India vs England 3rd T20I Live Score: ಕೊಹ್ಲಿ ಶ್ರಮ ವ್ಯರ್ಥ, ಭಾರತಕ್ಕೆ 8 ವಿಕೆಟ್​ ಸೋಲು

ಗೆಲ್ಲಲು 157 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 2 ವಿಕೆಟ್​ ಕಳೆದುಕೊಂಡು ಪಂದ್ಯವನ್ನು ಜಯಿಸಿತು. ಆರಂಭ ಆಟಗಾರ ಜೋಸ್ ಬಟ್ಲರ್  ಅಜೇಯ 83 (52 ಎಸೆತ, 5 ಬೌಂಡರಿ 4 ಸಿಕ್ಸ್) ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

India vs England 3rd T20I Live Score: ಕೊಹ್ಲಿ ಶ್ರಮ ವ್ಯರ್ಥ, ಭಾರತಕ್ಕೆ 8 ವಿಕೆಟ್​ ಸೋಲು
ಜೋಸ್ ಬಟ್ಲರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 16, 2021 | 11:14 PM

ಅಹಮದಾಬಾದ: ಭಾರತ ಮತ್ತು ಇಂಗ್ಲೆಂಡ್​ ನಡುವೆ ಅಹಮದಾಬಾದಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಮೂರನೇ ಪಂದ್ಯವನ್ನು ಪ್ರವಾಸಿ ತಂಡ 8 ವಿಕೆಟ್​ಗಳ ಅಧಿಕಾರಯುತವಾಗಿ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಗೆಲ್ಲಲು 157 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 2 ವಿಕೆಟ್​ ಕಳೆದುಕೊಂಡು ಪಂದ್ಯವನ್ನು ಜಯಿಸಿತು. ಆರಂಭ ಆಟಗಾರ ಜೋಸ್ ಬಟ್ಲರ್  ಅಜೇಯ 83 (52 ಎಸೆತ, 5 ಬೌಂಡರಿ 4 ಸಿಕ್ಸ್) ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಜಾನಿ ಬೇರ್​ಸ್ಟೋ 28 ಎಸೆತಗಳಲ್ಲಿ ಅಜೇಯ 40 ರನ್ ಬಾರಿಸಿದರು, ಇವರಿಬ್ಬರ ಜೊತೆಯಾಟದಲ್ಲಿ 78 ರನ್ ಬಂದವು,

ಭಾರತದ ಪರ ಸ್ಪಿನ್ನರ್​ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್​ ಪಡೆದರು.

Virat Kohli

ವಿರಾಟ್ ಕೊಹ್ಲಿ

ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ  ಭಾರತದ ಆರಂಭ ಕೆಟ್ಟದ್ದಾಗಿತ್ತು. ಮೊದಲ 6 ಓವರ್​ಗಳಲ್ಲಿ  3 ವಿಕೆಟ್​ಗಳ ಪತನವಾಯಿತು. ನಾಯಕ ಕೊಹ್ಲಿ ಮತ್ತು ರಿಷಭ್ ಪಂತ್ ನಡುವೆ ಉತ್ತಮ ಜೊತೆಯಾಟ ಬರುತ್ತಿದ್ದಾಗಲೇ ಪಂತ್ 25 ರನ್ ಗಳಿಸಿ ಔಟಾದರು. ಮೊದಲ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದ ಶ್ರೇಯಸ್ ಅಯ್ಯರ್ ಕೇವಲ 9 ರನ್ ಗಳಿಸಿ ಔಟಾದರು.

ಅದರೆ 6ನೇ ವಿಕೆಟ್​ಗೆ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಿರುಗಾಳಿ ವೇಗದಲ್ಲಿ ರನ್ ಗಳಿಸಿ ತಂಡದ ಮೊತ್ತವನ್ನು 156/6 ತಲುಪಿಸಿದರು. ಸತತ ಎರಡನೇ ಅರ್ಧ ಶತಕ ಬಾರಿಸಿದ ಕೊಹ್ಲಿ ಅಂತಿಮವಾಗಿ 77 ರನ್ ( 46 ಎಸೆತ, 8 ಬೌಂಡರಿ 4 ಸಿಕ್ಸ್ ) ಗಳಿಸಿ ಅಜೇಯರಾಗಿ ಉಳಿದರು. 2 ಸಿಕ್ಸ್ ಬಾರಿಸಿದ ಪಾಂಡ್ಯ 17 ರನ್ ಗಳಿಸಿ ಇನ್ನಿಂಗ್ಸ್​ ಕೊನೆಯ ಎಸೆತದಲ್ಲಿ ಔಟಾದರು.

ಈ ಪಂದ್ಯಕ್ಕೆ ವಾಪಸ್ಸು ಬಂದ ವೇಗದ ಬೌಲರ್ ಮಾರ್ಕ್ ವುಡ್​ 31 ರನ್​ಗೆ 3 ವಿಕೆಟ್​ ಪಡೆದು ಯಶಸ್ವೀ ಬೌಲರ್ ಎನಿಸಿದರು. ಕ್ರಿಸ್ ಜೊರ್ಡನ್ 2 ವಿಕೆಟ್​ ಪಡೆದರು.

ಸರಣಿಯ ನಾಲ್ಕನೇ ಪಂದ್ಯ ಇದೇ ಮೈದಾನದಲ್ಲಿ ಗುರುವಾರದಂದು ನಡೆಯಲಿದೆ. ​

ಇದನ್ನೂ ಓದಿ: India vs England | ಧೋನಿಯೊಂದಿಗೆ ಹೋಲಿಸುವ ಮಟ್ಟಕ್ಕೆ ಪಂತ್ ಮತ್ತು ಕಿಷನ್ ಬೆಳೆದದ್ದು ಹೆಮ್ಮೆಯ ವಿಚಾರ: ಸಬಾ ಕರೀಮ್

Published On - 10:39 pm, Tue, 16 March 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ