Manu Bhaker: ಪ್ರಮುಖ ಬ್ರ್ಯಾಂಡ್​ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮನು ಭಾಕರ್

Manu Bhaker: ಪ್ಯಾರಿಸ್ ಒಲಿಂಪಿಕ್ಸ್​ನ ಶೂಟಿಂಗ್​ನಲ್ಲಿ ಭಾರತದ ಮನು ಭಾಕರ್ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮಹಿಳಾ 10 ಮೀಟರ್ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು ಭಾಕರ್, ಮಂಗಳವಾರ 10 ಮೀ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಭಾರತೀಯ ಶೂಟರ್​ನ ಫೋಟೋಗಳನ್ನು ಕೆಲ ಕಂಪೆನಿಗಳು ಜಾಹೀರಾತುಗಳನ್ನು ಪ್ರಕಟಿಸಿದೆ.

Manu Bhaker: ಪ್ರಮುಖ ಬ್ರ್ಯಾಂಡ್​ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮನು ಭಾಕರ್
Manu Bhaker
Follow us
ಝಾಹಿರ್ ಯೂಸುಫ್
|

Updated on: Jul 31, 2024 | 9:52 AM

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿರುವ 22 ವರ್ಷದ ಶೂಟರ್ ಮನು ಭಾಕರ್ ಅವರ ತಂಡ ಪ್ರಮುಖ ಬ್ರ್ಯಾಂಡ್/​ಕಂಪೆನಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಒಲಿಂಪಿಕ್ಸ್​ ಪದಕ ಗೆದ್ದ ಬೆನ್ನಲ್ಲೇ ಕೆಲ ಕಂಪೆನಿಗಳು ಅವರ ಫೋಟೋ  ಮತ್ತು ವಿಡಿಯೋಗಳನ್ನು ಬಳಸಿಕೊಂಡು ಜಾಹೀರಾತುಗಳನ್ನು ಪ್ರಕಟಿಸಿರುವುದು.

ಮನು ಭಾಕರ್ ಅವರಿಗೆ ಪ್ರಾಯೋಜಕತ್ವ ವಹಿಸದಿರುವ ಕೆಲ ಪ್ರಮುಖ ಬ್ರ್ಯಾಂಡ್​ ಇದೀಗ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಅಭಿನಂದನಾ ಜಾಹೀರಾತುಗಳಲ್ಲಿ ಬಳಸಿ ಪ್ರಚಾರ ಪಡೆದುಕೊಳ್ಳುತ್ತಿದೆ. ಇಂತಹ ಕಂಪೆನಿಗಳ ಕಾನೂನು ಕ್ರಮ ಕೈಗೊಳ್ಳಲು ಐಒಎಸ್ ಸ್ಪೋರ್ಟ್ಸ್​ ಕಂಪೆನಿ ಮುಂದಾಗುತ್ತಿದೆ.

ಐಒಎಸ್ ಸ್ಪೋರ್ಟ್ಸ್ & ಇಂಟರ್​ಟೈನ್ಮೆಂಟ್ ಸಂಸ್ಥೆಯು ಮನು ಭಾಕರ್ ಅವರ ಕಾರ್ಯ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದು, ಇದೀಗ ಕ್ರೀಡಾಪಟುವಿನ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸಿ ಫೋಟೋಗಳು ಅಥವಾ ವೀಡಿಯೊಗಳನ್ನು ಬಳಸಿದ ಬ್ರ್ಯಾಂಡ್‌ಗಳಿಗೆ ಕಾನೂನು ಸೂಚನೆಗಳನ್ನು ಕಳುಹಿಸಲು ಈ ಕಂಪೆನಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಒಲಿಂಪಿಕ್ಸ್​ಗೂ ಮುನ್ನ ಮನು ಭಾಕರ್ ಅವರಿಗೆ ಪ್ರಾಯೋಕತ್ವ ನೀಡಿದ್ದು ಕ್ರೀಡಾ ಗೇರ್ ಮತ್ತು ಫಿಟ್‌ನೆಸ್ ಫ್ಯಾಶನ್ ಕಂಪನಿಯಾದ ಪರ್ಫಾರ್ಮ್ಯಾಕ್ಸ್ ಆಕ್ಟಿವ್‌ವೇರ್ ಮಾತ್ರ. ಆದರೀಗ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುತ್ತಿದ್ದಂತೆ ಬಜಾಜ್ ಫುಡ್ಸ್​, ಕಾಪಿಫಿಟ್​, ಎಲ್​ಐಸಿ, FIITJEE, ಬಿಎಸ್​ಸಿ ಇಂಟೀರಿಯರ್ಸ್, ಓಕ್‌ವುಡ್ ಇಂಟರ್‌ನ್ಯಾಶನಲ್ ಸ್ಕೂಲ್, ಮತ್ತು Kineto ನಂತಹ ಬ್ರ್ಯಾಂಡ್‌ಗಳು ಫೋಟೋ ಮತ್ತು ವಿಡಿಯೋಗಳೊಂದಿಗೆ ಜಾಹೀರಾತುಗಳನ್ನು ಪ್ರಕಟಿಸಿದೆ. ಆದರೆ ಈ ಕಂಪೆನಿಗಳು ಮನು ಭಾಕರ್ ಅವರಿಗೆ ಈ ಹಿಂದೆ ಯಾವುದೇ ನೆರವು ನೀಡಿಲ್ಲ. ಅಲ್ಲದೆ ಯಾವುದೇ ಪ್ರಾಯೋಜಕತ್ವವನ್ನು ಘೋಷಿಸಿಲ್ಲ.

ಇದಾಗ್ಯೂ ಇದೀಗ ಒಲಿಂಪಿಕ್ಸ್​ ಪದಕವನ್ನು ಮುಂದಿಟ್ಟುಕೊಂಡು ಮನು ಭಾಕರ್ ಹೆಸರಿನಲ್ಲಿ ಉಚಿತ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರವಾಗಿದ್ದು, ಹೀಗಾಗಿ ಮನು ಭಾಕರ್ ಅವರ ತಂಡ ಪ್ರಮುಖ ಬ್ರ್ಯಾಂಡ್​ಗಳ​ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Manu Bhaker: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್

ಮನು ಭಾಕರ್ ಹೊಸ ಸೆನ್ಸೇಷನ್:

ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿರುವ ಮನು ಭಾಕರ್ ಅವರ ಅವರನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳಲು ಇನ್ನೂ ಕೆಲ ಕಂಪೆನಿಗಳು ತುದಿಗಾಲಲ್ಲಿ ನಿಂತಿದೆ. ಸುಮಾರು ಅರ್ಧ ಡಝನ್ ಇತರ ಬ್ರ್ಯಾಂಡ್‌ಗಳು ಪ್ರಾಯೋಜಕತ್ವದ ವ್ಯವಹಾರಗಳಿಗಾಗಿ ಭಾಕರ್ ಅವರ ತಂಡದೊಡನೆ ಮಾತುಕತೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಟಿವಿ ಜಾಹೀರಾತಿನಲ್ಲಿ ಮನು ಭಾಕರ್ ಮಿಂಚಲಿದ್ದಾರೆ.

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್