ಮಹಾಮಾರಿ ಕೊರೊನಾ ಕಂಟಕದ ಮಧ್ಯೆಯೇ ಕೊಹ್ಲಿ ಪಡೆಗೆ ಆಘಾತ! ಏನದು?
ಮಹಾಮಾರಿ ಕೊರೊನಾದಿಂದಾಗಿ ಜಾಗತಿಕ ಮಟ್ಟದಲ್ಲಿ ಯಾವುದೇ ಕ್ರೀಡಾಕೂಟ ನಡೆಯುತ್ತಿಲ್ಲ. ಇಲ್ಲಾ ಅಂದಿದ್ರೆ ಇಷ್ಟೊತ್ತಿಗಾಗಲೇ ಟೀಮ್ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ಧೂಳೆಬ್ಬಿಸಿಬಿಡ್ತಿದ್ರು. ಕೊರೊನಾದಿಂದಾಗಿ ಕ್ರಿಕೆಟ್ ಲೋಕವೇ ಸ್ತಬ್ಧವಾಗಿದೆ. ಆದ್ರೀಗ ಈ ಕೊರೊನಾ ಕಂಟಕದ ಮಧ್ಯೆಯೇ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಕ್ಕೆ ಆಘಾತವಾಗಿದೆ. ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ಱಂಕಿಂಗ್ ಪಟ್ಟಿಯಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೆ ಭಾರಿ ಆಘಾತವಾಗಿದೆ. ಕಳೆದ ಮೂರುವರೆ ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದ್ದ ಕೊಹ್ಲಿ ಪಡೆ, ನೂತನ ಟೆಸ್ಟ್ ಱಂಕಿಂಗ್ನಲ್ಲಿ […]
ಮಹಾಮಾರಿ ಕೊರೊನಾದಿಂದಾಗಿ ಜಾಗತಿಕ ಮಟ್ಟದಲ್ಲಿ ಯಾವುದೇ ಕ್ರೀಡಾಕೂಟ ನಡೆಯುತ್ತಿಲ್ಲ. ಇಲ್ಲಾ ಅಂದಿದ್ರೆ ಇಷ್ಟೊತ್ತಿಗಾಗಲೇ ಟೀಮ್ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ಧೂಳೆಬ್ಬಿಸಿಬಿಡ್ತಿದ್ರು. ಕೊರೊನಾದಿಂದಾಗಿ ಕ್ರಿಕೆಟ್ ಲೋಕವೇ ಸ್ತಬ್ಧವಾಗಿದೆ. ಆದ್ರೀಗ ಈ ಕೊರೊನಾ ಕಂಟಕದ ಮಧ್ಯೆಯೇ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಕ್ಕೆ ಆಘಾತವಾಗಿದೆ.
ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ಱಂಕಿಂಗ್ ಪಟ್ಟಿಯಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೆ ಭಾರಿ ಆಘಾತವಾಗಿದೆ. ಕಳೆದ ಮೂರುವರೆ ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದ್ದ ಕೊಹ್ಲಿ ಪಡೆ, ನೂತನ ಟೆಸ್ಟ್ ಱಂಕಿಂಗ್ನಲ್ಲಿ ಕೆಳಗಿಳಿದಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ.
3ನೇ ಸ್ಥಾನಕ್ಕೆ ಕುಸಿದ ಟೀಮ್ ಇಂಡಿಯಾ: ಐಸಿಸಿ ಟೆಸ್ಟ್ ಱಂಕಿಂಗ್ನಲ್ಲಿ ಆಸ್ಟ್ರೇಲಿಯಾ 116 ಅಂಕದೊಂದಿಗೆ ನಂಬರ್ ಒನ್ ಸ್ಥಾನಕ್ಕೇರಿದ್ರೆ, 115 ಪಾಯಿಂಟ್ ಸಂಪಾದಿಸಿರೋ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾ 114 ಪಾಯಿಂಟ್ಗಳನ್ನ ಪಡೆಯೋ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.
ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದು 2016 ರಿಂದ ಟೆಸ್ಟ್ ಱಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಇತ್ತು. ಆದ್ರೀಗ ಮೂರುವರೆ ವರ್ಷಗಳ ಬಳಿಕ ಕೊಹ್ಲಿ ಸೈನ್ಯ ಮೂರನೇ ಸ್ಥಾನಕ್ಕೆ ಕುಸಿದಿದೆ.
2016-17 ರಲ್ಲಿ ಭಾರತ 12 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಇದರಲ್ಲಿ ಕೇವಲ ಒಂದು ಟೆಸ್ಟ್ನಲ್ಲಿ ಮಾತ್ರ ಸೋಲುಂಡಿತ್ತು. ಆದರೆ, ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.
ಟೆಸ್ಟ್ ಕ್ರಿಕೆಟ್ನಲ್ಲಷ್ಟೇ ಅಲ್ಲ.. ಆಸ್ಟ್ರೇಲಿಯಾ ತಂಡ ಟಿ20 ಕ್ರಿಕೆಟ್ ಱಂಕಿಂಗ್ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿ ಅಗ್ರಸ್ಥಾನವನ್ನ ಅಲಂಕರಿಸಿದೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
Published On - 7:38 pm, Fri, 1 May 20