ಕೋಲಾರ; ರಾಷ್ಟ್ರೀಯ ಕಬಡ್ಡಿ ಆಟಗಾರ ಕೊರೊನಾ ಸೋಂಕಿಗೆ ಬಲಿ
ರಾಷ್ಟ್ರೀಯ ಕಬ್ಬಡಿ ಆಟಗಾರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕಪ್ಪೂರು ಗ್ರಾಮದ ಗೋಪಾಲ್ (39) ಮೃತ ರಾಷ್ಟ್ರೀಯ ಕಬಡ್ಡಿ ಆಟಗಾರ.
ಭಾರತದಲ್ಲಿ ಕೊರೊನಾ ಇನ್ನಿಲ್ಲದಂತೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಇದರ ಸೋಂಕಿಗೆ ದೇಶದಲ್ಲಿ ದಿನ ನಿತ್ಯ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಮಹಾಮಾರಿಯ ದಾಳಿಗೆ ಅನೇಕ ರಾಷ್ಟ್ರೀಯ ಕ್ರೀಡಾಪಟುಗಳು ಬಲಿಯಾಗಿದ್ದಾರೆ. ಈಗ ಇಂತಹದ್ದೆ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇಂದು ರಾಷ್ಟ್ರೀಯ ಕಬ್ಬಡಿ ಆಟಗಾರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕಪ್ಪೂರು ಗ್ರಾಮದ ಗೋಪಾಲ್ (39) ಮೃತ ರಾಷ್ಟ್ರೀಯ ಕಬಡ್ಡಿ ಆಟಗಾರ.
15 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು ಕೋಲಾರದ ಆರ್.ಎಲ್ ಜಾಲಪ್ಪ ಅಸ್ಪತ್ರೆಯಲ್ಲಿ ಧಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಾಲ್ಕೈದು ದಿನಗಳ ಹಿಂದೆ ಅರೋಗ್ಯದಲ್ಲಿ ಮತ್ತಷ್ಟು ಏರು ಪೇರಾಗಿ ಐ.ಸಿ.ಯು ನಲ್ಲಿ ಚಿಕ್ಸೆ ನೀಡಲಾಗುತ್ತಿತ್ತು, ತಡ ರಾತ್ರಿಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಕಬ್ಬಡಿ ಆಡಿರುವ ಗೋಪಾಲ್ ನಿಧನಕ್ಕೆ ಜಿಲ್ಲೆಯ ಕ್ರೀಡಾ ಪಟುಗಳು ಸಂತಾಪ ಸೂಚಿಸಿದ್ದಾರೆ.
Published On - 6:22 pm, Wed, 26 May 21