AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಪೂಜೆ ನಿನಗಾಗಿ ಗೆಳೆಯ: ಸಿದ್ಧಿವಿನಾಯಕನ ಮುಂದೆ ಒಂದೇ ಶಾಲು ಹಂಚಿಕೊಂಡ ಪಾಂಡ್ಯ-ಮಾಹಿಕಾ

ಹಾರ್ದಿಕ್ ಪಾಂಡ್ಯ ಮತ್ತು ನಟಿ ಮಾಹಿಕಾ ಶರ್ಮಾ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸೆಮಿಫೈನಲ್‌ಗೂ ಮುನ್ನ ಆಶೀರ್ವಾದ ಪಡೆದ ಈ ಜೋಡಿಯ ಪೂಜೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವರಿಬ್ಬರ ಡೇಟಿಂಗ್ ವದಂತಿಗಳು ಈಗಾಗಲೇ ಹರಿದಾಡುತ್ತಿದ್ದು, ದೇವಸ್ಥಾನದಲ್ಲಿ ಒಂದೇ ಶಾಲನ್ನು ಹಂಚಿಕೊಂಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಈ ಪೂಜೆ ನಿನಗಾಗಿ ಗೆಳೆಯ: ಸಿದ್ಧಿವಿನಾಯಕನ ಮುಂದೆ ಒಂದೇ ಶಾಲು ಹಂಚಿಕೊಂಡ ಪಾಂಡ್ಯ-ಮಾಹಿಕಾ
ಹಾರ್ದಿಕ್ ಪಾಂಡ್ಯ ಮಾಹಿಕಾ
ಅಕ್ಷಯ್​ ಪಲ್ಲಮಜಲು​​
|

Updated on:Mar 27, 2026 | 2:21 PM

Share

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ, ನಟಿ ಮಾಹಿಕಾ ಶರ್ಮಾ ಅವರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಈ ಜೋಡಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಮತ್ತು ಮಾಹಿಕಾ ಒಂದೇ ಶಾಲನ್ನು ಹಂಚಿಕೊಂಡಿರುವುದು ನೆರೆದಿದ್ದವರ ಗಮನ ಸೆಳೆಯಿತು. ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಈ ಜೋಡಿಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

ಹಾರ್ದಿಕ್ ಸಾಂಪ್ರದಾಯಿಕ ಕುರ್ತಾ ಧರಿಸಿದ್ದರೆ, ಮಾಹಿಕಾ ಶರ್ಮಾ ಸಲ್ವಾರ್ ಸೂಟ್‌ನಲ್ಲಿ ಕಂಗೊಳಿಸಿದರು. ಭಕ್ತರೊಂದಿಗೆ ಹಾರ್ದಿಕ್ ಹಸ್ತಲಾಘವ ಮಾಡಿ ಆತ್ಮೀಯವಾಗಿ ಮಾತನಾಡಿದರು. ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಮತ್ತು ಮಾಹಿಕಾ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ಮಾಹಿಕಾ ಕೈಬೆರಳಲ್ಲಿ ವಜ್ರದ ಉಂಗುರ ಕಂಡಿದ್ದರಿಂದ ಇವರಿಬ್ಬರ ನಿಶ್ಚಿತಾರ್ಥವಾಗಿದೆಯೇ ಎಂಬ ಚರ್ಚೆಯೂ ನಡೆದಿತ್ತು. ಆದರೆ ಮಾಹಿಕಾ ಅದನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ನಿನ್ನದು ದೊಡ್ಡ ಮನಸ್ಸು ಕಣಯ್ಯ: ಕೊಟ್ಟ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ

ಇಲ್ಲಿದೆ ನೋಡಿ ಸ್ಟೋರಿ:

ವಿಶೇಷವೆಂದರೆ, ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ 34ನೇ ಹುಟ್ಟುಹಬ್ಬದಂದೇ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಮಾಹಿಕಾ ಶರ್ಮಾ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಮಾಡೆಲ್ ಮಾಹಿಕಾ ಅವರು ಅಸ್ಸಾಂನವರು. ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು ಮತ್ತು ‘ಮಿಸ್ ಟೀನ್ ನಾರ್ತ್ ಈಸ್ಟ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Fri, 27 March 26

Follow Us