AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 New Teams: ಐಪಿಎಲ್ ಹೊಸ ತಂಡಗಳ ಘೋಷಣೆ

IPL 2022 New Teams Announced: ಇನ್ನು ಐಪಿಎಲ್ 2022ರಲ್ಲಿ ಒಟ್ಟು 74 ಪಂದ್ಯಗಳು ನಡೆಯುವ ಸಾಧ್ಯತೆಯಿದೆ. 2011 ರ ಐಪಿಎಲ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿದಿತ್ತು. ಈ ವೇಳೆ 70 ಲೀಗ್ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್‌ ಪಂದ್ಯಗಳನ್ನು ನಡೆಸಲಾಗಿತ್ತು.

IPL 2022 New Teams: ಐಪಿಎಲ್ ಹೊಸ ತಂಡಗಳ ಘೋಷಣೆ
ಹಾಗೆಯೇ ಯಾವುದೇ ಟ್ರಾನ್ಸ್​ಫರ್ ವಿಂಡೋ ಆಯ್ಕೆ ಕೂಡ ಇರುವುದಿಲ್ಲ. ಟ್ರಾನ್​ಫರ್ ವಿಂಡೋ ಅಂದರೆ ಆಟಗಾರರ ವರ್ಗಾವಣೆ. ಈ ಆಯ್ಕೆಯನ್ನು ನೀಡುವುದು ಸಾಮಾನ್ಯ ಹರಾಜಿಗೂ ಮುನ್ನ. ಅಂದರೆ ಮೆಗಾ ಹರಾಜು ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಉಳಿದ ಎರಡು ವರ್ಷಗಳ ಅವಧಿಯಲ್ಲೂ ನಡೆಯುವ ಹರಾಜಿಗೂ ಮುನ್ನ ಬೇರೆ ತಂಡದಿಂದ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಹಾಗೆಯೇ ಐಪಿಎಲ್​ ಮೊದಲಾರ್ಧದ ಮುಕ್ತಾಯದ ಬಳಿಕ ಕೂಡ ಟ್ರಾನ್ಸ್​ಫರ್ ವಿಂಡೋ ಆಯ್ಕೆ ಇರುತ್ತದೆ. ಇದರ ಹೊರತಾಗಿ ಮೆಗಾ ಹರಾಜಿಗೂ ಮುನ್ನ ಯಾವುದೇ ಟ್ರಾನ್ಸ್​ಫರ್ ಆಯ್ಕೆ ಇರುವುದಿಲ್ಲ.
TV9 Web
| Edited By: |

Updated on:Oct 25, 2021 | 9:20 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ 2022 ರಲ್ಲಿ (IPL 2022) 10 ತಂಡಗಳು ಕಣಕ್ಕಿಳಿಯಲಿದೆ. ಪ್ರಸ್ತುತ ಇರುವ 8 ತಂಡಗಳೊಂದಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿದೆ. ಈ ಎರಡು ಹೊಸ ತಂಡಗಳನ್ನು ಉದ್ಯಮಿ ಆರ್​ಪಿ ಸಂಜಯ್ ಗೊಯೇಂಕಾ ಹಾಗೂ ಸಿವಿಸಿ ಕ್ಯಾಪಿಟಲ್ಸ್ ಕಂಪೆನಿ  ಖರೀದಿಸಿದೆ. ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 9 ಕಂಪೆನಿಗಳು ಕಾಣಿಸಿಕೊಂಡಿತ್ತು. ಅದರಂತೆ ಆಲ್ ಕಾರ್ಗೋ ಲಾಜಿಸ್ಟಿಕ್ಸ್, ಅದಾನಿ ಗ್ರೂಪ್, ಆರ್‌ಪಿ ಸಂಜೀವ್ ಗೋಯೆಂಕಾ, ಉದಯ್ ಕೋಟಕ್, ಗ್ಲೇಜರ್ಸ್, ಸಿವಿಸಿ ಕ್ಯಾಪಿಟಲ್ಸ್, ಟೊರೆಂಟ್ ಫಾರ್ಮಾ ಹೊಸ ತಂಡಗಳ ಖರೀದಿಗಾಗಿ ಪೈಪೋಟಿ ನಡೆಸಿತ್ತು.

ಅಂತಿಮವಾಗಿ ಆರ್​ಪಿ ಸಂಜೀವ್ ಗೊಯೇಂಕಾ ಅವರ ಆರ್​ಪಿಎಸ್​ಜಿ ಗ್ರೂಪ್ 7,090 ಕೋಟಿಗೆ ಮೊದಲ ತಂಡವನ್ನು ಖರೀದಿಸಿತು. ಇನ್ನು 2ನೇ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ ಪ್ರೈವೇಟ್ ಇಕ್ಯುಟಿ ಕಂಪೆನಿ 5,625 ಕೋಟಿಗೆ ತನ್ನದಾಗಿಸಿಕೊಂಡಿದೆ. ಅಂದಹಾಗೆ ಸಂಜೀವ್ ಗೊಯೇಂಕಾ IPL 2016-17 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಮಾಲೀಕರಾಗಿದ್ದರು. ಇದೀಗ ಮತ್ತೊಮ್ಮೆ ಐಪಿಎಲ್​ ತಂಡವನ್ನು ಖರೀದಿಸಿರುವುದು ವಿಶೇಷ. ಅದರಂತೆ ಮುಂದಿನ ಸೀಸನ್​ನಲ್ಲಿ ಲಕ್ನೋ ಹಾಗೂ ಅಹಮದಾಬಾದ್ ಸ್ಟೇಡಿಯಂಗಳನ್ನು ಕೇಂದ್ರೀಕರಿಸಿ ಹೊಸ ತಂಡಗಳು ಕಣಕ್ಕಿಳಿಯಲಿದೆ.

ಆರ್​ಪಿಎಸ್​ಜಿ ಗ್ರೂಪ್ 7,090 ಕೋಟಿಗೆ ಲಕ್ನೋ ಮೂಲದ ತಂಡವನ್ನು ತಮ್ಮದಾಗಿಸಿಕೊಂಡಿದ್ದರೆ, ಸಿವಿಸಿ ಕ್ಯಾಪಿಟಲ್ಸ್ 5,200 ಕೋಟಿ ನೀಡಿ ಅಹಮದಾಬಾದ್ ತಂಡವನ್ನು ಖರೀದಿಸಿದೆ. ಈ ಎರಡು ತಂಡಗಳ ಸೇರ್ಪಡೆಯೊಂದಿಗೆ ಐಪಿಎಲ್ ಸೀಸನ್ 15 ನಲ್ಲಿ ಒಟ್ಟು 10 ತಂಡಗಳ ನಡುವೆ ಕಾದಾಟ ನಡೆಯಲಿದೆ.

ಇನ್ನು ಐಪಿಎಲ್ 2022ರಲ್ಲಿ ಒಟ್ಟು 74 ಪಂದ್ಯಗಳು ನಡೆಯುವ ಸಾಧ್ಯತೆಯಿದೆ. 2011 ರ ಐಪಿಎಲ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿದಿತ್ತು. ಈ ವೇಳೆ 70 ಲೀಗ್ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್‌ ಪಂದ್ಯಗಳನ್ನು ನಡೆಸಲಾಗಿತ್ತು. ಅದೇ ಸ್ವರೂಪದಲ್ಲಿ ಮುಂದಿನ ಬಾರಿ ಕೂಡ ಐದೈದು ತಂಡಗಳ ಎರಡು ಗ್ರೂಪ್​ಗಳನ್ನಾಗಿ ಮಾಡಲಿದೆ. ಇಲ್ಲಿ ಪ್ರತಿ ಗುಂಪಿನಲ್ಲಿ, ಒಂದು ತಂಡವು ಇತರ ನಾಲ್ಕು ತಂಡಗಳ ವಿರುದ್ದ ಎರಡು ಬಾರಿ ಆಡಲಿದೆ. ಬಳಿಕ ಡ್ರಾ ಮೂಲಕ ಎರಡನೇ ಗುಂಪಿನ ತಂಡಗಳ ವಿರುದ್ದದ ಪಂದ್ಯಗಳನ್ನು ನಿರ್ಧರಿಸಲಾಗುತ್ತದೆ. ಅದರಂತೆ ಪ್ರತಿ ತಂಡಗಳಿಗೆ 14 ಲೀಗ್ ಪಂದ್ಯಗಳು ಇರಲಿದೆ.

ಹಾಗೆಯೇ ಮುಂದಿನ ಸೀಸನ್​ ಐಪಿಎಲ್​ಗಾಗಿ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ಹೀಗಾಗಿ ಪ್ರತಿ ತಂಡಗಳು ಮೂರು ಅಥವಾ ನಾಲ್ಕು ಆಟಗಾರರನ್ನು ಉಳಿಸಿ ಉಳಿದ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದರಿಂದಾಗಿ ಪ್ರತಿ ತಂಡಗಳಲ್ಲೂ ಮಹತ್ವದ ಬದಲಾವಣೆಯಾಗಲಿದೆ. ಹಾಗೆಯೇ ಹೊಸದಾಗಿ ಸೇರ್ಪಡೆಯಾದ ಫ್ರಾಂಚೈಸಿಗಳಿಗೆ ಡ್ರಾಫ್ಟ್ ಅವಕಾಶ ಇರಲಿದ್ದು, ಅದರಂತೆ ಹರಾಜಿಗೂ ಮುನ್ನ ಬಿಡ್ಡಿಂಗ್​ಗೆ ಹೆಸರು ನೋಂದಣಿ ಮಾಡಿದ ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು. ಇದರಿಂದಾಗಿ ಕೆಲ ಸ್ಟಾರ್​ ಆಟಗಾರರು ನೇರವಾಗಿ ಹೊಸ ಫ್ರಾಂಚೈಸಿಗಳ ಪಾಲಾಗಲಿದೆ. ಇನ್ನು  ಮೆಗಾ ಹರಾಜು ಪ್ರಕ್ರಿಯೆಯು ಡಿಸೆಂಬರ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

ಇದನ್ನೂ ಓದಿ:  Virat Kohli: ಸೋತರೂ ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

Published On - 7:23 pm, Mon, 25 October 21