IND vs SA 5th T20I: ಭಾರತ-ಸೌತ್ ಆಫ್ರಿಕಾ ಪಂದ್ಯ ರದ್ದು

| Updated By: ಝಾಹಿರ್ ಯೂಸುಫ್

Updated on: Jun 19, 2022 | 9:59 PM

IND vs SA 5th T20I: ಓವರ್​ ಕಡಿತದೊಂದಿಗೆ ಪಂದ್ಯ ಮುಂದುವರೆಯಬಹುದು. ಇತ್ತ ಮಳೆ ಬಂದರೂ ಮೈದಾನದಿಂದ ನೀರು ಹೊರಹೋಗಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ವ್ಯವಸ್ಥೆಯಿದೆ. ಹೀಗಾಗಿ ತಡವಾಗಿ ಪಂದ್ಯ ನಡೆಯುವ ಸಾಧ್ಯತೆಯಿದೆ.

IND vs SA 5th T20I: ಭಾರತ-ಸೌತ್ ಆಫ್ರಿಕಾ ಪಂದ್ಯ ರದ್ದು
IND vs SA 5th T20I
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಟಾಸ್​ಗೂ ಮುನ್ನ ಮಳೆಯಾಗಿದ್ದರಿಂದ ಪಂದ್ಯವು ವಿಳಂಬವಾಗಿ ಶುರು ಮಾಡಲಾಗಿತ್ತು. ಅದರಂತೆ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಲುಂಗಿ ಎನ್​ಗಿಡಿ ಎಸೆದ 2ನೇ ಓವರ್​ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ (15) ಕ್ಲೀನ್ ಬೌಲ್ಡ್ ಆಗಿ ಹೊರನಡೆದರೆ, ಎನ್​ಗಿಡಿ ಎಸೆದ 4ನೇ ಓವರ್​ನ 2ನೇ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ (10) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಇದಾಗ್ಯೂ ಪಂದ್ಯವನ್ನು ಮುಂದುವರೆಸಲು ಬಯಸಿದರೂ ಮಳೆ ಬಿಡುವ ಸಾಧ್ಯತೆಗಳಿರಲಿಲ್ಲ. ಈ ಬಗ್ಗೆ ಚರ್ಚಿಸಿದ ಅಂಪೈರ್‌ಗಳಾದ ಅನಿಲ್ ಚೌಧರಿ ಮತ್ತು ಕೆಎನ್ ಅನಂತ ಪದ್ಮನಾಭನ್ 5 ಓವರ್‌ಗಳ ಪಂದ್ಯ ನಡೆಸುವ ಆಯ್ಕೆಗಳ ಬಗ್ಗೆ ಪರಿಶೀಲಿಸಿದರು. ಆದರೆ ನಿರಂತರವಾಗಿ ಮಳೆಯಾಗುತ್ತಿದ್ದರಿಂದ ಇದಕ್ಕೂ ಅವಕಾಶ ಇರಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಐಸಿಸಿ ನಿಮಯದ ಪ್ರಕಾರ ಮಳೆ ಬಂದರೆ ಕನಿಷ್ಠ 5 ಓವರ್​ಗಳ ಪಂದ್ಯ ನಡೆಯಬೇಕು. ಇದಕ್ಕಿಂತ ಕಡಿಮೆ ಓವರ್​ಗಳ ಪಂದ್ಯ ನಡೆಸಲಾಗುವುದಿಲ್ಲ. ಅಂದರೆ ಇಲ್ಲಿ ಒಂದು ತಂಡವು 5 ಓವರ್​ಗಳನ್ನು ಆಡಲೇಬೇಕು. ಇದಾಗ್ಯೂ ಸೂಪರ್ ಓವರ್​ ಮೂಲಕ ಸರಣಿ ಫಲಿತಾಂಶವನ್ನು ನಿರ್ಧರಿಸಲಾಗುವುದಿಲ್ಲ.

ಇದನ್ನೂ ಓದಿ
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಇನ್ನು ಮಳೆ ನಿಲ್ಲದಿದ್ದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಇದಾಗ್ಯೂ ಈ ಪಂದ್ಯಕ್ಕೆ ಮೀಸಲು ದಿನ ನೀಡಲಾಗಿಲ್ಲ. ಹಾಗಾಗಿ ಪಂದ್ಯ ನಾಳೆ ನಡೆಯುವುದಿಲ್ಲ. ಬದಲಾಗಿ ಸರಣಿಯು ಸಮಬಲದೊಂದಿಗೆ ಅಂತ್ಯಗೊಳಿಸಲಾಗಿದೆ. ಅಂದರೆ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದು, ಅದರಂತೆ ಉಭಯ ತಂಡಗಳನ್ನು ಸರಣಿ ವಿಜೇತರೆಂದು ಘೋಷಿಸಲಾಗಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ರಿಷಬ್ ಪಂತ್ (ನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಯುಜುವೇಂದ್ರ ಚಾಹಲ್

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್ , ಡ್ವೈನ್ ಪ್ರಿಟೋರಿಯಸ್ , ರಾಸ್ಸಿ ವಾನ್ ಡೆರ್ ಡುಸ್ಸೆನ್ , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಟ್ರಿಸ್ಟಾನ್ ಸ್ಟಬ್ಸ್ , ಕಗಿಸೊ ರಬಾಡಾ , ಕೇಶವ್ ಮಹಾರಾಜ್ (ನಾಯಕ) , ಲುಂಗಿ ಎನ್​ಗಿಡಿ , ಅನ್ರಿಕ್ ನೋಕಿಯಾ

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:46 pm, Sun, 19 June 22