CCB ಭೀತಿ: ಬಳ್ಳಾರಿ ಟಸ್ಕರ್ಸ್ ಮಾಲೀಕ ರೆಡ್ಡಿ ಎಸ್ಕೇಪ್?
ಬೆಂಗಳೂರು: ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ಹಾಗೂ ದುಬೈ ತಂಡದ ಮಾಲೀಕ ಎಸ್ಕೇಪ್? ಹಾಗಿದ್ದಾನೆಂದು ಹೇಳಲಾಗುತ್ತಿದೆ. ಕೆಪಿಎಲ್ ಮೋಸದಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಬಿಯಿಂದ ಬಂಧನದ ಭೀತಿ ಹಿನ್ನೆಲೆಯಲ್ಲಿ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ ದುಬೈಗೆ ಓಡಿ ಹೋಗಿರುವ ಸಾಧ್ಯತೆಯಿದೆ. ಬಂಧನ ಭೀತಿಯಿಂದ ದುಬೈಗೆ ಪರಾರಿ? ಅಕ್ಟೋಬರ್ 22 ರಂದು ಒಂದು ಬಾರಿ ಸಿಸಿಬಿ ಮುಂದೆ ವಿಚಾರಣೆಗೆ ಅರವಿಂದ್ ರೆಡ್ಡಿ ಹಾಜರಾಗಿದ್ದರು. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಶ್ಫಾಕ್ […]
ಬೆಂಗಳೂರು: ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ಹಾಗೂ ದುಬೈ ತಂಡದ ಮಾಲೀಕ ಎಸ್ಕೇಪ್? ಹಾಗಿದ್ದಾನೆಂದು ಹೇಳಲಾಗುತ್ತಿದೆ.
ಕೆಪಿಎಲ್ ಮೋಸದಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಬಿಯಿಂದ ಬಂಧನದ ಭೀತಿ ಹಿನ್ನೆಲೆಯಲ್ಲಿ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ ದುಬೈಗೆ ಓಡಿ ಹೋಗಿರುವ ಸಾಧ್ಯತೆಯಿದೆ.
ಬಂಧನ ಭೀತಿಯಿಂದ ದುಬೈಗೆ ಪರಾರಿ? ಅಕ್ಟೋಬರ್ 22 ರಂದು ಒಂದು ಬಾರಿ ಸಿಸಿಬಿ ಮುಂದೆ ವಿಚಾರಣೆಗೆ ಅರವಿಂದ್ ರೆಡ್ಡಿ ಹಾಜರಾಗಿದ್ದರು. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಶ್ಫಾಕ್ ಥಾರಾ ಮಾದರಿಯಲ್ಲೇ ಫಿಕ್ಸಿಂಗ್ ನಡೆಸಿದ್ದ ಶಂಕೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿತ್ತು. ನೋಟಿಸ್ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿ ಲಿಖಿತ ಹೇಳಿಕೆ ದಾಖಲಿಸಿದ್ದರು. ಮುಂದಿನ ವಿಚಾರಣೆ ವೇಳೆ ಬಂಧನ ಮಾಡುವ ಭೀತಿಯಿಂದ ದುಬೈಗೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಎಲ್ಒಸಿ ಜಾರಿ ಮಾಡಿರುವ ಸಿಸಿಬಿ ಪೊಲೀಸರು ಯಾವುದೇ ಕ್ಷಣದಲ್ಲಾದ್ರೂ ಅರವಿಂದ್ ವೆಂಕಟೇಶ್ ರೆಡ್ಡಿ ಬಂಧನ ಮಾಡಲು ಕಾಯುತ್ತಿದ್ದಾರೆ. ಈ ಹಿಂದೆ ಕೆಪಿಎಲ್ ಆಟಗಾರರು, ಮಾಲೀಕರು ಹಾಗೂ ಬುಕ್ಕಿಗಳು ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.