
ಭಾರತದ ಪುರುಷರ ಹಾಕಿ ತಂಡ ಮತ್ತೊಮ್ಮೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇಂದು (ನವೆಂಬರ್ 05) ಮೊಹಾಲಿಯ ಒಲಿಂಪಿಯನ್ ಬಲ್ಬೀರ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ, ಜಪಾನ್ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತೀಯ ಹಾಕಿ ತಂಡವು ದಾಖಲೆಯ ಆರನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು ಹಾಗೂ ಸತತ ಮೂರು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ (ಹ್ಯಾಟ್ರಿಕ್) ಮಾಡಿತು.
ಪಂದ್ಯ ಆರಂಭವಾದ ಮೂರೇ ನಿಮಿಷದಲ್ಲಿ ಕಜುಮಾಸಾ ಮತ್ಸುಮೊಟೊ ಅವರು ಫೀಲ್ಡ್ ಗೋಲ್ ಗಳಿಸುವ ಮೂಲಕ ಜಪಾನ್ ತಂಡವು ಭಾರತಕ್ಕೆ ಆಘಾತ ನೀಡಿತು. ಇದಾದ ನಂತರ ಭಾರತ ತಂಡವು ಚೇತರಿಸಿಕೊಂಡು, ಶಿಲಾಂದ್ ಲಾಕ್ರಾ (42ನೇ ನಿಮಿಷ – ಪೆನಾಲ್ಟಿ ಕಾರ್ನರ್ ಮೂಲಕ), ದೀಪ್ರೀತ್ ಸಿಂಗ್ (48ನೇ ನಿಮಿಷ – ಫೀಲ್ಡ್ ಪ್ಲೇ ಮೂಲಕ) ಮತ್ತು ಜುಗ್ರಾಜ್ (53ನೇ ನಿಮಿಷ – ಸೆಟ್ ಪೀಸ್ ಮೂಲಕ) ಗೋಲುಗಳನ್ನು ಗಳಿಸಿದರು. 54ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ಮತ್ತೊಂದು ಗೋಲು ಗಳಿಸುವುದರೊಂದಿಗೆ ಭಾರತದ ಮುನ್ನಡೆಯನ್ನು 4-1ಕ್ಕೆ ಏರಿಸಿದರು.
ಜಪಾನ್ ವಿರುದ್ಧದ ಪಂದ್ಯದ ಆರಂಭದಲ್ಲಿ ಹಿನ್ನಡೆಯಲ್ಲಿದ್ದರೂ, ಭಾರತದ ಪುರುಷರ ಹಾಕಿ ತಂಡವು ಅದ್ಭುತ ಆಟದೊಂದಿಗೆ ಚೇತರಿಸಿಕೊಂಡಿದ್ದು, ಅಂತಿಮವಾಗಿ 4-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಭಾರತದ ಪರವಾಗಿ ಶಿಲಾನಂದ ಲಾಕ್ರಾ, ದಿಲ್‌ಪ್ರೀತ್ ಸಿಂಗ್, ಜುಗರಾಜ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಗೋಲುಗಳನ್ನು ಗಳಿಸಿದರೆ, ಜಪಾನ್ ಪರವಾಗಿ ಕಜುಮಾಸಾ ಮತ್ಸುಮೊಟೊ ಒಂದು ಗೋಲು ದಾಖಲಿಸಿದರು.
ಏಷ್ಯನ್ ಕ್ರೀಡಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತವು, ಈ ಹಿಂದೆ 2011, 2016, 2018, 2023 ಮತ್ತು 2024ರಲ್ಲಿ ಈ ಟೂರ್ನಮೆಂಟ್ ನಲ್ಲೂ ಚಾಂಪಿಯನ್ ಆಗಿತ್ತು.