AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1 ರನ್‌ನಿಂದ ಚಾಂಪಿಯನ್ ಪಟ್ಟಕ್ಕೇರಿದ ನೈಟ್ ರೈಡರ್ಸ್!

Major League Cricket 2026: ಅಮೆರಿಕದಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವನ್ನು ಮಣಿಸಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಟ್ ರೈಡರ್ಸ್ ತಂಡವು 164 ರನ್​ಗಳಿಸಿದರೆ, ವಾಷಿಂಗ್ಟನ್ ಫ್ರೀಡಂ ತಂಡವು 163 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಒಂದು ರನ್​ನ ರೋಚಕ ಜಯ ಸಾಧಿಸಿದೆ.

ಕೇವಲ 1 ರನ್‌ನಿಂದ ಚಾಂಪಿಯನ್ ಪಟ್ಟಕ್ಕೇರಿದ ನೈಟ್ ರೈಡರ್ಸ್!
MLC 2026Image Credit source: MLC
ಝಾಹಿರ್ ಯೂಸುಫ್
|

Updated on: Jul 19, 2026 | 10:21 AM

Share

ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಾಸ್ ಏಂಜಲಿಸ್ ನೈಟ್ ರೈಡರ್ಸ್ (LAKR) ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಓಕ್ಲಾಂಡ್​ನ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಹೋರಾಡಿದ ವಾಷಿಂಗ್ಟನ್ ಫ್ರೀಡಂ ತಂಡವು ಒಂದು ರನ್​ನಿಂದ ಸೋಲೊಪ್ಪಿಕೊಂಡಿತು. ಇತ್ತ ಈ ಒಂದು ರನ್​ನ ರೋಚಕ ಜಯದೊಂದಿಗೆ ನೈಟ್ ರೈಡರ್ಸ್ ತಂಡವು ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನೈಟ್ ರೈಡರ್ಸ್ ಸಾಧಾರಣ ಮೊತ್ತ:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಾಸ್ ಏಂಜಲಿಸ್ ನೈಟ್ ರೈಡರ್ಸ್ ತಂಡ 19.4 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್ ಆಗಿತ್ತು. ಆರಂಭಿಕ ಆಟಗಾರ ಆ್ಯಂಡ್ರೆ ಫ್ಲೆಚರ್ (47 ರನ್, 27 ಎಸೆತ) ಮತ್ತು ಕಾಲಿನ್ ಮನ್ರೊ (40 ರನ್, 29 ಎಸೆತ) ಉತ್ತಮ ಆರಂಭ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಟ್ರಾಂಪ್ ಕೇವಲ 21 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡ 39 ರನ್ ಸಿಡಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಲು ನೆರವಾದರು. ವಾಷಿಂಗ್ಟನ್ ಫ್ರೀಡಂ ಪರ ಬೆನ್ ಡ್ವಾರ್ಶುಯಿಸ್ 31 ರನ್‌ಗಳಿಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಶಿಸ್ತುಬದ್ಧ ಬೌಲಿಂಗ್ ದಾಳಿ:

165 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ನೈಟ್ ರೈಡರ್ಸ್ ಶಿಸ್ತುಬದ್ಧ ಬೌಲಿಂಗ್ ಆಘಾತ ನೀಡಿತು. ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ಕೇವಲ 13 ರನ್ ನೀಡಿ 3 ಪ್ರಮುಖ ವಿಕೆಟ್ (ಸ್ಟೀವ್ ಸ್ಮಿತ್, ಮಿಚೆಲ್ ಓವನ್, ರಚಿನ್ ರವೀಂದ್ರ) ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದ್ದರು.

ನರೈನ್​ಗೆ ಉತ್ತಮ ಉತ್ತಮ ಸಾಥ್ ನೀಡಿದ ನಾಯಕ ಜೇಸನ್ ಹೋಲ್ಡರ್ 31 ರನ್‌ಗಳಿಗೆ 3 ವಿಕೆಟ್ ಕಿತ್ತರು. ಇದಾಗ್ಯೂ  ವಾಷಿಂಗ್ಟನ್ ಪರ ಓಬಸ್ ಪೀಟರ್ಸ್ (53 ರನ್, 24 ಎಸೆತ) ಮತ್ತು ಆಂಡ್ರೈಸ್ ಗೌಸ್ (40 ರನ್) ಗೆಲುವಿಗಾಗಿ ಹೋರಾಟ ಮುಂದುವರೆಸಿದ್ದರು.

14 ರನ್​ಗಳ ಅವಶ್ಯಕತೆ:

ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಗೆಲ್ಲಲು ಕೊನೆಯ ಓವರ್‌ನಲ್ಲಿ 14 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಓಬಸ್ ಪೀಟರ್ಸ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಪಂದ್ಯವನ್ನು ವಾಷಿಂಗ್ಟನ್ ಕಡೆಗೆ ತಿರುಗಿಸಿದರು. ಆದರೆ, ನೈಟ್ ರೈಡರ್ಸ್ ಬೌಲರ್ ಶಾಡ್ಲಿ ವ್ಯಾನ್ ಶಾಲ್ಕ್ವಿಕ್ ಅದ್ಭುತವಾಗಿ ಕಂಬ್ಯಾಕ್ ಮಾಡಿದರು.

ಪರಿಣಾಮ ಮುಂದಿನ ಐದು ಎಸೆತಗಳಲ್ಲಿ ಮೂರು ವಿಕೆಟ್ ಪತನಗೊಂಡವು. ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸುವ ಯತ್ನದಲ್ಲಿ ಲಾಹೀರು ಮಿಲಂತ ರನ್ ಔಟ್ ಆದರು. ಇದರೊಂದಿಗೆ 163 ರನ್​ಗಳೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡದ ಇನಿಂಗ್ಸ್ ಅಂತ್ಯವಾಯಿತು. ಈ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಕೇವಲ 1 ರನ್‌ನ ಐತಿಹಾಸಿಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.

ಲಾಸ್ ಏಂಜಲೀಸ್​ ನೈಟ್ ರೈಡರ್ಸ್ ಪ್ಲೇಯಿಂಗ್ 11: ಕಾಲಿನ್ ಮನ್ರೊ, ಆ್ಯಂಡ್ರೆ ಫ್ಲೆಚರ್, ಆ್ಯಂಡ್ರೆ ರಸೆಲ್, ಮ್ಯಾಥ್ಯೂ ಟ್ರಾಂಪ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್ (ನಾಯಕ), ಸೈಫ್ ಬದರ್, ಜಹ್ಮಾರ್ ಹ್ಯಾಮಿಲ್ಟನ್, ಸುನಿಲ್ ನರೈನ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಅಲಿ ಖಾನ್.

ಇದನ್ನೂ ಓದಿ: ವಿಶ್ವಕಪ್ ಗೆದ್ದರೆ ನಿವೃತ್ತಿ: ಯುವ ಆಟಗಾರನ ಘೋಷಣೆ!

ವಾಷಿಂಗ್ಟನ್ ಫ್ರೀಡಂ ಪ್ಲೇಯಿಂಗ್ 11: ಮಿಚೆಲ್ ಓವನ್, ಸ್ಟೀವ್ ಸ್ಮಿತ್ (ನಾಯಕ), ರಚಿನ್ ರವೀಂದ್ರ, ಆಂಡ್ರೈಸ್ ಗೌಸ್, ಲಾಹೀರು ಮಿಲಂತ, ನಿಖಿಲ್ ಚೌಧರಿ, ಬೆನ್ ಡ್ವಾರ್ಶುಯಿಸ್, ಇಯಾನ್ ಹಾಲೆಂಡ್, ಓಬಸ್ ಪೀಟರ್ಸ್, ಸೌರಭ್ ನೇತ್ರಾವಲ್ಕರ್, ಲಾಕಿ ಫರ್ಗುಸನ್.

Follow Us
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು
ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು
ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಚೆನ್ನಮ್ಮನ ಆಸಿಡ್‌ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ
ಚೆನ್ನಮ್ಮನ ಆಸಿಡ್‌ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ
‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ?
ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ತಮ್ಮ ಬೆನ್ನೆಲುಬಾಗಿದ್ದ ಪತ್ನಿಯ ಅಗಲಿಕೆಗೆ ಕಣ್ಣೀರಿಟ್ಟ ದೇವೇಗೌಡ್ರು
ತಮ್ಮ ಬೆನ್ನೆಲುಬಾಗಿದ್ದ ಪತ್ನಿಯ ಅಗಲಿಕೆಗೆ ಕಣ್ಣೀರಿಟ್ಟ ದೇವೇಗೌಡ್ರು
ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ
ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಲೈವ್ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಲೈವ್ ನೋಡಿ