ನೀನು ಕೊರೊನಾಗಿಂತ ಅಪಾಯಕಾರಿ! ಕ್ರಿಸ್ ಗೇಲ್ ಕಿಡಿಕಾರಿದ್ದು ಯಾರ ಮೇಲೆ?
ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ರಾಮ್ ನರೇಶ್ ಸರವಣ್ ವಿರುದ್ಧ ಹಿಗ್ಗಾಮುಗ್ಗಾ ಜರಿದಿದ್ದಾರೆ. ಸರವಣ್ಗೆ ನೀನು ಕೊರೊನಾ ವೈರಸ್ಗಿಂತ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಕ್ರಿಸ್ ಗೇಲ್ ಒಂದು ಟೀಮ್ಮೇಟ್ ಜೊತೆ ಹೀಗೆ ಹರಿಹಾಯೋದಕ್ಕೆ ಕಾರಣ ಏನು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಸ್ ಗೇಲ್ ಜಮೈಕಾ ತಲಾವಾಸ್ ತಂಡವನ್ನ ಪ್ರತಿನಿಧಿಸುತ್ತಿದ್ರು. ಆದ್ರೆ ಈ ಸೀಸನ್ನ ಬಿಡ್ಡಿಂಗ್ನಲ್ಲಿ ಜಮೈಕಾ ತಲಾವಾಸ್ ಕ್ರಿಸ್ ಗೇಲ್ರನ್ನ ಕೈ […]
ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ರಾಮ್ ನರೇಶ್ ಸರವಣ್ ವಿರುದ್ಧ ಹಿಗ್ಗಾಮುಗ್ಗಾ ಜರಿದಿದ್ದಾರೆ. ಸರವಣ್ಗೆ ನೀನು ಕೊರೊನಾ ವೈರಸ್ಗಿಂತ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ ಕ್ರಿಸ್ ಗೇಲ್ ಒಂದು ಟೀಮ್ಮೇಟ್ ಜೊತೆ ಹೀಗೆ ಹರಿಹಾಯೋದಕ್ಕೆ ಕಾರಣ ಏನು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಸ್ ಗೇಲ್ ಜಮೈಕಾ ತಲಾವಾಸ್ ತಂಡವನ್ನ ಪ್ರತಿನಿಧಿಸುತ್ತಿದ್ರು. ಆದ್ರೆ ಈ ಸೀಸನ್ನ ಬಿಡ್ಡಿಂಗ್ನಲ್ಲಿ ಜಮೈಕಾ ತಲಾವಾಸ್ ಕ್ರಿಸ್ ಗೇಲ್ರನ್ನ ಕೈ ಬಿಟ್ಟಿದೆ.
ಗೇಲ್ರನ್ನ ಜಮೈಕಾ ತಲಾವಾಸ್ ಹೀಗೆ ಹೊರಗಿಡೋದಕ್ಕೆ ಕಾರಣವಾಗಿದ್ದೇ ರಾಮ್ನರೇಶ್ ಶರವಣ್. ಗೇಲ್ ಮತ್ತು ಫ್ರಾಂಚೈಸಿ ನಡುವೆ ಬಿನ್ನಾಭಿಪ್ರಾಯ ತಂದಿಟ್ಟಿದ್ದೇ ರಾಮ್ನರೇಶ್ ಶರವಣ್. ಯಾಕಂದ್ರೆ ಸರವಣ್ ಜಮೈಕಾ ತಲಾವಾಸ್ ಫ್ರಾಂಚೈಸಿ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೇ ಸರವಣ್ ಮಾತಿಗೆ ಕಿವಿಗೊಟ್ಟ ಜಮೈಕಾ ಫ್ರಾಂಚೈಸಿ ಗೇಲ್ರನ್ನ ಖರೀದಿ ಮಾಡಿಲ್ಲ. ಅದೂ ಅಲ್ಲದೇ ಫ್ರಾಂಚೈಸಿ ಮಾಲೀಕರ ಜೊತೆ ಸರವಣ್ ತುಂಬಾ ಆಪ್ತತೆಯನ್ನ ಹೊಂದಿದ್ದಾರೆ. ಇದೇ ಕಾರಣಕ್ಕೆ ಕ್ರಿಸ್ ಗೇಲ್, ಸರವಣ್ ವಿರುದ್ಧ ನಿಗಿ ನಿಗಿ ಕೆಂಡ ಕಾರಿದ್ದಾರೆ.
ರಾಮ್ನರೇಶ್ ಸರವಣ್ ನೀನು ಕೊರೊನಾ ವೈರಸ್ಗಿಂತ ಅಪಾಯಕಾರಿ. ನೀನು ಹಾವಿನಂತೆ. ಬೆನ್ನ ಹಿಂದೆ ಚೂರಿ ಹಾಕೋ ವ್ಯಕ್ತಿ. ನನ್ನ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದೀಯಾ. ನಿನಗೆ ಗೊತ್ತಲ್ಲ ನಾನು ಯುನಿವರ್ಸಲ್ ಬಾಸ್. ಅದಕ್ಕೆ ನಿನಗೆ ನೇರವಾಗಿ ಹೇಳುತ್ತಿದ್ದೇನೆ ಎಂದು, ಸರವಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 1:27 pm, Wed, 29 April 20