಲ್ಲಿ ಇಂಗ್ಲೆಂಡ್​ ಮುನ್ಪಡೆ ಆಟಗಾರರಿಗೆ ಗೋಲಿನ ಕಡೆಗೆ ಒಂದೂ ನಿಖರವಾದ ಶೂಟ್ ಮಾಡಲು ಅವಕಾಶ ನೀಡಿರಲಿಲ್ಲ.

ಹ್ಯಾರಿ ಕೇನ್, ಜೂಡ್ ಬೆಲ್ಲಿಂಗ್‌ಹ್ಯಾಮ್, ನೋನಿ ಮಡುವೆಕೆ, ಮತ್ತು ಆಂಥೋನಿ ಗಾರ್ಡನ್​ನಂತಹ ಬಲಿಷ್ಠ ಫಾವರ್ಡ್ ಪ್ಲೇಯರ್​ಗಳಿದ್ದರೂ ಇಂಗ್ಲೆಂಡ್​ ತಂಡವು ದ್ವಿತೀಯಾರ್ಧದಲ್ಲೂ ನಿರಾಸೆ ಅನುಭವಿಸಿತು.

ಇನ್ನು ದ್ವಿತೀಯಾರ್ಧದಲ್ಲಿ ಬುಕಾಯೊ ಸಾಕಾ, ನಿಕೊ ಒ’ರೈಲಿ, ಮತ್ತು ಮಾರ್ಕಸ್ ರಾಶ್‌ಫೋರ್ಡ್ ಅವರನ್ನು ಕಣಕ್ಕಿಳಿಸಿದರೂ ಇಂಗ್ಲೆಂಡ್ ತಂಡಕ್ಕೆ ಘಾನಾ ತಂಡ ರಕ್ಷಣಾ ಬೇಲಿಯನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ. ಪರಿಣಾಮ ಪಂದ್ಯವು 0-0 ಅಂತರದಿಂದ ಕೊನೆಗೊಂಡಿತು.

ದ್ವಿತೀಯ ಪಂದ್ಯದ ಕಂಟಕ:

ಇಂಗ್ಲೆಂಡ್ ತಂಡವು ವಿಶ್ವಕಪ್ ಮತ್ತು ಯುರೋ ಕಪ್ ನಂತಹ ಪ್ರಮುಖ ಟೂರ್ನಿಗಳಲ್ಲಿ “ಎರಡನೇ ಗ್ರೂಪ್ ಪಂದ್ಯ”ವನ್ನು ಗೆಲ್ಲಲಾಗದೆ ಪರದಾಡುವುದು ಇದು ಮೊದಲೇನಲ್ಲ. ಈ ಹಿಂದಿನಿಂದಲೂ ಇಂಗ್ಲೆಂಡ್ ಪಾಲಿಗೆ ಇದೊಂದು ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಆಂಗ್ಲರ ಪಡೆಯನ್ನು “ಸೆಕೆಂಡ್ ಗೇಮ್ ಸಿಂಡ್ರೋಮ್” ತಂಡ ಗೇಲಿ ಮಾಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಸತತ 4 ಪ್ರಮುಖ ಟೂರ್ನಿಗಳಲ್ಲಿ ಇಂಗ್ಲೆಂಡ್ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ ಎಂಬುದು.

  • 1998ರ ವಿಶ್ವಕಪ್: ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟುನೀಶಿಯಾ (Tunisia) ವಿರುದ್ಧ 2-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ದುರ್ಬಲ ರೊಮೇನಿಯಾ ವಿರುದ್ಧ 2-1 ಅಂತರದಿಂದ ಸೋತಿದ್ದರು.
  • 2010ರ ವಿಶ್ವಕಪ್: ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿದ್ದ ಇಂಗ್ಲೆಂಡ್, ದ್ವಿತೀಯ ಪಂದ್ಯದಲ್ಲಿ ದುರ್ಬಲ ಅಲ್ಜೀರಿಯಾ ವಿರುದ್ಧ (0-0) ಗೆಲ್ಲಲು ವಿಫಲರಾಗಿದ್ದರು.
  • 2014ರ ವಿಶ್ವಕಪ್: ಮೊದಲ ಪಂದ್ಯದಲ್ಲಿ ಬಲಿಷ್ಠ ಇಟಲಿ ವಿರುದ್ಧ 2-1 ಗೋಲುಗಳಿಂದ ಸೋಲು ಅನುಭವಿಸಿದ್ದ ಇಂಗ್ಲೆಂಡ್, ದ್ವಿತೀಯ ಪಂದ್ಯದಲ್ಲಿ  ಉರುಗ್ವೆ ವಿರುದ್ಧ 2-1 ಅಂತರದಿಂದ ಪರಾಜಯಗೊಂಡಿದ್ದರು.
  • 2021ರ ಯುರೋ ಕಪ್: ಮೊದಲ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಸೋಲಿಸಿದ್ದ ಇಂಗ್ಲೆಂಡ್, ಎರಡನೇ ಪಂದ್ಯದಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧ 0-0 ಡ್ರಾ ಮಾಡಿಕೊಂಡಿತ್ತು.
  • 2022ರ ಫಿಫಾ ವಿಶ್ವಕಪ್: ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ 6-2 ರ ಭರ್ಜರಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್, ಎರಡನೇ ಪಂದ್ಯದಲ್ಲಿ ಅಮೆರಿಕ  ವಿರುದ್ಧ 0-0 ನೀರಸ ಡ್ರಾ ಸಾಧಿಸಿತ್ತು.
  • 2024ರ ಯುರೋ ಕಪ್: ಮೊದಲ ಪಂದ್ಯದಲ್ಲಿ ಸೆರ್ಬಿಯಾವನ್ನು ಸೋಲಿಸಿದರೂ, ಎರಡನೇ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 1-1 ರಿಂದ ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿತ್ತು.
  • 2026ರ ಫಿಫಾ ವಿಶ್ವಕಪ್: ಕ್ರೊಯೇಷಿಯಾ ವಿರುದ್ಧ 4-2 ರ ಅದ್ಭುತ ಗೆಲುವು ಸಾಧಿಸಿದ ಇಂಗ್ಲೆಂಡ್, ಘಾನಾ ವಿರುದ್ಧ ಮತ್ತೆ 0-0 ಡ್ರಾ ಸಾಧಿಸಿದೆ.

ಇದನ್ನೂ ಓದಿ: IPL 2027: ಬಿಗ್ ಟ್ರೇಡ್… ಇಬ್ಬರು ಆಟಗಾರರ ತಂಡಗಳು ಅದಲು-ಬದಲು

ಹೀಗಾಗಿಯೇ ಇಂಗ್ಲೆಂಡ್​ ತಂಡದ ಈ ಡ್ರಾ ಅನ್ನು ಸ್ಟಾರ್ ಆಟಗಾರ ಜೂಡ್ ಬೆಲ್ಲಿಂಗ್‌ಹ್ಯಾಮ್ ಇದು ನಮ್ಮ ತಂಡಕ್ಕೆ ತಗುಲಿರುವ “ಸೆಕೆಂಡ್ ಗೇಮ್ ಫೀವರ್” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Follow Us
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ