ಭಾರತದ ಮಹಿಳಾ ಕ್ರಿಕೆಟ್​ ತಂಡದ ಕೋಚ್ ಹುದ್ದೆಗೆ ಮರು ಆಯ್ಕೆಗೊಂಡ ರಮೇಶ್ ಪವಾರ್

ಈ ಹಿಂದೆ ಪವಾರ್ ಅವರನ್ನು 2018 ರಲ್ಲಿ ಭಾರತೀಯ ತಂಡದ ಕೋಚ್ ಆಗಿ ನೇಮಿಸಲಾಯಿತು. ಆದರೆ, ಆ ಸಮಯದಲ್ಲಿ ಅವರ ಮತ್ತು ತಂಡದ ನಾಯಕಿ ಮಿಥಾಲಿ ರಾಜ್ ನಡುವೆ ವಿವಾದ ಉಂಟಾಗಿತ್ತು.

ಭಾರತದ ಮಹಿಳಾ ಕ್ರಿಕೆಟ್​ ತಂಡದ ಕೋಚ್ ಹುದ್ದೆಗೆ ಮರು ಆಯ್ಕೆಗೊಂಡ ರಮೇಶ್ ಪವಾರ್
ರಮೇಶ್ ಪವಾರ್
Follow us
ಪೃಥ್ವಿಶಂಕರ
|

Updated on: May 13, 2021 | 7:08 PM

ಭಾರತದ ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಮರಳಿದ್ದಾರೆ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರಿಕೆಟ್ ಸಲಹಾ ಸಮಿತಿಯು ಪವಾರ್ ಅವರ ಹೆಸರನ್ನು ಶಿಫಾರಸು ಮಾಡಿತು, ಅದನ್ನು ಮಂಡಳಿಯು ಅಂಗೀಕರಿಸಿತು. ಎರಡೂವರೆ ವರ್ಷಗಳ ಹಿಂದೆ ವಿವಾದದ ನಂತರ ಪವಾರ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಅವರ ಸ್ಥಾನದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಡಬ್ಲ್ಯೂ.ವಿ.ರಾಮನ್ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಯಿತು. ರಾಮನ್ ಅವರ ಅಧಿಕಾರಾವಧಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊನೆಗೊಂಡಿತು ಮತ್ತು ಅವರು ಮತ್ತೊಮ್ಮೆ ಈ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆದರೆ, ಮದನ್ ಲಾಲ್ ಮತ್ತು ಸುಲಕ್ಷನ ನಾಯಕ್ ಅವರ ಸಿಎಸಿ ಕಮಿಟಿ ಪವಾರ್​ ಅವರನ್ನು ತಮ್ಮ ಸ್ಥಾನಕ್ಕೆ ಮರಳುವಂತೆ ಸೂಚನೆ ನೀಡಿದೆ.

ರಾಮನ್ ಅವರ ಅಧಿಕಾರಾವಧಿ ಮುಗಿದಿದ್ದರು ಸಹ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ದೇಶೀಯ ಏಕದಿನ ಮತ್ತು ಟಿ 20 ಸರಣಿಯಲ್ಲಿ ಅವರನ್ನು ಉಳಿಸಿಕೊಳ್ಳಲಾಯಿತು. ಇದರ ನಂತರ ಬಿಸಿಸಿಐ ಕಳೆದ ತಿಂಗಳು ಏಪ್ರಿಲ್ 16 ರಂದು ಭಾರತೀಯ ತಂಡದ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕಾಗಿ 35 ಅರ್ಜಿಗಳು ಮಂಡಳಿಗೆ ಬಂದಿದ್ದು, ಅದರಲ್ಲಿ ಕೇವಲ 4 ಮಹಿಳಾ ಮತ್ತು 4 ಪುರುಷ ಮಾಜಿ ಕ್ರಿಕೆಟಿಗರನ್ನು ಮಾತ್ರ ಇರಿಸಲಾಗಿದೆ. ಮಹಿಳಾ ಕ್ರಿಕೆಟಿಗರಲ್ಲಿ ಮಾಜಿ ಅನುಭವಿ ಕ್ರಿಕೆಟಿಗರಾದ ಹೆಮಲತಾ ಕಲಾ ಮತ್ತು ಜಯ ಶರ್ಮಾ ಅವರಂತಹ ಹೆಸರುಗಳು ಇದ್ದವು.

ಎರಡೂವರೆ ವರ್ಷಗಳ ನಂತರ ಹುದ್ದೆಗೆ ವಾಪಸ್ ಸಿಎಸಿ ತನ್ನ ಶಿಫಾರಸನ್ನು ಬಿಸಿಸಿಐಗೆ ಕಳುಹಿಸಿತ್ತು. ಮಂಡಳಿಯು ಈ ಶಿಫಾರಸನ್ನು ಅಂಗೀಕರಿಸಿದ್ದು ಪವಾರ್ ಸುಮಾರು ಎರಡೂವರೆ ವರ್ಷಗಳ ನಂತರ ಮತ್ತೆ ತಂಡದ ಕೋಚ್ ಹುದ್ದೆಗೆ ಮರಳುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಪವಾರ್ ಅವರ ನೇಮಕವನ್ನು ಬಿಸಿಸಿಐ ಪ್ರಕಟಿಸಿದೆ. ಈ ಹಿಂದೆ ಪವಾರ್ ಅವರನ್ನು 2018 ರಲ್ಲಿ ಭಾರತೀಯ ತಂಡದ ಕೋಚ್ ಆಗಿ ನೇಮಿಸಲಾಯಿತು. ಆದರೆ, ಆ ಸಮಯದಲ್ಲಿ ಅವರ ಮತ್ತು ತಂಡದ ನಾಯಕಿ ಮಿಥಾಲಿ ರಾಜ್ ನಡುವೆ ವಿವಾದ ಉಂಟಾಗಿತ್ತು.

ಮಿಥಾಲಿ-ಪವಾರ್ ವಿವಾದ ಪವಾರ್ ತನ್ನನ್ನು ಅವಮಾನಿಸಿದ್ದಾರೆ ಎಂದು ಮಿಥಾಲಿ ಆರೋಪಿಸಿದರು. ಪವಾರ್ ಅವರೊಂದಿಗೆ, ಭಾರತ ತಂಡವು 2018 ಟಿ 20 ವಿಶ್ವಕಪ್‌ನ ಸೆಮಿಫೈನಲ್ ತಲುಪಿತು. ಸೆಮಿಫೈನಲ್ ಪಂದ್ಯದಲ್ಲಿ ಮಿಥಾಲಿಯನ್ನು ಆಡುವ ಹನ್ನೊಂದರಿಂದ ಕೈಬಿಡಲಾಯಿತು, ನಂತರ ವಿವಾದ ಉಂಟಾಯಿತು ಮತ್ತು ಮಿಥಾಲಿ ಅವರು ಬಿಸಿಸಿಐಗೆ ಪತ್ರ ಬರೆದಿದ್ದರು. ಪವಾರ್ ಕೂಡ ಪ್ರತಿಕ್ರಿಯಿಸಿದ್ದು, ತಂಡದ ಯೋಜನೆಯ ಪ್ರಕಾರ ಮತ್ತು ಟಿ 20 ಆಟದ ಬೇಡಿಕೆಯ ಪ್ರಕಾರ ಮಿಥಾಲಿ ಆಡುತ್ತಿಲ್ಲ, ಇದರಿಂದಾಗಿ ಅವರನ್ನು ತೆಗೆದುಹಾಕಲಾಗಿದೆ. ವಿವಾದದ ನಂತರ ಪವರ್ ಅವರನ್ನು ತಂಡದಿಂದ ಕೈಬಿಡಲಾಯಿತು ಮತ್ತು ರಾಮನ್ ಅವರನ್ನು ಕೋಚ್ ಆಗಿ ನೇಮಿಸಲಾಯಿತು.

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!