ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು; ಬಹುಮಾನ ಘೋಷಿಸಿದ ಹಾಕಿ ಇಂಡಿಯಾ
India women's hockey: ಭಾರತದ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಶೂಟೌಟ್‌ನಲ್ಲಿ 2-1 ಅಂತರದಿಂದ ಗೆದ್ದ ಭಾರತ ತಂಡವು ಒಂದು ಹಂತದಲ್ಲಿ 0-2 ಅಂತರದಲ್ಲಿ ಹಿನ್ನಡೆಯಲ್ಲಿದ್ದರೂ ಅದ್ಭುತವಾದ ಪುನರಾಗಮನ ಮಾಡಿತು. ದೀಪಿಕಾ ಮತ್ತು ಬಲ್ಜೀತ್ ಕೌರ್ ಭಾರತದ ಪರ ಗೋಲು ಗಳಿಸಿದರು. ಈ ಐತಿಹಾಸಿಕ ಗೆಲುವಿಗೆ ಹಾಕಿ ಇಂಡಿಯಾ ತಂಡಕ್ಕೆ ಭರ್ಜರಿ ನಗದು ಬಹುಮಾನವನ್ನೂ ಘೋಷಿಸಿದೆ.

ಭಾರತ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಮಂಗಳವಾರ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ತುಂಬಾ ರೋಮಾಂಚಕಾರಿಯಾಗಿದ್ದ ಈ ಪಂದ್ಯದಲ್ಲಿ 4 ಕ್ವಾರ್ಟರ್‌ಗಳ ನಂತರ ಎರಡೂ ತಂಡಗಳು ತಲಾ 2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದಾದ ನಂತರ, ಭಾರತ ಶೂಟೌಟ್ ಗೆದ್ದು ಬೋನಸ್ ಅಂಕಗಳನ್ನು ಪಡೆಯಿತು. ಒಂದು ಹಂತದಲ್ಲಿ ಭಾರತ ತಂಡ 0-2 ಅಂತರದಲ್ಲಿ ಹಿನ್ನಡೆಯಲ್ಲಿತ್ತು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಭಾರತ ಅದ್ಭುತ ಪುನರಾಗಮನ ಮಾಡಿತು. ಭಾರತದ ಪರ ದೀಪಿಕಾ ಮತ್ತು ಬಲ್ಜೀತ್ ಕೌರ್ ಗೋಲು ಗಳಿಸಿದರೆ, ನೆದರ್ಲ್ಯಾಂಡ್ಸ್ ನಾಯಕಿ ಪಿಯಾನ್ ಸ್ಯಾಂಡರ್ಸ್ ಮತ್ತು ಫಾಯೆ ವ್ಯಾನ್ ಡೆರ್ ಎಲ್ಸ್ಟ್ ಗೋಲು ಬಾರಿಸಿದರು.
ಬಹುಮಾನ ಘೋಷಿಸಿದ ಹಾಕಿ ಇಂಡಿಯಾ
ವಾಸ್ತವವಾಗಿ ಹಾಕಿ ನಿಯಮದ ಪ್ರಕಾರ, ತಂಡದ ಪ್ರತಿಯೊಂದು ಗೆಲುವಿಗೂ 50 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ಇದೀಗ ಬಲಿಷ್ಠ ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಿರುವ ಭಾರತ ಮಹಿಳಾ ತಂಡದ ಪ್ರತಿಯೊಬ್ಬ ಆಟಗಾರ್ತಿಗೂ ತಲಾ 1 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ 50,000 ರೂ. ನಗದು ಬಹುಮಾನವನ್ನು ಹಾಕಿ ಇಂಡಿಯಾ ಘೋಷಿಸಿದೆ.
A win against the current Olympic and World Champions will definitely provide plenty of momentum and encouragement for our women's team.
A landmark victory for Team India!#FIHProLeague #HockeyIndia #IndiaKaGame...@cmo_odisha @sports_odisha @IndiaSports @Media_SAI… pic.twitter.com/dzGjHzqv2Y
— Hockey India (@TheHockeyIndia) February 25, 2025
ಉತ್ತಮ ಆರಂಭ ಪಡೆದ ನೆದರ್ಲ್ಯಾಂಡ್ಸ್
ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಆದರೆ ಎರಡನೇ ಕ್ವಾರ್ಟರ್‌ನ 17 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಗಳಿಸುವ ಮೂಲಕ ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಮೇಲುಗೈ ಸಾಧಿಸಿತು . ಇದಾದ ನಂತರ, ಮೊದಲಾರ್ಧದ ಕೊನೆಯ ಎರಡು ನಿಮಿಷಗಳಲ್ಲಿ ನೆದರ್ಲ್ಯಾಂಡ್ಸ್ ತನ್ನ ಎರಡನೇ ಗೋಲು ದಾಖಲಿಸಿ ಪಂದ್ಯದಲ್ಲಿ ಮತ್ತಷ್ಟು ಹಿಡಿತ ಸಾಧಿಸಿತು.
A historic win! India takes down the reigning Olympic and World Champions, the Netherlands. Proud of our girls 🇮🇳#FIHProLeague #HockeyIndia #IndiaKaGame...@CMO_Odisha @Sports_Odisha @IndiaSports @Media_SAI @FIH_Hockey pic.twitter.com/OB1lZfLSr0
— Hockey India (@TheHockeyIndia) February 25, 2025
ಭಾರತದ ಬಲವಾದ ಪುನರಾಗಮನ
ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣಕಾರಿಯಾಗಿ ಆಟವಾಡಿ ಎರಡು ಪ್ರಮುಖ ಗೋಲುಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿತು. 35 ನೇ ನಿಮಿಷದಲ್ಲಿ ದೀಪಿಕಾ ಹಾಗೂ 43ನೇ ನಿಮಿಷದಲ್ಲಿ ಬಲ್ಜೀತ್ ಕೌರ್ ಭಾರತದ ಪರ ಅದ್ಭುತ ಗೋಲು ದಾಖಲಿಸಿ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿದರು. ಕೊನೆಯ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೆಲುವಿನ ಹುಡುಕಾಟದಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರೂ ಯಾರಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ ಭಾರತ ಶೂಟೌಟ್‌ನಲ್ಲಿ 2-1 ಅಂತರದಿಂದ ನೆದರ್ಲ್ಯಾಂಡ್ಸ್ ವಿರುದ್ಧ ಗೆಲುವು ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ