AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾರ್ಸಿಲೋನಾ ಒಲಿಂಪಿಕ್ಸ್​: ಒಂದೇ ಕುಟುಂಬದ ಮೂರು ತಲೆಮಾರಿನ ಪದಕದ ಬೇಟೆ

Barcelona Olympics: ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಏಕೀಕೃತ ತಂಡ. ಸೋವಿಯತ್ ಕ್ರಾಂತಿಯ ಕಾರಣ ಹಲವು ದೇಶಗಳ ಆಟಗಾರರು ಒಲಿಂಪಿಕ್ಸ್ ಒಕ್ಕೂಟದ ಯುನೈಫೈಡ್ ಟೀಮ್ ಅಡಿಯಲ್ಲಿ ಕಣಕ್ಕಿಳಿದಿದ್ದರು. ಅದರಂತೆ ಏಕೀಕೃತ ತಂಡವು 45 ಚಿನ್ನ, 38 ಬೆಳ್ಳಿ ಮತ್ತು 29 ಕಂಚಿನೊಂದಿಗೆ ಒಟ್ಟು 112 ಪದಕಗಳನ್ನು ಗೆದ್ದುಕೊಂಡಿತು.

ಬಾರ್ಸಿಲೋನಾ ಒಲಿಂಪಿಕ್ಸ್​: ಒಂದೇ ಕುಟುಂಬದ ಮೂರು ತಲೆಮಾರಿನ ಪದಕದ ಬೇಟೆ
ಸಾಂದರ್ಭಿಕ ಚಿತ್ರ
TV9 Web
| Updated By: ಝಾಹಿರ್ ಯೂಸುಫ್|

Updated on: Jul 21, 2024 | 1:16 PM

Share

1992… ಸ್ಪೇನ್​ನ ರಾಜಧಾನಿ ಬಾರ್ಸಿಲೋನಾ ವಿಶ್ವ ಕ್ರೀಡಾಕೂಟಕ್ಕೆ ಅಣಿಯಾಗಿತ್ತು. ಆದರೆ 1988ರ ಸಿಯೋಲ್ ಒಲಿಂಪಿಕ್ಸ್ ಮುಗಿದ ಬಳಿಕ ವಿಶ್ವದಲ್ಲಿ ಹಲವು ಬದಲಾವಣೆಗಳಾಗಿದ್ದವು. ಸೌತ್ ಆಫ್ರಿಕಾದಲ್ಲಿ ವರ್ಣಭೇದ ನೀತಿ ಕೊನೆಗೊಂಡಿತ್ತು. ಬರ್ಲಿನ್ ಗೋಡೆಯ ಪತನದೊಂದಿಗೆ ಪಶ್ಚಿಮ ಮತ್ತು ಪೂರ್ವ ಜರ್ಮನಿಗಳು ಒಂದಾದವು. ಹಾಗೆಯೇ ಉತ್ತರ ಮತ್ತು ದಕ್ಷಿಣ ಯೆಮೆನ್ ಜೊತೆಯಾದವು. ಮತ್ತೊಂದೆಡೆ ಸೋವಿಯತ್ ಒಕ್ಕೂಟ 15 ದೇಶಗಳಾಗಿ ವಿಭಜನೆಯಾಯಿತು. ಹೀಗೆ 4 ವರ್ಷಗಳಲ್ಲಿ ಕಂಡು ಬಂದ ಹಲವು ಬದಲಾವಣೆಗಳೊಂದಿಗೆ 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್ ರಂಗೇರಿತು.

ಬಾರ್ಸಿಲೋನಾದಲ್ಲಿ ನಡೆದ ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಶ್ವದ 169 ದೇಶಗಳು ಭಾಗವಹಿಸಿದ್ದವು. ಅದರಲ್ಲಿ ಭಾರತವೂ ಒಂದು. 1988 ರ ಸಿಯೋಲ್​ ಒಲಿಂಪಿಕ್ಸ್​ನಲ್ಲಿ ಖಾಲಿ ಕೈಯಲ್ಲಿ ಹಿಂತಿರುಗಿದ್ದ ಭಾರತೀಯರು ಈ ಬಾರಿ ಹೊಸ ಭರವಸೆ ಮೂಡಿಸಿದ್ದರು.

ಭಾರತದ 46 ಪುರುಷ ಮತ್ತು 6 ಮಹಿಳಾ ಸ್ಪರ್ಧಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಪದಕ ಮಾತ್ರ ದೊರೆತಿರಲಿಲ್ಲ. ಅಲ್ಲದೆ ಸಿಯೋಲ್ ಒಲಿಂಪಿಕ್ಸ್​ನಂತೆ ಈ ಬಾರಿ ಕೂಡ ಭಾರತೀಯರು ಖಾಲಿ ಕೈಯಲ್ಲೇ ಹಿಂತಿರುಗಬೇಕಾಯಿತು.

ಹಲವು ಕ್ರೀಡೆಗಳ ಸೇರ್ಪಡೆ:

ಬಾರ್ಸಿಲೋನಾ ಒಲಿಂಪಿಕ್ಸ್ ಅನೇಕ ಹೊಸ ಕ್ರೀಡೆಗಳ ಸೇರ್ಪಡೆಯಾಗಿತ್ತು. ಇದರಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್​ ಬಾಲ್, ಬೇಸ್ ಬಾಲ್ ಮತ್ತು ಮಹಿಳಾ ಜೂಡೋ ಪ್ರಮುಖವಾಗಿದ್ದವು. ಅತ್ತ ಅದಾಗಲೇ ಬಾಸ್ಕೆಟ್​ಬಾಲ್​ನಲ್ಲಿ ಪಾರುಪತ್ಯ ಹೊಂದಿದ್ದ ಅಮೆರಿಕವು ಸೂಪರ್ ಸ್ಟಾರ್ ಆಟಗಾರರಾದ ಮೈಕೆಲ್ ಜೋರ್ಡಾನ್ ಮತ್ತು ಲ್ಯಾರಿ ಬರ್ಡ್ ಅವರನ್ನೊಳಗೊಂಡ ತಂಡವನ್ನು ಕಣಕ್ಕಿಳಿಸಿ ಚಿನ್ನದ ಪದಕ ಗೆದ್ದುಕೊಂಡಿತು.

ಪದಕ ಗೆದ್ದ ಮೂರನೇ ತಲೆಮಾರು:

ಬಾರ್ಸಿಲೋನಾ ಒಲಿಂಪಿಕ್ಸ್​ನ ಅತ್ಯಂತ ಕುತೂಹಲಕಾರಿ ವಿಷಯ ಎಂದರೆ ಜರ್ಮನಿ ಪುರುಷರ ಹಾಕಿ ತಂಡ ಚಿನ್ನದ ಪದಕ ಗೆದ್ದಿದ್ದು. ಇದರಲ್ಲೇನು ವಿಶೇಷ ಅಂದರೆ ಈ ತಂಡದಲ್ಲಿ ಆಂಡ್ರಿಯಾಸ್ ಕೆಲ್ಲರ್ ಇದ್ದರು.

ಇತ್ತ ಜರ್ಮನಿ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಒಲಿಂಪಿಕ್ಸ್​ನಲ್ಲಿ ಬಂಗಾರದ ಪದಕ ಗೆದ್ದ ಒಂದೇ ಕುಟುಂಬದ ಮೂರನೇ ತಲೆಮಾರು ಎಂಬ ಹಿರಿಮೆಗೆ ಆಂಡ್ರಿಯಾಸ್ ಕೆಲ್ಲರ್ ಪಾತ್ರರಾದರು. ಇದಕ್ಕೂ ಮುನ್ನ ಅವರ ತಂದೆ ಕಾರ್ಸ್ಟನ್ 1972 ರ ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಚಿನ್ನವನ್ನು ಗೆದ್ದಿದ್ದರು. ಅವರ ಅಜ್ಜ ಇರ್ವಿನ್ 1936 ರಲ್ಲಿ ಹಾಕಿಯಲ್ಲಿ ಪದಕ ಗೆದ್ದ ಕುಟುಂಬದಿಂದ ಮೊದಲಿಗರು. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಒಂದೇ ಕುಟುಂಬದ ಮೂವರು ಹಾಕಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದರು.

30 ಸೆಂಟಿ ಮೀಟರ್​ನಲ್ಲಿ ಫಲಿತಾಂಶ:

ಬಾರ್ಸಿಲೋನಾ ಒಲಿಂಪಿಕ್ಸ್​ನ ಪರುಷರ ರೋಯಿಂಗ್​ನ ಫೈನಲ್ ಪಂದ್ಯದ ಫಲಿತಾಂಶ ಮೂಡಿಬಂದಿದ್ದು 30 ಸೆಂಟಿ ಮೀಟರ್ ಅಂತರಗಳ ಮೂಲಕ ಎಂಬುದು ವಿಶೇಷ. ಅಂದರೆ ಅಂತಿಮ ಸುತ್ತಿನಲ್ಲಿ ರೊಮೇನಿಯಾ ಪುರುಷ ರೋಯಿಂಗ್ ತಂಡವನ್ನು 30 ಸೆಂಟಿ ಮೀಟರ್​ಗಳ ಅಂತರದಲ್ಲಿ ಹಿಂದಿಕ್ಕಿ ಕೆನಡಾ ತಂಡ ಚಿನ್ನದ ಪದಕ ಗೆದ್ದುಕೊಂಡಿತು.

1992ರ ಪದಕ ಪಟ್ಟಿ:

ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಏಕೀಕೃತ ತಂಡ. ಸೋವಿಯತ್ ಕ್ರಾಂತಿಯ ಕಾರಣ ಹಲವು ದೇಶಗಳ ಆಟಗಾರರು ಒಲಿಂಪಿಕ್ಸ್ ಒಕ್ಕೂಟದ ಯುನೈಫೈಡ್ ಟೀಮ್ ಅಡಿಯಲ್ಲಿ ಕಣಕ್ಕಿಳಿದಿದ್ದರು. ಅದರಂತೆ ಏಕೀಕೃತ ತಂಡವು 45 ಚಿನ್ನ, 38 ಬೆಳ್ಳಿ ಮತ್ತು 29 ಕಂಚಿನೊಂದಿಗೆ ಒಟ್ಟು 112 ಪದಕಗಳನ್ನು ಗೆದ್ದುಕೊಂಡಿತು.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ

ಇನ್ನು 37 ಚಿನ್ನ, 34 ಬೆಳ್ಳಿ ಮತ್ತು 34 ಕಂಚಿನೊಂದಿಗೆ108 ಪದಕಗಳನ್ನು ಗೆದ್ದ ಅಮೆರಿಕ ಎರಡನೇ ಸ್ಥಾನ ಅಲಂಕರಿಸಿತು. ಹಾಗೆಯೇ ಜರ್ಮನಿ, ಚೀನಾ ಮತ್ತು ಕ್ಯೂಬಾ ಟಾಪ್ 5 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದವು.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ