
ಮುಂಬೈ(ನ.12): ಇಂಡಿಯನ್ ಪ್ರಿಮಿಯರ್ ಲೀಗ್ (IPL) ಸೀಸನ್ 16ಕ್ಕೆ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆ ಶುರುವಾಗಿದ್ದು, ಇದರ ಮೊದಲ ಭಾಗವಾಗಿ ಇದೀಗ ಮುಂಬೈ ಇಂಡಿಯನ್ಸ್, ಟ್ರೇಡಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ವೇಗಿಯನ್ನು ಖರೀದಿಸಿದೆ. ಆರ್ಸಿಬಿ ತಂಡದ ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹ್ರೆನ್ಡಾರ್ಫ್ ಮುಂಬೈ ಪಾಲಾಗಿದ್ದಾರೆ.
IPL 2023: ಐಪಿಎಲ್ ಮಿನಿ ಹರಾಜಿನ ದಿನಾಂಕ ಬಹಿರಂಗ; ಭಾರತದಲ್ಲಿಯೇ ಆಟಗಾರರ ಹರಾಜು ಪ್ರಕ್ರಿಯೆ..!
32 ವರ್ಷದ ವೇಗಿ ಜೇಸನ್ ಬೆಹ್ರೆನ್ಡಾರ್ಫ್ 2018 ಹಾಗೂ 2019ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದ್ರೆ, ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದರು. ಇದೀಗ 2023ರ ಐಪಿಎಲ್ ಟೂರ್ನಿಗೆ ಮತ್ತೆ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ.
2022ರ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಪ್ರಾಂಚೈಸಿ ವೇಗಿ ಜೇಸನ್ ಅವರನ್ನು 75 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿ ಮಾಡಿತ್ತು. ಆದ್ರೆ, 2022ರ ಐಪಿಎಲ್ ಟೂರ್ನಿಯಲ್ಲಿ ಜೇಸನ್ಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಇನ್ನು 2021ರಲ್ಲಿ ಜೇಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಈಗ ಮುಂದಿನ ಅಂದ್ರೆ 2023ರಲ್ಲಿ ನಡೆಯಲಿರುವ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.
ಇನ್ನು ಆರ್ಸಿಬಿ ಬೆಹ್ರೆನ್ಡಾರ್ಫ್ ಟ್ವಿಟ್ಟರ್ನಲ್ಲಿ ಬೆಸ್ಟ್ ಆಫ್ ಲಕ್ ಹೇಳಿ ಬಿಳ್ಕೊಟ್ಟಿದ್ರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಟ್ವಿಟ್ಟರ್ನಲ್ಲಿ ವೆಲ್ಕಮ್ ಬ್ಯಾಕ್ ಎಂದು ಸ್ವಾಗತಿಸಿದೆ.
ಡಿ.23ಕ್ಕೆ ಐಪಿಎಲ್ ಮಿನಿ ಹರಾಜು
2023ರ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿ.23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಹರಾಜು ಪ್ರಕ್ರಿಯೆಯು ಬೆಂಗಳೂರು ಇಲ್ಲವೇ ಟರ್ಕಿಯ ಇಸ್ತಾಂಬುಲ್ನಲ್ಲಿ ನಡೆಯಬಹುದು ಎನ್ನಲಾಗಿತ್ತು. ಆದರೆ ಬಿಸಿಸಿಐ ಕೊಚ್ಚಿಯಲ್ಲಿ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನ.15ರೊಳಗೆ ಪ್ರಕಟಿಸಬೇಕಿದೆ. ಕಳೆದ ಹರಾಜಿನ ಬಳಿಕ ಉಳಿದ ಹಣ, ಆಟಗಾರರನ್ನು ಕೈಬಿಟ್ಟ ಬಳಿಕ ಉಳಿಯುವ ಹಣದ ಜೊತೆಗೆ ಹೆಚ್ಚುವರಿ 5 ಕೋಟಿ ರೂ. ಬಳಸಲು ಅವಕಾಶ ನೀಡಲಾಗಿದೆ.
Published On - 11:25 pm, Sat, 12 November 22