ಏಷ್ಯನ್ ಗೇಮ್ಸ್ 2023: ಪುರುಷರ 10,000 ಮೀ ಓಟದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚು
Kartik Kumar and Gulveer Singh bagged silver and bronze: ಏಷ್ಯನ್ ಗೇಮ್ಸ್‌ನ ಪುರುಷರ 10,000 ಮೀ ಓಟದಲ್ಲಿ ಕಾರ್ತಿಕ್ 28:15.38 ಸೆಕೆಂಡ್‌ಗಳಲ್ಲಿ ಬೆಳ್ಳಿ ಗೆದ್ದರೆ, ಗುಲ್ವೀರ್ 28: 17.21 ಸೆಕೆಂಡ್‌ಗಳಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಇವೆರಡೂ ಅವರ ವೈಯಕ್ತಿಕ ಸಾಧನೆ ಆಗಿದೆ. ಬಹ್ರೇನ್‌ನ ಬಿರ್ಹಾನು ಯೆಮಾತಾವ್ ಬಲೆವ್ 28:13.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು.
ಸೆಪ್ಟೆಂಬರ್ 30 ರ ಶನಿವಾರದಂದು ನಡೆದ ಏಷ್ಯನ್ ಗೇಮ್ಸ್‌ನ (Asian Games) ಪುರುಷರ 10,000 ಮೀ ಓಟದಲ್ಲಿ ಭಾರತದ ಲಾಂಗ್ ಡಿಸ್ಟೆನ್ಸ್ ಓಟಗಾರರಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಕಾರ್ತಿಕ್ 28:15.38 ಸೆಕೆಂಡ್‌ಗಳಲ್ಲಿ ಬೆಳ್ಳಿ ಗೆದ್ದರೆ, ಗುಲ್ವೀರ್ 28: 17.21 ಸೆಕೆಂಡ್‌ಗಳಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಇವೆರಡೂ ಅವರ ವೈಯಕ್ತಿಕ ಸಾಧನೆ ಆಗಿದೆ. ಬಹ್ರೇನ್‌ನ ಬಿರ್ಹಾನು ಯೆಮಾತಾವ್ ಬಲೆವ್ 28:13.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು.
ಇನ್ನು ಭಾರತೀಯ ಬ್ಯಾಡ್ಮಿಂಟನ್ ಪುರುಷರ ತಂಡವು ಟೀಮ್ ಈವೆಂಟ್‌ನ ಸೆಮಿಫೈನಲ್‌ನಲ್ಲಿ ಕೊರಿಯನ್ ಗಣರಾಜ್ಯವನ್ನು ಸೋಲಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ನಿರ್ಣಾಯಕ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಗೆಲುವು ಸಾಧಿಸುವುದರೊಂದಿಗೆ ಭಾರತವು ಕೊರಿಯಾವನ್ನು 3-2 ಅಂತರದಿಂದ ಸೋಲಿಸಿತು.
Asian Games: ಪಾಕಿಸ್ತಾನಕ್ಕೆ ಸೋಲುಣಿಸಿ ಚಿನ್ನ ಗೆದ್ದ ಭಾರತ ಸ್ಕ್ವಾಷ್ ತಂಡ
ಮತ್ತೊಂದೆಡೆ, ಭಾರತ ಹಾಕಿ ತಂಡವು ಪಾಕಿಸ್ತಾನದ ವಿರುದ್ಧ 10 ಗೋಲುಗಳನ್ನು ಹೊಡೆದು, ಕ್ರೀಡಾ ಇತಿಹಾಸದಲ್ಲಿ ಉಭಯ ತಂಡಗಳ ನಡುವೆ ಅತಿದೊಡ್ಡ ಗೆಲುವಿನ ಅಂತರವನ್ನು ಸೃಷ್ಟಿಸಿತು. ಮೊದಲ ಕ್ವಾರ್ಟರ್‌ನಲ್ಲೇ ಭಾರತ ಭರ್ಜರಿ ಮುನ್ನಡೆ ಸಾಧಿಸಿತು. ಮಂದೀಪ್ ಮತ್ತು ಅಭಿಷೇಕ್ ಜೋಡಿಯು ಪಾಕಿಸ್ತಾನ ವಿರುದ್ಧ ಉತ್ತಮವಾಗಿ ಆಡಿ ಆರಂಭಿಕ ಮುನ್ನಡೆ ನೀಡಿದರು.
ಮೊದಲ ಕ್ವಾರ್ಟರ್‌ನ ಕೊನೆಯಲ್ಲಿ, ನಾಯಕ ಹರ್ಮನ್‌ಪ್ರೀತ್ ಅದ್ಭುತವಾದ ಪೆನಾಲ್ಟಿ ಸ್ಟ್ರೋಕ್‌ನೊಂದಿಗೆ ಭಾರತಕ್ಕೆ ಮತ್ತೊಂದು ಗೋಲು ತಂದುಕೊಟ್ಟರು. ಎರಡನೇ ಕ್ವಾರ್ಟರ್‌ನಲ್ಲಿ, ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಮ್ಮೆ ಗೋಲು ಗಳಿಸಿದರು. ಪಂದ್ಯದ ಕೊನೆಯವರೆಗೂ ಭಾರತ ಮುನ್ನಡೆ ಕಾಯ್ದುಕೊಂಡು ಜಯ ಸಾಧಿಸಿದರೆ, ಪಾಕಿಸ್ತಾನ ಕಳಪೆ ಆಟದಿಂದ ಸೋತಿತು.
ಅಂತೆಯೆ ಸ್ಕ್ವಾಷ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಈ ಭಾರತ ಪದಕ ಪಟ್ಟಿಯಲ್ಲಿ 10ನೇ ಸ್ವರ್ಣ ಪದಕ ಸೇರ್ಪಡೆಯಾಗಿದೆ. ಈ ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ತಂಡ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಭಾರತೀಯರು ಕಠಿಣ ಪೈಪೋಟಿ ನೀಡಿ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು ವಿಶೇಷ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ