ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!

ಬೆಂಗಳೂರಿನಲ್ಲಿ ಮಾರ್ಚ್ 28 ರಂದು ನಡೆಯಲಿರುವ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ, ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪಂದ್ಯದ ವೀಕ್ಷಕರಿಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣ ಪ್ರವೇಶ-ನಿರ್ಗಮನ ದ್ವಾರಗಳ ಕುರಿತು ಪ್ರಮುಖ ಮಾಹಿತಿ ಇಲ್ಲಿದೆ. ಸುರಕ್ಷಿತವಾಗಿ ಪಂದ್ಯ ವೀಕ್ಷಿಸಲು ಈ ನಿಯಮಗಳನ್ನು ಪಾಲಿಸಿ.

ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!
ಸಾಂದರ್ಭಿಕ ಚಿತ್ರ
Image Credit source: Tv9 kannada
Edited By:

Updated on: Mar 24, 2026 | 5:03 PM

ಬೆಂಗಳೂರು, ಮಾ.24: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ನಡೆಯಲಿದೆ. ಈ ಬಾರಿ ಪಂದ್ಯಕ್ಕೆ ಭಾರೀ ಜನ ಸೇರುವ ಸಾಧ್ಯತೆಗಳು ಇದೆ. ಅದರಲ್ಲೂ ನೆಚ್ಚಿನ ಟೀಮ್​​​ ಆರ್​​ಸಿಬಿ ಬೆಂಗಳೂರಿನಲ್ಲಿ ಆಡುತ್ತಿದೆ ಎಂದರೆ ಖಂಡಿತ ಜನ ಬರುವುದು ಖಂಡಿತ. ಅದಕ್ಕಾಗಿ ಜನರನ್ನು ಹಾಗೂ ವಾಹನಗಳನ್ನು ನಿಭಾಯಿಸಲು ಹಲವು ಕ್ರಮಗಳನ್ನು ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ವಾಹನ ಸಂಚಾರ ಹಾಗೂ ಪಾರ್ಕಿಂಗ್​​​, ಜನರ ಓಡಾಟ ಎಲ್ಲದಕ್ಕೂ ಹೊಸ ರೂಲ್ಸ್​​ ತರಲಾಗಿದೆ. ಪಂದ್ಯಗಳ ದಿನದಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಮಾರ್ಚ್ 28 & ಏಪ್ರಿಲ್ 5ರವರೆಗೆ ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ರಸ್ತೆ ಮತ್ತು ಸಿಟಿ ಓ ಜಂಕ್ಷನ್ ಸಂಪೂರ್ಣ ಬಂದ್​​ ಮಾಡಲಾಗುವುದು. ಎಂ.ಜಿ. ರಸ್ತೆಯ ಅನಿಲ್ ಕುಂಬಳೆ ವೃತ್ತದಿಂದ ಅನಿಲ್ ಕುಂಬಳೆ ಜಂಕ್ಷನ್ ವರೆಗೆ ನಿಷೇಧವನ್ನು ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದರ ಜತೆಗೆ ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡು ಬದಿಗಳಲ್ಲಿ ಸಂಚಾರ ನಿಷೇಧ ಮಾಡಲಾಗುವುದು. ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಬಂಧ ಮಾಡಲಾಗಿದೆ. ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ಹಾಗೂ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ ಮತ್ತು ಬಾಲಭವನ ಮುಂಭಾಗದ ಫೌಂಟೇನ್ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಇನ್ನು ಪಂದ್ಯ ನೋಡಲು ಬರುವ ಕ್ರಿಕೆಟ್​​ ಪ್ರೇಮಿಗಳಿಗೆ ವಾಹನಗಳನ್ನು ನಿಲ್ಲಿಸಲು ಕೂಡ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರಿ ಪೊಲೀಸರ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಸೂಚಿಸಿರುವ ಕಡೆಗಳಲ್ಲಿ ವಾಹನ ನಿಲುಗಡೆ ಮಾಡಬಹುದು. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೇಂಟ್ ಜೋಸೆಫ್ ಸ್ಕೂಲ್ ಮೈದಾನ (ವಿಠ್ಠಲ್ ಮಲ್ಯ ರಸ್ತೆ), ಫ್ರೀಡಂ ಪಾರ್ಕ್ (MLCP ಮಲ್ಟಿ ಲೆವೆಲ್ ಪಾರ್ಕಿಂಗ್), ಗರುಡ ಮಾಲ್ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ, ಯುಬಿ ಸಿಟಿ (UB City) ಪಾರ್ಕಿಂಗ್ ಸ್ಥಳ ಪಾರ್ಕಿಂಗ್ ಮಾಡಬಹುದು.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB vs SRH ಹೈವೋಲ್ಟೇಜ್ ಪಂದ್ಯ! ನಿಮಗೂ ಟಿಕೆಟ್​​ ಬೇಕಾ? ಬೆಲೆ ಎಷ್ಟು? ಎಲ್ಲಿ ಬುಕ್ ಮಾಡಬೇಕು?

ಇನ್ನು ಸ್ಟೇಡಿಯಂ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕೂಡ ಸೂಚಿಸಲಾಗಿದೆ. ಪ್ರವೇಶ ಗೇಟ್ ನಂಬರ್ E1 ರಿಂದ E3, E18, E19, E22 ಮತ್ತು E11 ರಿಂದ E17 ರ ಮೂಲಕ ಪ್ರವೇಶಿಸಬಹುದು. ಪಂದ್ಯ ಮುಗಿದ ನಂತರ E5, E8, E09, E9A ಗೇಟ್‌ಗಳ ಮೂಲಕ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಗೇಟ್ ನಂಬರ್ E10 ಕೇವಲ ಆಟಗಾರರು, ವಿಐಪಿಗಳು ಮತ್ತು ಪ್ರಮುಖ ಅತಿಥಿಗಳಿಗೆ ಮೀಸಲಾಗಿದೆ. ಕ್ಯಾಬ್/ಆಟೋ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್ಸ್ ಬಗ್ಗೆಯೂ ಇಲ್ಲಿ ತಿಳಿಸಿದ್ದಾರೆ. ಬಿಆರ್‌ವಿ (BRV) ಮೈದಾನ ಗೇಟ್ ನಂಬರ್ 6 ತಿಳಿಸಿದ್ದಾರೆ. ಮಾಣಿಕ್ ಷಾ ಪರೇಡ್ ಮೈದಾನ ಗೇಟ್ ನಂಬರ್ 3 ಕೂಡ ಗುರುತು ಮಾಡಲಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us