Chess World Cup 2023: ಎಲ್ಲದಕ್ಕೂ ಸಿದ್ಧನಾಗಿಯೇ ಬರುತ್ತೇನೆ: ಪ್ರಜ್ಞಾನಂದ

Chess World Cup 2023: ಫೈನಲ್ ಪಂದ್ಯದ 2 ಕ್ಲಾಸಿಕ್ ಗೇಮ್​ಗಳಲ್ಲೂ ಫಲಿತಾಂಶ ಮೂಡಿಬರದ ಕಾರಣ ಇದೀಗ ಪಂದ್ಯವನ್ನು ಟೈಬ್ರೇಕ್ ಸುತ್ತಿನತ್ತ ಕೊಂಡೊಯ್ಯಲಾಗಿದೆ. ಇಲ್ಲಿ ಇಬ್ಬರು ಆಟಗಾರರು 10 ನಿಮಿಷಗಳ ಎರಡು ರ್ಯಾಪಿಡ್ ಗೇಮ್​ಗಳನ್ನು ಆಡಲಿದ್ದಾರೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್ಯಾಪಿಡ್​ ಗೇಮ್​ಗಳನ್ನು ನೀಡಲಾಗುತ್ತದೆ.

Chess World Cup 2023: ಎಲ್ಲದಕ್ಕೂ ಸಿದ್ಧನಾಗಿಯೇ ಬರುತ್ತೇನೆ: ಪ್ರಜ್ಞಾನಂದ
R Praggnanandhaa
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 23, 2023 | 9:09 PM

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನ ಫೈನಲ್ ಪಂದ್ಯದ ಮೊದಲೆರಡು ಗೇಮ್​ಗಳನ್ನು ಆರ್​. ಪ್ರಜ್ಞಾನಂದ (R Praggnanandhaa) ಮತ್ತು ಮ್ಯಾಗ್ನಸ್ ಕಾರ್ಲ್‌ಸೆನ್ ಡ್ರಾನಲ್ಲಿ ಅಂತ್ಯಗೊಳಿಸಿದ್ದಾರೆ. ಇದರೊಂದಿಗೆ ಕ್ಲಾಸಿಕ್ ಗೇಮ್​ 1-1 ಅಂತರದಿಂದ ಸಮಬಲವಾಗಿದ್ದು, ಹೀಗಾಗಿ ಗುರುವಾರ ಟೈಬ್ರೇಕರ್​ ಪಂದ್ಯದ ಮೂಲಕ ಚಾಂಪಿಯನ್ ಯಾರೆಂಬುದನ್ನು ನಿರ್ಧರಿಸಲಾಗುತ್ತದೆ.

ಬುಧವಾರ ನಡೆದ 2ನೇ ಗೇಮ್​ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಹಾಗೂ ಪ್ರಜ್ಞಾನಂದ ಆರಂಭದಿಂದಲೇ ಸಮಬಲ ಸಾಧಿಸಿದ್ದರು. ಅಲ್ಲದೆ ಅಂತಿಮವಾಗಿ 30 ನಡೆಗಳೊಂದಿಗೆ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದರು. ಇಲ್ಲಿ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ಮ್ಯಾಗ್ನಸ್ ಕಾರ್ಲ್‌ಸೆನ್ ಹೆಚ್ಚಿನ ಆಸಕ್ತಿ ತೋರಿದ್ದರು ಎಂಬುದು ಉಲ್ಲೇಖಾರ್ಹ.

ಈ ಪಂದ್ಯದ ಬಳಿಕ ಮಾತನಾಡಿದ ಪ್ರಜ್ಞಾನಂದ, ಕಾರ್ಲ್​ಸೆನ್ ಇಂದು ಬೇಗನೆ ಡ್ರಾ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ. ಆದರೆ ಕೆಲ ನಡೆಗಳ ಬಳಿಕ ಅವರು ಡ್ರಾ ಮಾಡಿಕೊಳ್ಳುತ್ತಾರೆಂಬುದು ನಾನು ಅರಿತುಕೊಂಡೆ. ನಾನು ಕೂಡ ಡ್ರಾ ಆಗಬೇಕೆಂದು ಬಯಸಿದ್ದೆ. ಏಕೆಂದರೆ ನಾನು ಸಹ ಆಯಾಸಗೊಂಡಿದ್ದೆ ಎಂದು ತಿಳಿಸಿದರು.

ನಾಳೆ (ಬುಧವಾರ) ನಾನು ಫ್ರೆಶ್ ಮೈಂಡ್​ನೊಂದಿಗೆ ಬರಲು ಬಯಸುತ್ತೇನೆ. ಇದಕ್ಕಾಗಿ ಇಂದು ಉತ್ತಮ ವಿಶ್ರಾಂತಿ ಪಡೆಯಬೇಕಿದೆ. ಏಕೆಂದರೆ ನಾಳೆ ಸಾಕಷ್ಟು ಟೈಬ್ರೇಕ್‌ಗಳನ್ನು ಆಡಲಿದ್ದೇನೆ. ಇಲ್ಲಿ ಹಲವು ಸುತ್ತುಗಳ ಪಂದ್ಯ ನಡೆಯಬಹುದು ಅಥವಾ ಕಡಿಮೆ ಆಟಗಳನ್ನು ಆಡಬಹುದು. ಹೀಗಾಗಿ ಎಲ್ಲದಕ್ಕೂ ನಾನು ಸಿದ್ಧನಾಗಿರಬೇಕೆಂದು ಎಂದು ಪ್ರಜ್ಞಾನಂದ ತಿಳಿಸಿದ್ದಾರೆ.

ಇನ್ನು ಪಂದ್ಯವನ್ನು ಡ್ರಾಗೊಳಿಸಿದ ಬಳಿಕ ಮಾತನಾಡಿದ ಕಾರ್ಲ್​ಸೆನ್ ಪಂದ್ಯದ ಸಂಘಟಕರನ್ನು ಹಾಡಿ ಹೊಗಳಿದರು. ಫೈನಲ್ ಪಂದ್ಯಕ್ಕೂ ಮುನ್ನ ಫುಡ್ ಪಾಯಿಸನ್​ಗೆ ಒಳಗಾಗಿದ್ದ ಕಾರ್ಲ್​ಸೆನ್​ಗೆ FIDE ಕಡೆಯಿಂದ ಉತ್ತಮ ಬೆಂಬಲ ದೊರಕಿದೆ ಎಂದು ತಿಳಿಸಿದರು.

ನನಗೆ ಉತ್ತಮ ಚಿಕಿತ್ಸೆಯನ್ನು ನೀಡಿದ ಸಂಘಟಕರು, FIDE ಮತ್ತು ವೈದ್ಯರು ಮತ್ತು ದಾದಿಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂದು, ನಾನು ಸ್ವಲ್ಪ ಉತ್ತಮವಾಗಿದ್ದೇನೆ. ಆದರೆ ಪೂರ್ಣ ಹೋರಾಟಕ್ಕೆ ನನಲ್ಲಿ ಶಕ್ತಿಯಿದೆ ಎಂದು ನನಗೆ ಇನ್ನೂ ಅನಿಸಲಿಲ್ಲ. ಹೀಗಾಗಿ ಒಂದು ದಿನ ವಿಶ್ರಾಂತಿ ಪಡೆಯೋಣ ಎಂದೆನಿಸಿತು. ಅದರಂತೆ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದೇನೆ. ನಾಳೆ ಹೆಚ್ಚು ಉತ್ಸಾಹದೊಂದಿಗೆ ಕಾಣಿಸಿಕೊಳ್ಳಲಿದ್ದೇನೆ ಎಂದು ಕಾರ್ಲ್​ಸೆನ್ ತಿಳಿಸಿದ್ದಾರೆ.

ಟೈಬ್ರೇಕ್​ನಲ್ಲಿ ಫಲಿತಾಂಶ ನಿರ್ಧರಿಸುವುದು ಹೇಗೆ?

ಫೈನಲ್ ಪಂದ್ಯದ 2 ಕ್ಲಾಸಿಕ್ ಗೇಮ್​ಗಳಲ್ಲೂ ಫಲಿತಾಂಶ ಮೂಡಿಬರದ ಕಾರಣ ಇದೀಗ ಪಂದ್ಯವನ್ನು ಟೈಬ್ರೇಕ್ ಸುತ್ತಿನತ್ತ ಕೊಂಡೊಯ್ಯಲಾಗಿದೆ. ಇಲ್ಲಿ 25 ನಿಮಿಷಗಳ ನಿಯಂತ್ರಣದೊಂದಿಗೆ 2 ಟೈಬ್ರೇಕ್​ ಪಂದ್ಯವನ್ನು ಆಡಲಾಗುತ್ತದೆ. ಇಲ್ಲೂ ಡ್ರಾ ಆದರೆ 10 ನಿಮಿಷಗಳ ಎರಡು ರ್ಯಾಪಿಡ್ ಗೇಮ್​ಗಳನ್ನು ಆಡಲಿದ್ದಾರೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್ಯಾಪಿಡ್​ ಗೇಮ್​ಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಹಣೆಯಲ್ಲಿ ಸದಾ ವಿಭೂತಿ ಧರಿಸಿಕೊಳ್ಳುವ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಯಾರು ಗೊತ್ತೇ?

ಇನ್ನು ರ್ಯಾಪಿಡ್​ ಗೇಮ್​ಗಳು ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್​ ಆಡಲಾಗುತ್ತದೆ. ಇದರಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಹೀಗಾಗಿ ನಾಳಿನ ಪಂದ್ಯದ ಮೂಲಕ ಯಾರು ವಿಶ್ವ ಚಾಂಪಿಯನ್ ಎಂಬುದು ನಿರ್ಧಾರವಾಗಲಿದೆ.

Published On - 8:11 pm, Wed, 23 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್