Mumbai Marathon: ಮುಂಬೈನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಇಬ್ಬರು ಸಾವು, 22 ಮಂದಿ ಆಸ್ಪತ್ರೆಗೆ ದಾಖಲು
ಮುಂಬೈನಲ್ಲಿ ಭಾನುವಾರ ನಡೆದ ಮ್ಯಾರಥಾನ್‌ನಲ್ಲಿ 74 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಜಲೀಕರಣ ಪ್ರಮುಖ ಕಾರಣವಾಗಿದೆ. ಸಂಪೂರ್ಣ 42 ಕಿಲೋಮೀಟರ್ ಮ್ಯಾರಥಾನ್ ಓಟದ ವೇಳೆ 74 ವರ್ಷದ ರಾಜೇಂದ್ರ ಚಂದ್ಮಲ್ ಬೋರಾ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈನಲ್ಲಿ ಭಾನುವಾರ ನಡೆದ ಮ್ಯಾರಥಾನ್(Marathon)ನಲ್ಲಿ 74 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಜಲೀಕರಣ ಪ್ರಮುಖ ಕಾರಣವಾಗಿದೆ. ಸಂಪೂರ್ಣ 42 ಕಿಲೋಮೀಟರ್ ಮ್ಯಾರಥಾನ್ ಓಟದ ವೇಳೆ 74 ವರ್ಷದ ರಾಜೇಂದ್ರ ಚಂದ್ಮಲ್ ಬೋರಾ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಬೋರಾ ಹಠಾತ್ತನೆ ಮರೀನ್ ಡ್ರೈವ್‌ನಲ್ಲಿ ಕುಸಿದು ಬಿದ್ದಿದ್ದು, ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಮತ್ತೊಂದೆಡೆ, ಇನ್ನೋರ್ವ ಸ್ಪರ್ಧಿ ಸುವರ್ದೀಪ್ ಬ್ಯಾನರ್ಜಿ (46) ಕೂಡ ಮ್ಯಾರಥಾನ್‌ನಲ್ಲಿ ಮೂರ್ಛೆ ಹೋಗಿ ಸಾವನ್ನಪ್ಪಿದ್ದಾರೆ. ಬ್ಯಾನರ್ಜಿ ಅವರು ವರ್ಲಿಯಿಂದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದರು.ಪೊಲೀಸರು ಅವರನ್ನು ನಾಯರ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಅವರು ಸಾವನ್ನಪ್ಪಿದ್ದಾರೆ ಹೇಳಿದ್ದಾರೆ, ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮತ್ತಷ್ಟು ಓದಿ: ಬೆಂಗಳೂರು 18ಕೆ ಮ್ಯಾರಥಾನ್ಗೆ ಚಾಲನೆ: ನಮಸ್ಕಾರ ಬೆಂಗಳೂರು ಎಂದ ವಿರಾಟ್ ಕೊಹ್ಲಿ, ಇಲ್ಲಿದೆ ಫೋಟೋ ಝಲಕ್
ಇಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ, ಅದರ ಮುನ್ನಾ ದಿನ ನಡೆದ ಮುಂಬೈ ಮ್ಯಾರಥಾನ್ನಲ್ಲೂ ಕೂಡ ಜೈಶ್ರೀರಾಮ್ ಘೋಷಣೆ ಮೊಳಗಿದೆ. ಶ್ರೀರಾಮನ ಭಾವಚಿತ್ರವಿರುವ ಕೇಸರಿ ಧ್ವಜ ಹಿಡಿದ ಹೋರಾಟಗಾರರು ಜೈಶ್ರೀರಾಮ್ ಎಂದು ಹೇಳುತ್ತಾ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ.
ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ