ಫೈನಲ್ ಪಂದ್ಯಕ್ಕೂ ಮುನ್ನ ಯಮಾಲ್ ವಿಚಿತ್ರ ‘ಶಪಥ’

FIFA World Cup 2026 Final: ಫಿಫಾ ವಿಶ್ವಕಪ್ 2026ರ ಮಹಾಫೈನಲ್ ಪಂದ್ಯವು ಇಂದು, ಭಾನುವಾರ ಜುಲೈ 19 ರಂದು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಯುವ ಪಡೆಯ ಸ್ಪೇನ್ ತಂಡಗಳು ಮುಖಾಮುಖಿಯಾಗಲಿದೆ.

ಫೈನಲ್ ಪಂದ್ಯಕ್ಕೂ ಮುನ್ನ ಯಮಾಲ್ ವಿಚಿತ್ರ ಶಪಥ
Lamine Yamal
Image Credit source: GettyImages

Updated on: Jul 19, 2026 | 12:12 PM

ಜಗತ್ತಿನಾದ್ಯಂತ ಫಿಫಾ ವಿಶ್ವಕಪ್ ಫೈನಲ್ ಫೀವರ್ ಶುರುವಾಗಿದೆ. ಭಾನುವಾರ (ಜುಲೈ 19) ನಡೆಯಲಿರುವ ಮಹಾಫೈನಲ್ ಕದನದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಸ್ಪೇನ್ ತಂಡದ ಯುವ ಸೆನ್ಸೇಷನ್ ಲಾಮಿನ್ ಯಮಾಲ್ (Lamine Yamal) ವಿಚಿತ್ರ ಶಪಥವೊಂದನ್ನು ಮಾಡಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಯಮಾಲ್, “ಈ ಬಾರಿ ಸ್ಪೇನ್ ತಂಡ ವಿಶ್ವಕಪ್ ಗೆದ್ದರೆ, ನಾನು ಮುಂದಿನ ಮೂರು ವಾರಗಳ ಕಾಲ ಪೂರ್ತಿಯಾಗಿ ಗಡ್ಡ ಹಾಗೂ ಮೀಸೆ ಬೆಳೆಸುತ್ತೇನೆ” ಎಂದು ತಿಳಿಸಿದ್ದಾರೆ.

ಲಾಮಿನ್ ಯಮಾಲ್,  ಬಾರ್ಸಿಲೋನಾ ಕ್ಲಬ್ ಪರ ವೃತ್ತಿಪರ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೂ ಕ್ಲೀನ್-ಶೇವ್ ಲುಕ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಯಮಾಲ್ ಅವರ ಈ ‘ರಗಡ್ ಲುಕ್’ ಸವಾಲು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರೊಂದಿಗೆ, ಸ್ಪೇನ್ ಗೆದ್ದರೆ ತಮ್ಮ 100 ಜನ ಫಾಲೋವರ್ಸ್‌ಗೆ ‘ಬೀಟ್ಸ್ ಹೆಡ್‌ಫೋನ್’ ಉಡುಗೊರೆಯಾಗಿ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.

ಸ್ಪ್ಯಾನಿಷ್ ಆಟಗಾರರ ಕ್ರೇಜಿ ಭರವಸೆಗಳು!

ವಿಶ್ವಕಪ್ ಗೆಲುವಿಗಾಗಿ ಕೇವಲ ಲಾಮಿನ್ ಯಮಾಲ್ ಮಾತ್ರವಲ್ಲದೆ, ಸ್ಪೇನ್ ತಂಡದ ಇತರ ಪ್ರಮುಖ ಆಟಗಾರರು ಕೂಡ ವಿಶಿಷ್ಟವಾದ ಪ್ರತಿಜ್ಞೆಗಳನ್ನು ಮಾಡಿದ್ದಾರೆ.

  • ಮಾರ್ಕ್ ಕುಕುರೆಲ್ಲಾ : ಸ್ಪೇನ್ ತಂಡದ ಈ ರಕ್ಷಣಾತ್ಮಕ ಆಟಗಾರ, ಒಂದು ವೇಳೆ ಟ್ರೋಫಿ ಗೆದ್ದರೆ ತಮ್ಮ ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ಅವರ ಮುಖದ ಟ್ಯಾಟೂ ಅನ್ನು ತಮ್ಮ ಬೈಸೆಪ್ಸ್ ಮೇಲೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸುವುದಾಗಿಯೂ ತಿಳಿಸಿದ್ದಾರೆ.
  • ಗಾವಿ: ಸ್ಪೇನ್ ತಂಡದ ಈ ಮಿಡ್‌ಫೀಲ್ಡರ್, ತಂಡ ಚಾಂಪಿಯನ್ ಆದರೆ ತಮ್ಮ ಕೂದಲಿಗೆ ಸಂಪೂರ್ಣವಾಗಿ ಪಿಂಕ್ ಬಣ್ಣ ಬಳಿಯುವುದಾಗಿ ಸವಾಲು ಹಾಕಿದ್ದಾರೆ.
  • ಪೆಡ್ರಿ: ಮತ್ತೊಬ್ಬ ಯುವ ತಾರೆ ಪೆಡ್ರೆ, ವಿಶ್ವಕಪ್ ಗೆಲುವಿನ ಸಂಭ್ರಮಕ್ಕಾಗಿ ತಮ್ಮ ಕೂದಲನ್ನು ಹೊಂಬಣ್ಣಕ್ಕೆ ಬದಲಾಯಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕೇವಲ 1 ರನ್‌ನಿಂದ ಚಾಂಪಿಯನ್ ಪಟ್ಟಕ್ಕೇರಿದ ನೈಟ್ ರೈಡರ್ಸ್!

ಒಟ್ಟಿನಲ್ಲಿ, ವಿಶ್ವಕಪ್ ಟ್ರೋಫಿ ಯಾರ ಪಾಲಾಗಲಿದೆ ಎಂಬ ರೋಮಾಂಚನ ಒಂದೆಡೆಯಾದರೆ, ಯುವ ತಾರೆ ಲಾಮಿನ್ ಯಮಾಲ್ ಸೇರಿದಂತೆ ಸ್ಪೇನ್ ತಂಡದ ಆಟಗಾರರ ವಿಚಿತ್ರ ಪ್ರತಿಜ್ಞೆಗಳು ಏನಾಗಲಿವೆ ಎಂಬ ಕುತೂಹಲ ಮತ್ತೊಂದೆಡೆ. ಈ ಕುತೂಹಲದ ನಡುವೆ ಅರ್ಜೆಂಟೀನಾದ ಮೆಸ್ಸಿ ಪಡೆಯ ಪರಾಕ್ರಮದ ಮುಂದೆ ಸ್ಪೇನ್‌ನ ಯುವ ಸೈನ್ಯ ಗೆದ್ದು ಬೀಗುತ್ತಾ? ಯಮಾಲ್ ತಮ್ಮ ಗಡ್ಡ-ಮೀಸೆ ಬೆಳೆಸುವ ಸವಾಲನ್ನು ಪೂರೈಸುವಂತಾಗುತ್ತಾ? ಇದಕ್ಕೆಲ್ಲಾ ಭಾನುವಾರದ ಈ ಮಹಾಫೈನಲ್ ಪಂದ್ಯದಲ್ಲೇ ಉತ್ತರ ಸಿಗಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us