- Kannada News Photo gallery Cricket photos Rashid Khan becomes fastest bowler to take 600 T20 wickets
Rashid Khan: 600 ವಿಕೆಟ್ಸ್… ವಿಶ್ವ ದಾಖಲೆ ನಿರ್ಮಿಸಿದ ರಶೀದ್ ಖಾನ್
Rashid Khan: Rashid Khan: ಅಫ್ಘಾನಿಸ್ತಾನ್, ಐಪಿಎಲ್, ಸಿಪಿಎಲ್, ಪಿಎಸ್ಎಲ್, ಬಿಗ್ ಬ್ಯಾಷ್ ಲೀಗ್ ತಂಡಗಳ ಪರ ಒಟ್ಟು 441 ಟಿ20 ಪಂದ್ಯಗಳನ್ನಾಡಿರುವ ರಶೀದ್ ಖಾನ್ ಒಟ್ಟು 600 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಸ್ಪಿನ್ನರ್ ಹಾಗೂ 2ನೇ ಬೌಲರ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on: Jul 31, 2024 | 3:23 PM

ಅಪ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 600 ವಿಕೆಟ್ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಹಂಡ್ರೆಡ್ ಲೀಗ್ನಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ರಶೀದ್ ಖಾನ್ ಆರು ನೂರು ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 600 ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನೂ ಸಹ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು.

ವೆಸ್ಟ್ ಇಂಡೀಸ್, ಐಪಿಎಲ್, ಸಿಪಿಎಲ್, ಬಿಗ್ ಬ್ಯಾಷ್ ಲೀಗ್, ಪಿಎಸ್ಎಲ್ ಸೇರಿದಂತೆ ಹಲವು ಲೀಗ್ಗಳನ್ನು ಆಡಿರುವ ಡ್ವೇನ್ ಬ್ರಾವೊ 545 ಟಿ20 ಪಂದ್ಯಗಳ ಮೂಲಕ 600 ವಿಕೆಟ್ಗಳನ್ನು ಕಬಳಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ರಶೀದ್ ಖಾನ್ ಯಶಸ್ವಿಯಾಗಿದ್ದಾರೆ.

ಐಪಿಎಲ್, ಸಿಪಿಎಲ್, ಬಿಗ್ ಬ್ಯಾಷ್, ಪಿಎಸ್ಎಲ್ ಸೇರಿದಂತೆ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಕಣಕ್ಕಿಳಿದಿರುವ ಅಫ್ಘಾನಿಸ್ತಾನ್ ಸ್ಪಿನ್ನರ್ ಕೇವಲ 441 ಟಿ20 ಪಂದ್ಯಗಳ ಮೂಲಕ 600 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಬ್ರಾವೊ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಇದೀಗ ಟಿ20 ವಿಕೆಟ್ ಸರದಾರರ ಪಟ್ಟಿಯಲ್ಲಿ 543 ಇನಿಂಗ್ಸ್ಗಳಲ್ಲಿ 630 ವಿಕೆಟ್ ಕಬಳಿಸಿರುವ ಡ್ವೇನ್ ಬ್ರಾವೊ ಅಗ್ರಸ್ಥಾನದಲ್ಲಿದ್ದರೆ, ರಶೀದ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದಾರೆ. 438 ಇನಿಂಗ್ಸ್ಗಳಿಂದ 600 ವಿಕೆಟ್ ಪೂರೈಸಿರುವ ರಶೀದ್ ಖಾನ್ಗೆ ಬ್ರಾವೊ ದಾಖಲೆ ಮುರಿಯಲು ಬೇಕಿರುವುದು ಕೇವಲ 31 ವಿಕೆಟ್ಗಳು ಮಾತ್ರ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ವಿಶ್ವ ದಾಖಲೆ ಅಫ್ಘಾನ್ ಸ್ಪಿನ್ ಮಾಂತ್ರಿಕನ ಪಾಲಾಗುವುದರಲ್ಲಿ ಡೌಟೇ ಇಲ್ಲ.
