AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್​ ನಡುವೆ 5 ಹೊಸ ನಿಯಮಗಳು ಜಾರಿ

IPL Rules Update: ಇಂಡಿಯನ್ ಪ್ರೀಮಿಯರ್ ಲೀಗ್​ ಟೂರ್ನಿಯ ನಡುವೆ ಬಿಸಿಸಿಐ ಐದು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮದ ಮೂಲಕ ಮೈದಾನದಲ್ಲಿ ಹೆಚ್ಚುವರಿ ಆಟಗಾರರ ಓಡಾಟಕ್ಕೆ ಬ್ರೇಕ್ ಹಾಕಿದೆ. ಹಾಗೆಯೇ ಬೌಂಡರಿ ಲೈನ್​ ಹೊರಗೆ ನಿಲ್ಲುವ ಆಟಗಾರರ ಸಂಖ್ಯೆಯನ್ನು ಕೂಡ ಮಿತಿಗೊಳಿಸಿದೆ.

IPL 2026: ಐಪಿಎಲ್​ ನಡುವೆ 5 ಹೊಸ ನಿಯಮಗಳು ಜಾರಿ
Ipl 2026
ಝಾಹಿರ್ ಯೂಸುಫ್
|

Updated on:Apr 09, 2026 | 11:20 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ಪಂದ್ಯದ ಶಿಸ್ತು ಮತ್ತು ಸಮಯ ಪಾಲನೆಯನ್ನು ಕಾಪಾಡಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಮುಖ್ಯವಾಗಿ ಪಂದ್ಯದ ವೇಳೆ ತಂಡದ ‘ಬೆಂಚ್ ಆಟಗಾರರ’ (ಆಡದ ಆಟಗಾರರು) ಅನಗತ್ಯ ಓಡಾಟಕ್ಕೆ ಬಿಸಿಸಿಐ ಕಡಿವಾಣ ಹಾಕಿದೆ.

ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಬೌಂಡರಿ ಗೆರೆಯ ಸುತ್ತ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಈ ಕೆಳಗಿನ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ:

  1. ಮೈದಾನ ಪ್ರವೇಶಕ್ಕೆ ನಿರ್ಬಂಧ: ತಂಡದ ಪಟ್ಟಿಯಲ್ಲಿ ಹೆಸರಿಸಲಾದ 16 ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ಮಾತ್ರ ಮೈದಾನದ ಒಳಗೆ ಪ್ರವೇಶಿಸಲು ಅನುಮತಿ ಇರುತ್ತದೆ. ಈ 16 ಆಟಗಾರರ ಪಟ್ಟಿಯಲ್ಲಿ ಇಲ್ಲದ ಉಳಿದ ಆಟಗಾರರು ಪಂದ್ಯ ನಡೆಯುವಾಗ ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ರವಾನಿಸಲು ಮೈದಾನ ಪ್ರವೇಶಿಸುವಂತಿಲ್ಲ.
  2.  ಬೌಂಡರಿ ಲೈನ್ ಬಳಿ ಕೇವಲ ಐವರು: ಪಂದ್ಯದ ವೇಳೆ ಬೌಂಡರಿ ಲೈನ್​ ಸುತ್ತ ತರಬೇತಿ ಬಿಬ್ಸ್ (Bibs) ಧರಿಸಿ ಓಡಾಡುವ ಆಟಗಾರರ ಸಂಖ್ಯೆಯನ್ನು ಐದಕ್ಕೆ (5) ಸೀಮಿತಗೊಳಿಸಲಾಗಿದೆ. ಈ ಐವರು ಆಟಗಾರರು ನಾಮನಿರ್ದೇಶಿತ 16 ಆಟಗಾರರ ಪೈಕಿ ಇರಬಹುದು ಅಥವಾ ತಂಡದ ಇತರೆ ಆಟಗಾರರಾಗಿರಬಹುದು.
  3. ಡಗೌಟ್ ನಿಯಮ: ಬೌಂಡರಿ ಲೈನ್​ ಸುತ್ತ ತರಬೇತಿ ಬಿಬ್ಸ್​ ಧರಿಸಿದ ಆಟಗಾರರನ್ನು ಬಿಟ್ಟು ಉಳಿದ ಎಲ್ಲಾ ಆಟಗಾರರು ಕಡ್ಡಾಯವಾಗಿ ತಂಡದ ಡಗೌಟ್‌ನಲ್ಲೇ ಇರಬೇಕು.
  4. ಜಾಹೀರಾತು ಫಲಕಗಳ ನಿಯಮ: ಬೌಂಡರಿ ಲೈನ್ ಮತ್ತು ಎಲ್ಇಡಿ (LED) ಜಾಹೀರಾತು ಫಲಕಗಳ ನಡುವಿನ ಜಾಗದಲ್ಲಿ ಆಟಗಾರರು ಅನಗತ್ಯವಾಗಿ ಓಡಾಡುವಂತಿಲ್ಲ.
  5. ಬೌಂಡರಿ ಲೈನ್​ನಲ್ಲಿ ಕೂರುವಂತಿಲ್ಲ: ಯಾವುದೇ ಆಟಗಾರ ಅಥವಾ ಸಿಬ್ಬಂದಿ ಎಲ್ಇಡಿ ಬೋರ್ಡ್‌ಗಳ ಮುಂದೆ ಕುಳಿತುಕೊಳ್ಳುವಂತಿಲ್ಲ, ಇದು ಪ್ರಾಯೋಜಕರ ಪ್ರಚಾರಕ್ಕೆ ಅಡ್ಡಿಯಾಗಬಾರದು ಎಂಬುದು ಬಿಸಿಸಿಐ ಉದ್ದೇಶ.

ಈ ಹಿಂದೆ ಪ್ರಕಟಿಸಿದ ನಿಯಮಗಳು:

  1.  ಪಂದ್ಯದ ದಿನದ ಅಭ್ಯಾಸ: ಪಂದ್ಯ ನಡೆಯುವ ದಿನದಂದು ಮುಖ್ಯ ಪಿಚ್‌ನ ಸುತ್ತಲಿನ ಜಾಗದಲ್ಲಿ ಯಾವುದೇ ಅಭ್ಯಾಸ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  2. ಸಮವಸ್ತ್ರ ಸಂಹಿತೆ: ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರರು ಸ್ಲೀವ್‌ಲೆಸ್ ಜೆರ್ಸಿ ಅಥವಾ ಫ್ಲಾಪಿ ಹ್ಯಾಟ್‌ಗಳನ್ನು ಧರಿಸುವಂತಿಲ್ಲ.
  3. ಖಾಸಗಿ ವಾಹನಗಳಿಗೆ ನೋ ಎಂಟ್ರಿ: ಆಟಗಾರರು ಕ್ರೀಡಾಂಗಣಕ್ಕೆ ಬರಲು ಕಡ್ಡಾಯವಾಗಿ ತಂಡದ ಬಸ್ ಮಾತ್ರ ಬಳಸಬೇಕು, ಖಾಸಗಿ ವಾಹನ ಬಳಕೆಗೆ ಅನುಮತಿ ಇಲ್ಲ.

ಇದನ್ನೂ ಓದಿ: IPL 2026: 5 ಆಟಗಾರರ ಬಗ್ಗೆ ಬಿಗ್ ಅಪ್​ಡೇಟ್​

ಐಪಿಎಲ್ ಪಂದ್ಯಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರುತ್ತಿರುವುದರಿಂದ, ಪಂದ್ಯದ ಘನತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳಲು ಈ ಬದಲಾವಣೆಗಳು ಅನಿವಾರ್ಯ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಈ ನಿಯಮಗಳನ್ನು ಉಲ್ಲಂಘಿಸುವ ತಂಡಗಳಿಗೆ ಕಠಿಣ ದಂಡ ವಿಧಿಸುವ ಸಾಧ್ಯತೆಯೂ ಇದೆ.

Published On - 11:17 am, Thu, 9 April 26

Follow Us