AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಹೃದಯಕ್ಕೆ ಕೊನೆಗೂ ಒಂದು ಗೂಡು ಸಿಕ್ಕಿದೆ: ವರನ ಕೊಲೆಗೂ ಮುನ್ನ ಸಿಯಾಳ ರೊಮ್ಯಾಂಟಿಗ್ ಇನ್​ಸ್ಟಾ ಪೋಸ್ಟ್​

ಸಿಯಾಳ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲಿ ಪ್ರೀತಿ ಕಂಡರೂ, ವಾಸ್ತವದಲ್ಲಿ ನಿಶ್ಚಿತ ವರ ಕೇತನ್ ಹತ್ಯೆಯ ಭೀಕರ ಪ್ಲಾನ್ ಮಾಡಿದ್ದಳು. ಅಕ್ರಮ ಸಂಬಂಧಕ್ಕಾಗಿ ಪ್ರೇಮಿ ಚೇತನ್ ಜೊತೆ ಸೇರಿ ಲೋಹಗಡ್ ಕೋಟೆಯಲ್ಲಿ ಕೇತನ್‌ನನ್ನು ಕೊಲೆ ಮಾಡಿದಳು. ನಕಲಿ ಪಾಸ್‌ಪೋರ್ಟ್ ನಾಟಕ, ಹಾವಿನ ನಾಟಕವಾಡಿದರೂ ಕೊನೆಗೆ ಸತ್ಯ ಬಯಲಾಗಿದೆ. 17 ಕೋಟಿ ವೆಚ್ಚದ ಅದ್ದೂರಿ ಮದುವೆ ಸಿದ್ಧತೆ ನಡೆಯುತ್ತಿದ್ದಾಗ ನಡೆದ ಈ ಘಟನೆ ಸಮಾಜವನ್ನೇ ಬೆಚ್ಚಿಬೀಳಿಸಿದೆ.

ನನ್ನ ಹೃದಯಕ್ಕೆ ಕೊನೆಗೂ ಒಂದು ಗೂಡು ಸಿಕ್ಕಿದೆ: ವರನ ಕೊಲೆಗೂ ಮುನ್ನ ಸಿಯಾಳ ರೊಮ್ಯಾಂಟಿಗ್ ಇನ್​ಸ್ಟಾ ಪೋಸ್ಟ್​
ಕೇತನ್-ಸಿಯಾ
ನಯನಾ ರಾಜೀವ್
|

Updated on:Jun 24, 2026 | 10:13 AM

Share

ಪುಣೆ, ಜೂನ್ 24: ನನ್ನ ಹೃದಯ(Heart)ಕ್ಕೆ ಕೊನೆಗೂ ಒಂದು ಗೂಡು ಸಿಕ್ಕಿ ಸಿಕ್ಕಿದೆ ಎಂದು ಸಿಯಾ ತನ್ನ ನಿಶ್ಚಿತ ವರನನ್ನು ಕೊಲ್ಲುವುದಕ್ಕೂ ಮುನ್ನ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಅಪ್​ಲೋಡ್ ಮಾಡಿದ್ದಳು. ತನ್ನ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಟ್ಯಾಗ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಳು. ಜೋಡಿಯ ಇನ್‌ಸ್ಟಾಗ್ರಾಂ ಪ್ರೊಫೈಲ್ ತುಂಬಾ ಸುಂದರ ಚಿತ್ರಗಳೇ ತುಂಬಿದ್ದವು. ಆದರೆ, ಈ ಸುಂದರ ಪೋಸ್ಟ್‌ಗಳ ಹಿಂದೆ ತನ್ನ ಭಾವಿ ಪತಿಯನ್ನೇ ಮುಗಿಸಲು ಆಕೆ ಭೀಕರ ಸ್ಕೆಚ್ ಹಾಕುತ್ತಿದ್ದಳು ಎಂಬ ಸತ್ಯ ಈಗ ಬಯಲಾಗಿದೆ.

ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥವಾಗಿತ್ತು, ಮೇ ತಿಂಗಳ ಪೋಸ್ಟ್ ಒಂದರಲ್ಲಿ ಕೇತನ್ ತನಗೆ ಹೂವು ನೀಡುತ್ತಿರುವುದನ್ನು ಹಂಚಿಕೊಂಡಿದ್ದಳು. ಮೇ 19 ರಂದು ತನ್ನ ಹುಟ್ಟುಹಬ್ಬದ ಕೌಂಟ್‌ಡೌನ್‌ ಎಂದು ಬರೆದು ಕೇತನ್ ಜೊತೆ ರೊಮ್ಯಾಂಟಿಕ್ ಹಾಡಿಗೆ ನೃತ್ಯ ಮಾಡುವ ವಿಡಿಯೋ ಅಪ್‌ಲೋಡ್ ಮಾಡಿದ್ದಳು.

ಆದರೆ, ಈ ಪೋಸ್ಟ್ ಹಾಕಿದ ಕೇವಲ ಒಂದು ತಿಂಗಳಲ್ಲೇ ಅಂದರೆ ಜೂನ್ 18 ರಂದು ತನ್ನ ಹುಟ್ಟುಹಬ್ಬಕ್ಕೆ ಸರಿಯಾಗಿ ಒಂದು ದಿನ ಮುಂಚೆ ಅದೇ ಭಾವಿ ಪತಿಯನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಕೇತನ್‌ನನ್ನು ಮದುವೆಯಾಗಲು ಸಿಯಾಳಿಗೆ ಇಷ್ಟವಿರಲಿಲ್ಲ. ಆಕೆಗೆ ತನ್ನ ಬಿಸಿನೆಸ್ ಪಾರ್ಟ್‌ನರ್, ಒಣಹಣ್ಣುಗಳ ವ್ಯಾಪಾರಿ ಚೇತನ್ ಚೌಧರಿ ಜೊತೆ ಅಕ್ರಮ ಸಂಬಂಧವಿತ್ತು.

238 ಗಂಟೆಗಳ ಕಾಲ ಸಂಚು 

ಪೊಲೀಸರ ತನಿಖೆಯ ಪ್ರಕಾರ, ಸಿಯಾ ಮತ್ತು ಚೇತನ್ ಕಳೆದ 7 ತಿಂಗಳಲ್ಲಿ ಬರೋಬ್ಬರಿ 2,004 ಬಾರಿ ಫೋನ್‌ನಲ್ಲಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಚು ರೂಪಿಸಿದ್ದಾರೆ. ಇಬ್ಬರ ಕುಟುಂಬಗಳು ಮದುವೆ ಸಿದ್ಧತೆ ಮಾಡುತ್ತಿದ್ದಾಗಲೇ ಇವರಿಬ್ಬರು ಕೇತನ್‌ನನ್ನು ಕೊಲ್ಲಲು ಸ್ಕೆಚ್ ಹಾಕುತ್ತಿದ್ದರು.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿರುವ ಹೇಳಿಕೆಯ ಪ್ರಕಾರ, ಸಿಯಾ ಹಂತ ಹಂತವಾಗಿ ಕೇತನ್‌ನನ್ನು ಮುಗಿಸಲು ಪ್ಲಾನ್ ಮಾಡಿದ್ದಳು. ಜೂನ್ 6 ರಂದು ಈ ಜೋಡಿ ಪ್ರಿ-ವೆಡ್ಡಿಂಗ್ ಶೂಟಿಂಗ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ಹೋಗಬೇಕಿತ್ತು. ಕಾರಿನಲ್ಲಿ ಹೋಗುವಾಗ ಎಲ್ಲರ ಪಾಸ್‌ಪೋರ್ಟ್‌ಗಳನ್ನು ಒಂದೇ ಪೌಚ್‌ನಲ್ಲಿ ಇಡಲಾಗಿತ್ತು. ದಾರಿಯಲ್ಲಿ ಫುಡ್ ಮಾಲ್ ಹತ್ತಿರ ನಿಲ್ಲಿಸಿದಾಗ ಸಿಯಾ ತನ್ನ ಮೊಬೈಲ್ ಮರೆತಿದ್ದೇನೆ ಎಂದು ಹೇಳಿ ಕಾರಿಗೆ ಒಂಟಿಯಾಗಿ ಮರಳಿದ್ದಳು. ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್ ಪಾಸ್‌ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು, ಇದರಿಂದ ಪ್ರವಾಸ ರದ್ದಾಗಿ ಅವರು ಮನೆಗೆ ಮರಳಬೇಕಾಯಿತು.

ಪ್ಲಾನ್ ಬಿ ವಿಫಲ: ಹಾವಿನ ನಾಟಕವಾಡಿದ್ದ ಕಿಲ್ಲರ್ ಜೂನ್ 14 ರಂದು ಸಿಯಾ ಜಗಳವಾಡಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದಳು. ಅಲ್ಲಿ ಆತನನ್ನು ಮೊದಲ ಬಾರಿಗೆ ಬೆಟ್ಟದಿಂದ ಕೆಳಗೆ ತಳ್ಳಿದ್ದಳು. ಆದರೆ ಕೇತನ್ ಅದೃಷ್ಟವಶಾತ್ ಪೊದೆಯೊಂದನ್ನು ಹಿಡಿದು ಬದುಕುಳಿದಿದ್ದರು. ತಕ್ಷಣವೇ ಸಿಯಾ, ಹಾವು ಹಾವು ಎಂದು ಜೋರಾಗಿ ಕಿರುಚುತ್ತಾ ಓಡಿಹೋಗಿ ಆತನನ್ನು ಅಪ್ಪಿಕೊಂಡು ಗೊಂದಲ ಸೃಷ್ಟಿಸಿ ತನ್ನ ತಪ್ಪು ಮುಚ್ಚಿಹಾಕಿದ್ದಳು.

ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆತಂಡಿದ್ದಳು. ಈ ಬಾರಿ ಆಕೆಯ ಪ್ರಿಯಕರ ಚೇತನ್ ಚೌಧರಿ ತನ್ನ ಗುರುತು ಸಿಗದಿರಲು ಹೂಡಿ ಧರಿಸಿ ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸುತ್ತಾ ಇವರನ್ನು ಹಿಂಬಾಲಿಸಿದ್ದಾನೆ.

ಕೋಟೆಯ ತುದಿಗೆ ತಲುಪಿದಾಗ ಇಬ್ಬರೂ ಸೇರಿ ಕೇತನ್‌ನನ್ನು ಕಮರಿಗೆ ತಳ್ಳಿದ್ದಾರೆ. ಆರಂಭದಲ್ಲಿ ಫೋಟೋ ತೆಗೆಯುವಾಗ ಬಿದ್ದಿದ್ದಾನೆ ಎಂದು ಸಿಯಾ ಕಥೆ ಕಟ್ಟಿದ್ದಳು. ಆದರೆ ಆಕೆಯ ಮುಖದಲ್ಲಿ ಯಾವುದೇ ದುಃಖ ಇಲ್ಲದ್ದನ್ನು ಕಂಡು ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ, ನವೆಂಬರ್‌ನಲ್ಲಿ ನಡೆಯಬೇಕಿದ್ದ ಈ ಅದ್ದೂರಿ ಮದುವೆಗಾಗಿ ಜೈಪುರದಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯನ್ನು ಬುಕ್ ಮಾಡಲಾಗಿತ್ತು. ಅತಿಥಿಗಳನ್ನು ಕರೆದೊಯ್ಯಲು ಎರಡು ವಿಶೇಷ ಖಾಸಗಿ ಜೆಟ್ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎರಡೂ ಕುಟುಂಬಗಳು ಸಕಲ ಸಿದ್ಧತೆಯಲ್ಲಿದ್ದಾಗ ನಡೆದಿರುವ ಈ ಭೀಕರ ಹತ್ಯೆ ಮತ್ತು ಇನ್‌ಸ್ಟಾಗ್ರಾಮ್ ಸ್ಟಾರ್ ಯುವತಿಯ ಕ್ರೂರ ಮುಖ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಸದ್ಯ ಸಿಯಾ ಮತ್ತು ಚೇತನ್ 7 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Wed, 24 June 26

Follow Us
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ