ನಾಯಕನಾಗಿ ಪಂತ್ ಹಚ್ಚಿದ ಕಿಡಿ ಮುಂದೆ ಜ್ವಾಲೆಯಾಗಿ ಪ್ರಜ್ವಲಿಸಲಿದೆ: ಸುನಿಲ್ ಗವಾಸ್ಕರ್
ಗವಾಸ್ಕರ್ ಅವರು ಪಂತ್ ಅವರನ್ನು ಭವಿಷ್ಯದ ನಾಯಕ ಎಂದರು. ಅಲ್ಲದೆ ಪಂತ್ ವೇಗವಾಗಿ ಕಲಿಯುತ್ತಾರೆ ಮತ್ತು ಕಷ್ಟಕರ ಸಂದರ್ಭಗಳನ್ನು ಸಹ ಜಯಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದರು.
ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಯುವ ಮತ್ತು ಹೊಸ ಆಟಗಾರರ ಆಧಾರದ ಮೇಲೆ ಯಶಸ್ಸನ್ನು ಸಾಧಿಸಿದೆ. ಈ ಆಟಗಾರರು ವಿಭಿನ್ನ ಸಂದರ್ಭಗಳಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ಕಷ್ಟಕರವಾದ ಸಮಯದಲ್ಲಿ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಆಟಗಾರರಲ್ಲಿ ಒಬ್ಬರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್. ಪಂತ್ ತಂಡದಲ್ಲಿ ಹೊಸಬನೇನಲ್ಲ. ಆದರೆ ವಯಸ್ಸಿನಲ್ಲಿ ಇನ್ನೂ ಚಿಕ್ಕವರಾಗಿದ್ದಾರೆ ಮತ್ತು ಈ ವರ್ಷ ಟೀಮ್ ಇಂಡಿಯಾದಲ್ಲಿ ಅತ್ಯಂತ ವೇಗವಾಗಿ ಹೆಸರು ಮಾಡುತ್ತಿರುವ ಆಟಗಾರರಾಗಿದ್ದಾರೆ.
ಇತ್ತೀಚಿನ ಐಪಿಎಲ್ 2021 ಆವೃತ್ತಿಯಲ್ಲಿ ದೆಹಲಿ ತಂಡದ ನಾಯಕತ್ವದೊಂದಿಗೆ ಅವರು ಹೊಸ ಜವಾಬ್ದಾರಿಯನ್ನು ವಹಿಸಿಕೊಂಡರು. ಪಂದ್ಯಾವಳಿಯ ಮಧ್ಯದಲ್ಲಿ ಮುಂದೂಡಲ್ಪಟ್ಟ ಕಾರಣ, ಅವರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಹೆಚ್ಚು ಸಮಯ ಸಿಗಲಿಲ್ಲ, ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಪಂತ್ ಆಟದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಗೆಲುವಿನ ವೀರರಲ್ಲಿ ಒಬ್ಬರಾಗಿದ್ದ ರಿಷಭ್ ಪಂತ್ ಅವರಿಗೆ ಕಳೆದ 5 ತಿಂಗಳು ಅದ್ಭುತವಾಗಿದೆ. ಅವರು ಇಂಗ್ಲೆಂಡ್ ವಿರುದ್ಧದ ದೇಶೀಯ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾತ್ರವಲ್ಲ, ವಿಕೆಟ್ ಕೀಪಿಂಗ್‌ನಲ್ಲಿ ಅದ್ಭುತ ಸುಧಾರಣೆ ಕಂಡಿದ್ದಾರೆ. ಅವರು ಏಕದಿನ ಮತ್ತು ಟಿ 20 ತಂಡದಲ್ಲೂ ಸ್ಥಾನ ಪಡೆಯಲು ಇದೇ ಕಾರಣ.
ಪಂತ್ ಹಚ್ಚಿರುವ ಕಿಡಿ, ದೊಡ್ಡ ಬೆಂಕಿಯಾಗಬಹುದು ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕನಾಗಿರುವ ರಿಷಭ್ ಪಂತ್ ನೇತೃತ್ವದ ದೆಹಲಿ ತಂಡವು ಮೇ 4 ರಂದು ಪಂದ್ಯಾವಳಿಯನ್ನು ಮುಂದೂಡುವವರೆಗೂ 8 ಪಂದ್ಯಗಳಲ್ಲಿ 6 ಜಯಗಳಿಸಿ ಪಾಯಿಂಟ್ ಟೇಬಲ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಈ ಅವಧಿಯಲ್ಲಿ, ಪಂತ್ ನಾಯಕತ್ವದಿಂದ ಗವಾಸ್ಕರ್ ಬಹಳ ಪ್ರಭಾವಿತರಾಗಿ ಪಂತ್ ಬಗ್ಗೆ ಮೆಚ್ಚುಗೆಯ ಮಾತಾನಾಡಿದ್ದಾರೆ.
ಕಷ್ಟಕರ ಸಂದರ್ಭಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಗವಾಸ್ಕರ್ ಅವರು ಪಂತ್ ಅವರನ್ನು ಭವಿಷ್ಯದ ನಾಯಕ ಎಂದರು. ಅಲ್ಲದೆ ಪಂತ್ ವೇಗವಾಗಿ ಕಲಿಯುತ್ತಾರೆ ಮತ್ತು ಕಷ್ಟಕರ ಸಂದರ್ಭಗಳನ್ನು ಸಹ ಜಯಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದರು. ಆತನೋರ್ವ ಭವಿಷ್ಯದ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಣದಿಂದಾಗಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇದೆ ಎಂದು ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಪಂತ್ ಅವರ ಐಪಿಎಲ್ ಹೇಗಿತ್ತು? ಆದಾಗ್ಯೂ, ಪಂತ್‌ಗೆ, ಪಂದ್ಯಾವಳಿಯ ಆರಂಭಿಕ ಪಂದ್ಯಗಳು ಉತ್ತಮವಾಗಿರಲಿಲ್ಲ, ಆದರೆ ನಂತರ ರನ್ಗಳು ಅವರ ಬ್ಯಾಟ್‌ನಿಂದ ಹೊರಬರಲು ಪ್ರಾರಂಭಿಸಿದವು. ಈ ಸಮಯದಲ್ಲಿ ಅವರು 2 ಅರ್ಧಶತಕಗಳನ್ನು ಗಳಿಸಿದರು. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ ತಂಡದ ಉನ್ನತ ಕ್ರಮಾಂಕದ ಅತ್ಯುತ್ತಮ ಪ್ರದರ್ಶನದಿಂದಾಗಿ, ಅವರು ಹೆಚ್ಚು ತಡವಾಗಿ ಬ್ಯಾಟಿಂಗ್ ಮಾಡುವ ಅವಕಾಶಗಳನ್ನು ಸಹ ಪಡೆದರು. ಈ 8 ಪಂದ್ಯಗಳಲ್ಲಿ 131 ಸ್ಟ್ರೈಕ್ ದರದಲ್ಲಿ 213 ರನ್ ಗಳಿಸಿದ ಅವರು 4 ಕ್ಯಾಚ್ ಮತ್ತು 2 ಸ್ಟಂಪಿಂಗ್ ಮಾಡಿದ್ದಾರೆ.