ಚಹಲ್​ನಿಂದ ಜೀವನದಲ್ಲಿ ಬೇಸರವಾಗಿದೆ ಎಂದ ಗೇಲ್

ಮೈದಾನದಲ್ಲಿ ತನ್ನ ಸ್ಪಿನ್ ಮೋಡಿಯಿಂದ ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ಗಿರಗಿಟ್ಲೆ ಹೊಡೆಸೋ ಟೀಮ್ ಇಂಡಿಯಾದ ಯಜ್ವಿಂದರ್ ಚಹಲ್, ಮೈದಾನದಾಚೆಗೂ ಸದಾ ಸುದ್ದಿಯಲ್ಲಿರ್ತಾರೆ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಂತೂ ಚಹಲ್ ಒಂದಲ್ಲಾ ಒಂದು ಹಲ್ ಚಲ್ ಎಬ್ಬಿಸ್ತಾನೆ ಇರ್ತಾರೆ.

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಕಾಲೆಳೆದು ಮಜಾ ತಗೆದುಕೊಳ್ಳೋ ಚಹಲ್​, ಈಗ ಲಾಕ್​ಡೌನ್ ಸಮಯದಲ್ಲಂತೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಆದ್ರೀಗ ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್​, ಚಹಲ್​ರನ್ನ ವಿಭಿನ್ನವಾಗಿ ಕಾಲೆಳೆಯೋ ಮೂಲಕ ತಿರುಗೇಟು ನೀಡಿದ್ದಾರೆ.

ಗೇಲ್ ತಮ್ಮ ಇನ್​ಸ್ಟಾದಲ್ಲಿ ಲೈವ್ ಆಗಿ ಮಾತನಾಡುತ್ತಾ ‘ಯಜ್ವಿಂದರ್ ಚಹಲ್​ಗೆ ಸಾಮಾಜಿಕ ಜಾಲತಾಣದಲ್ಲಿ ನೀನು ತುಂಬಾ ಕಿರಿ ಕಿರಿ ಉಂಟು ಮಾಡುತ್ತಿದ್ದೀಯ. ಹೀಗಾಗಿ ನಿಮ್ಮನ್ನ ಬ್ಲಾಕ್ ಮಾಡಲು ಟಿಕ್ ಟಾಕ್​ನವರಿಗೆ ಹೇಳುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲ. ಚಹಲ್​ನಿಂದ ನಾವು ಜೀವನದಲ್ಲಿ ತುಂಬಾ ಬೇಸತ್ತಿದ್ದೇವೆ. ನಾವು ನಿನ್ನನ್ನ ಮತ್ತೆ ಜೀವನದಲ್ಲಿ ನೋಡೋದಕ್ಕೆ ಬಯಸೋದಿಲ್ಲ ಅಂತಾ ಸರಿಯಾಗೇ ಕಾಲೆಳೆದಿದ್ದಾರೆ.

ಗೇಲ್ ಹೀಗೆ ಗಂಭೀರವಾಗಿ ಕಾಲೆಳೆದಿದ್ದಕ್ಕೆ ಚಹಲ್ ಸೈಲೆಂಟ್ ಆಗಿದ್ದಾರೆ. ಕೆರಿಬಿಯನ್ ಕಿಂಗ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಗಪ್​ಚುಪ್ ಆಗಿದ್ದಾರೆ. ನಿಜಕ್ಕೂ ಚಹಲ್ ಲಾಕ್​ಡೌನ್​ ಈ ಸಮಯದಲ್ಲಿ ಹಿಂದಿಗಿಂತಲೂ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.

Published On - 10:08 am, Mon, 27 April 20

Click on your DTH Provider to Add TV9 Kannada