ನಾನು ನನ್ನ ಪತ್ನಿಯ ಸಂಗಾತಿಯೇ ಹೊರತು ಆಕೆಯನ್ನು ಆಳುವ ಧಣಿಯಲ್ಲ: ಇರ್ಫಾನ್ ಪಠಾಣ್
ತಮ್ಮ ಹಿರಿಯ ಸಹೋದರ ಯೂಸುಫ್ ಪಠಾಣ್ರೊಂದಿಗೆ ಇರ್ಫಾನ್ ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಬ್ಬರ ಪಠಾಣ್ ಫೌಂಡೇಶನ್, ಎರಡನೇ ಅಲೆಯಲ್ಲಿ ಸೋಂಕಿತರಾಗಿರುವವರಿಗೆ ಆಹಾರ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಮ್ಲಜನಕದ ಸಾಂದ್ರಕ ಮುಂತಾದವುಗಳನ್ನು ಒದಗಿಸುತ್ತಿದೆ.
ಭಾರತದ ಮಾಜಿ ಆಲ್ರೌಂಡರ್ ಮತ್ತು ಈ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಕ್ರಿಕೆಟೇತರ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಪತ್ನಿ ಸಫಾ ಬೇಗಂ ಅವರ ಬ್ಲರ್ ಅಗಿರೋ ಇಮೇಜ್ಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆ ಮತ್ತು ದ್ವೇಷಕಾರುವ ಪ್ರತಿಕ್ರಿಯೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರು ಟ್ವೀಟ್ ಮೂಲಕ ಉತ್ತರ ನೀಡಿದ್ದ್ದಾರೆ. ಇರ್ಫಾನ್ ತಮ್ಮ ಹೆಂಡತಿಯ ಮುಖ ಬೇರೆಯವರಿಗೆ ಕಾಣದಂತಿರಲು ಉದ್ದೇಶಪೂರ್ವಕವಾಗಿ ಬ್ಲರ್ ಮಾಡಿದ್ದಾರೆ ಎಂದು ಕೆಲವರು ಹೇಳಿರುವುದು ಪಠಾಣ್ ಸಹೋದರರಲ್ಲಿ ಕಿರಿಯನಾಗಿರುವ ಇರ್ಫಾನ್ ಅವರನ್ನು ಕೆರಳಿಸಿದೆ. ಅದೇ ಚಿತ್ರವನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿ, ಈ ಚಿತ್ರವನ್ನು ಪೋಸ್ಟ್ ಮಾಡಿದ್ದು ನನ್ನ ಪತ್ನಿಯೇ ಹೊರತು ನಾನಲ್ಲ ಎಂದಿರುವ ಅವರು, ‘ನಾನು ಆಕೆಯ ಸಂಗಾತಿ, ಧಣಿ ಅಲ್ಲ’ ಎಂದು ಹೇಳಿದ್ದಾರೆ.
‘ಈ ಚಿತ್ರವನ್ನು ಮಗನ ಅಕೌಂಟ್ನಿಂದ ನನ್ನ ಪಟ್ಟದರಸಿಯೇ ಪೋಸ್ಟ್ ಮಾಡಿದ್ದಾಳೆ. ಇದರ ಬಗ್ಗೆ ಅನೇಕ ದ್ವೇಷಪೂರ್ಣ ಕಾಮೆಂಟ್ಗಳು ಬರುತ್ತಿವೆ. ಅದೇ ಚಿತ್ರವನ್ನು ನಾನಿಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಆಕೆ ತನ್ನಿಚ್ಛೆಯಿಂದ ಈ ಚಿತ್ರವನ್ನು ಬ್ಲರ್ ಮಾಡಿದ್ದಾಳೆ. ನಾನು ಹೇಳಬಯಸುವ ಮತ್ತೊಂದು ಸಂಗತಿಯೇನೆಂದರೆ ನಾನು ಆಕೆಯ ಸಂಗಾತಿಯೇ ಹೊರತು ಧಣಿ ಅಲ್ಲ’ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.
ತಮ್ಮ ಹಿರಿಯ ಸಹೋದರ ಯೂಸುಫ್ ಪಠಾಣ್ರೊಂದಿಗೆ ಇರ್ಫಾನ್ ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಬ್ಬರ ಪಠಾಣ್ ಫೌಂಡೇಶನ್, ಎರಡನೇ ಅಲೆಯಲ್ಲಿ ಸೋಂಕಿತರಾಗಿರುವವರಿಗೆ ಆಹಾರ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಮ್ಲಜನಕದ ಸಾಂದ್ರಕ ಮುಂತಾದವುಗಳನ್ನು ಒದಗಿಸುತ್ತಿದೆ.
This picture is posted by my queen from my son’s account. We are getting lot of hate.Let me post this here as well.She blurred this pic by her choice. And Yes,I’m her mate not her master;). #herlifeherchoice pic.twitter.com/Xy6CB2kKWA
— Irfan Pathan (@IrfanPathan) May 25, 2021
ಸದಾ ಚಟುವಟಿಕೆಯಿಂದಿರುವ ಇರ್ಫಾನ್ ಟ್ವಿಟ್ಟರ್ನಲ್ಲೂ ಸಕ್ರಿಯರಾಗಿದ್ದು ಪಾಲೆಸ್ಟೀನ್ನಂಥ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸದರಿ ವಿಷಯವನ್ನು ಕುರಿತು ಕೆಲ ವಿದೇಶೀ ಆಟಗಾರರು ಟ್ವೀಟ್ ಮಾಡಿರುವುದನ್ನು ಅವರು ರೀಟ್ವೀಟ್ ಮಾಡಿದ್ದಾರೆ. ಪಾಲೆಸ್ಟೀನ್ ಮೇಲಿನ ಅವರ ಟ್ವೀಟ್ಗೆ ಬಾಲಿವುಡ್ ನಟಿ ಕಂಗನಾ ರನೌತ್ ಖಂಡಿಸಿದ್ದಾರೆ.
ಇದಕ್ಕೆ ಮೊದಲು, ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2020-21 ರಲ್ಲಿ ಪಾಲ್ಗೊಂಡಿದ್ದ ಇರ್ಫಾನ್ ಟೂರ್ನಿ ಮುಗಿದ ನಂತರ ಸೋಂಕಿಗೊಳಗಾಗಿದ್ದರು. ಅವರ ಸೋಂಕು ಎಸಿಂಪ್ಟೋಮ್ಯಾಟಿಕ್ ಸ್ವರೂಪದ್ದಾಗಿತ್ತು ಮತ್ತು ಹೋಮ್ ಐಸೋಲೇಶನ್ ನಂತರ ಚೇತರಿಸಿಕೊಂಡಿದ್ದರು. ಆ ಸರಣಿಯಲ್ಲಿ ಇರ್ಫಾನ್ ಏಳು ಪಂದ್ಯಗಳನ್ನಾಡಿ ಏಳು ವಿಕೆಟ್ ಪಡೆದರಲ್ಲದೆ ತಮಗೆ ಬ್ಯಾಟ್ ಮಾಡಲು ಅವಕಾಶ ದೊರೆತ 3 ಇನ್ನಿಂಗ್ಸ್ಗಳಲ್ಲಿ 126 ರನ್ ಗಳಿಸಿದರು. ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ನಡೆದ ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ಲೆಜೆಂಡ್ಸ್ ತಂಡಕ್ಕೆ ಅವರು ಮಹತ್ತರ ಮತ್ತು ನಿರ್ಣಾಯಕ ಕಾಣಿಕೆ ನೀಡಿದರು. ಅವರು ಪಡೆದ ಎರಡು ವಿಕೆಟ್ಗಳ ನೆರವಿನಿಂದ ಭಾರತ ಪಂದ್ಯವನ್ನು 14 ರನ್ಗಳಿಂದ ಗೆದ್ದಿತ್ತು.
ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಓವಲ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ 2003 ರಲ್ಲಿ ಪಾದಾರ್ಪಣೆ ಮಾಡಿದ ಇರ್ಫಾನ್ ಒಟ್ಟು 29 ಟೆಸ್ಟ್ಗಳನ್ನಾಡಿ 31.6 ಸರಾಸರಿಯಲ್ಲಿ 1 ಶತಕದ ನೆರವಿನೊಂದಿಗೆ 1,105 ರನ್ ಗಳಿಸಿದರು. ಹಾಗಯೇ ಎಡಗೈ ಮಧ್ಯಮ ವೇಗದ ಬೌಲಿಂಗ್ ಮೂಲಕ ಅವರು 100 ವಿಕೆಟ್ ಸಹ ಪಡೆದರು. 120 ಒಂದು ದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇರ್ಫಾನ್ 1,544 ರನ್ ಗಳಿಸಿದರಲ್ಲದೆ 118 ವಿಕೆಟ್ಗಳನ್ನು ಪಡೆದರು. ಹಾಗೆಯೇ, ಆಡಿದ 24 ಟಿ20ಐ ಪಂದ್ಯಗಳಲ್ಲಿ 172 ರನ್ ಗಳಿಸಿ 28 ವಿಕೆಟ್ ಪಡೆದರು.
ಇದನ್ನೂ ಓದಿ: IPL 2021: ಅರ್ಧಕ್ಕೆ ನಿಂತಿದ್ದ ಐಪಿಎಲ್ ಮತ್ತೆ ಆರಂಭ; ಸೆಪ್ಟೆಂಬರ್ನಿಂದ ಸರಣಿ ಮುಂದುವರೆಸಲು ಬಿಸಿಸಿಐ ನಿರ್ಧಾರ