ಮಹಾ ಕುಂಭದಲ್ಲಿ ಅದಾನಿ ಗ್ರೂಪ್ ಮತ್ತು ಇಸ್ಕಾನ್​ನಿಂದ ಮಹಾಪ್ರಸಾದ ಸೇವೆ ಆರಂಭ

2025ರ ಮಹಾ ಕುಂಭದಲ್ಲಿ ಅದಾನಿ ಗ್ರೂಪ್ ಮತ್ತು ಇಸ್ಕಾನ್ ವತಿಯಿಂದ 'ಮಹಾಪ್ರಸಾದ ಸೇವೆ' ಆರಂಭಿಸಲಾಗುವುದು. ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭದಲ್ಲಿ ಮಹಾಪ್ರಸಾದ ಸೇವೆಗಾಗಿ ಅದಾನಿ ಗ್ರೂಪ್, ಇಸ್ಕಾನ್ ಕೈ ಜೋಡಿಸಿವೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗ್​ರಾಜ್​ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆಯನ್ನು ನೀಡಲಾಗುವುದು.

ಮಹಾ ಕುಂಭದಲ್ಲಿ ಅದಾನಿ ಗ್ರೂಪ್ ಮತ್ತು ಇಸ್ಕಾನ್​ನಿಂದ ಮಹಾಪ್ರಸಾದ ಸೇವೆ ಆರಂಭ
Adani And Iskcon
Follow us
ಸುಷ್ಮಾ ಚಕ್ರೆ
| Updated By: Digi Tech Desk

Updated on:Jan 13, 2025 | 9:04 AM

ಪ್ರಯಾಗ್​ರಾಜ್: ಈ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಊಟ ಬಡಿಸಲು ಅದಾನಿ ಗ್ರೂಪ್ ಮತ್ತು ಇಂಟರ್​ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ಕೈಜೋಡಿಸಿವೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಮಹಾ ಕುಂಭಮೇಳ ಪೂರ್ತಿ ಈ ಮಹಾಪ್ರಸಾದ ಸೇವೆಯನ್ನು ನೀಡಲಾಗುತ್ತದೆ.

ಈ ಉಪಕ್ರಮಕ್ಕಾಗಿ ಇಸ್ಕಾನ್‌ಗೆ ಧನ್ಯವಾದ ಹೇಳಲು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು ಇಸ್ಕಾನ್ ಆಡಳಿತ ಮಂಡಳಿ ಆಯೋಗದ (ಜಿಬಿಸಿ) ಅಧ್ಯಕ್ಷ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿ ಮಾಡಿದರು. ಮಹಾಪ್ರಸಾದ ಸೇವೆಯನ್ನು ನೀಡುವಲ್ಲಿ ಇಸ್ಕಾನ್‌ ನೀಡುತ್ತಿರುವ ಬೆಂಬಲದ ಬಗ್ಗೆ ಮಾತನಾಡಿದ ಗೌತಮ್ ಅದಾನಿ, “ಮಹಾಕುಂಭ ಪವಿತ್ರವಾದ ಸೇವಾ ಸ್ಥಳವಾಗಿದ್ದು, ಅಲ್ಲಿ ಪ್ರತಿಯೊಬ್ಬ ಭಕ್ತರೂ ದೇವರಿಗೆ ಸೇವೆ ಸಲ್ಲಿಸಲು ತೊಡಗಿಸಿಕೊಳ್ಳುತ್ತಾರೆ. ಇಸ್ಕಾನ್ ಸಹಯೋಗದೊಂದಿಗೆ ಮಹಾಕುಂಭದಲ್ಲಿ ಭಕ್ತರಿಗಾಗಿ ನಾವು ‘ಮಹಾಪ್ರಸಾದ ಸೇವೆ’ಯನ್ನು ಪ್ರಾರಂಭಿಸುತ್ತಿರುವುದು ನನ್ನ ಅದೃಷ್ಟ” ಎಂದಿದ್ದಾರೆ.

ಇದನ್ನೂ ಓದಿ: ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

“ಮಾತಾ ಅನ್ನಪೂರ್ಣೆಯ ಆಶೀರ್ವಾದದಿಂದ ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸಲಾಗುವುದು. ಇಂದು ನನಗೆ ಇಸ್ಕಾನ್‌ನ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನಿಜವಾದ ಅರ್ಥದಲ್ಲಿ ಈ ಸೇವೆಯು ದೇಶಭಕ್ತಿಯ ಅತ್ಯುನ್ನತ ರೂಪವಾಗಿದೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು.” ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಮಹಾಪ್ರಸಾದ ಸೇವೆಯನ್ನು 50 ಲಕ್ಷ ಭಕ್ತರಿಗೆ ನೀಡಲಾಗುವುದು. ಮಹಾಕುಂಭ ಮೇಳದ ಒಳಗೆ ಮತ್ತು ಹೊರಗೆ ಎರಡು ಅಡುಗೆ ಮನೆಗಳಲ್ಲಿ ಊಟವನ್ನು ತಯಾರಿಸಲಾಗುವುದು. ಮಹಾಪ್ರಸಾದವನ್ನು ಮಹಾಕುಂಭ ಪ್ರದೇಶದ 40 ಸ್ಥಳಗಳಲ್ಲಿ ವಿತರಿಸಲಾಗುವುದು. 2,500 ಸ್ವಯಂಸೇವಕರು ಈ ಉಪಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿಕಲಚೇತನರು, ವೃದ್ಧರು ಮತ್ತು ಮಕ್ಕಳಿರುವ ತಾಯಂದಿರಿಗಾಗಿ ಗಾಲ್ಫ್ ಬಂಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಗೀತಾ ಸಾರದ 5 ಲಕ್ಷ ಪ್ರತಿಗಳನ್ನು ಭಕ್ತರಿಗೆ ವಿತರಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Thu, 9 January 25