Lionel Messi Detained: ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಬಂಧನ
ಸೌಹಾರ್ದ ಪಂದ್ಯಕ್ಕಾಗಿ ಬೀಜಿಂಗ್ಗೆ ಆಗಮಿಸಿದ್ದ ಮೆಸ್ಸಿಯನ್ನು ವೀಸಾ (Visa) ಸಮಸ್ಯೆಯಿಂದಾಗಿ ಗಡಿ ಭದ್ರತಾ ಪಡೆ ಯೋಧರು ಕೆಲ ಕಾಲ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ.
ಫುಟ್ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಚೀನಾ ಪೊಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ವರದಿ ಆಗಿದೆ. ಚೀನಾದ ರಾಜಧಾನಿ ಬೀಜಿಂಗ್‌ನ ವರ್ಕರ್ಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟೀನಾ (Argentina) ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕೂ ಮುನ್ನ ಬೀಜಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸೌಹಾರ್ದ ಪಂದ್ಯಕ್ಕಾಗಿ ಬೀಜಿಂಗ್ಗೆ ಆಗಮಿಸಿದ್ದ ಮೆಸ್ಸಿಯನ್ನು ವೀಸಾ (Visa) ಸಮಸ್ಯೆಯಿಂದಾಗಿ ಗಡಿ ಭದ್ರತಾ ಪಡೆ ಯೋಧರು ಕೆಲ ಕಾಲ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಇದಾದ ಬಳಿಕ ವೀಸಾ ಕ್ಲಿಯರೆನ್ಸ್ ಸಿಕ್ಕ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ಮೆಸ್ಸಿ ಅವರು ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರುನ್ನು ತಡೆದು ನಿಲ್ಲಿಸಿದ್ದಾರೆ. ಇದು ಮೆಸ್ಸಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಮೆಸ್ಸಿ ಚೀನಾ ಭೇಟಿಗೂ ಮೊದಲು ವೀಸಾಕ್ಕೆ ಅರ್ಜಿ ಸಲ್ಲಿಸಿರಲಿಲ್ಲ, ಅಲ್ಲದೇ, ತನ್ನ ಅರ್ಜೆಂಟೀನಾದ ಬದಲಿಗೆ ಸ್ಪ್ಯಾನಿಷ್ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುತ್ತಿದ್ದರು. ಅದು ಚೀನಾ ಪ್ರವೇಶದ ಅವಕಾಶ ಹೊಂದಿಲ್ಲ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Rohit Sharma: ರೋಹಿತ್ ಶರ್ಮಾಗೆ ಇದುವೇ ಕೊನೆಯ ಚಾನ್ಸ್..!
Chinese border police briefly detained Messi as they didn’t recognise his visa ??? Book your holiday flights to Xi Jinping’s police state now everybody! pic.twitter.com/LN5EhMTIKC
— Drew Pavlou (@DrewPavlou) June 12, 2023
ಸುಮಾರು 30 ನಿಮಿಷಗಳ ನಂತರ ಪರಿಸ್ಥಿತಿಯನ್ನು ಬಗೆಹರಿಸಲಾಯಿತು. ಮೆಸ್ಸಿ ಅವರನ್ನು ಪೊಲೀಸ್ ಅಧಿಕಾರಿಗಳು ಸುತ್ತುವರಿದಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಿಯಾಮಿಯಲ್ಲಿ ನಡೆಯಲಿರುವ ಮೇಜರ್ ಲೀಗ್ ಸಾಕರ್ (ಎಂಎಲ್ಎಸ್) ಪಂದ್ಯಾವಳಿಗೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಇದೇ ಜೂನ್ 15 ರಂದು ಬೀಜಿಂಗ್‌ನ ವರ್ಕರ್ಸ್ ಸ್ಟೇಡಿಯಂನಲ್ಲಿ ಸೌಹಾರ್ದ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಭಾಗವಹಿಸಲು ಮೆಸ್ಸಿ ಚೀನಾಕ್ಕೆ ಬಂದಿಳಿದಿದ್ದಾರೆ.
ಹೊಸ ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ ಮೆಸ್ಸಿ:
ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ ಕ್ಲಬ್ ಪರ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ನಾನು ಅಮೆರಿಕದ ಮೇಜರ್ ಲೀಗ್ ಸಾಕರ್ ತಂಡ “ಇಂಟರ್ ಮಿಯಾಮಿ” ಪರ ಆಡಲು ಸಹಿ ಹಾಕಲಿದ್ದೇನೆ ಎಂದು ಸ್ಪ್ಯಾನಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಯೂರೋಪ್ನ ಇತರೆ ಕ್ಲಬ್ಗಳಿಂದ ಆಫರ್ ಬಂದಿರುವುದನ್ನು ಖಚಿತಪಡಿಸಿದ ಮೆಸ್ಸಿ, ತಾನು ಯುರೋಪ್ನಲ್ಲಿ ಆಡಿದ್ರೆ ಅದು ಬಾರ್ಸಿಲೋನಾ ತಂಡದ ಪರ ಮಾತ್ರ ಆಡುತ್ತೇನೆ ಎಂದು ನಿರ್ಧರಿಸಿದ್ದೆ. ಹೀಗಾಗಿ ಬೇರೆ ಕ್ಲಬ್ಗಳ ಆಫರ್ ಬಗ್ಗೆ ನಾನು ಆಸಕ್ತಿ ತೋರಲಿಲ್ಲ ಎಂದರು.
2004 ರಿಂದ 2021 ರವರೆಗೆ ಸ್ಪೇನ್ನ ಬಾರ್ಸಿಲೋನಾ ಕ್ಲಬ್ ಪರ ಆಡಿದ್ದ ಲಿಯೋನೆಲ್ ಮೆಸ್ಸಿ 778 ಪಂದ್ಯಗಳಲ್ಲಿ 672 ಗೋಲ್ಗಳನ್ನು ಬಾರಿಸಿದ್ದರು. ಇದಾದ ಬಳಿಕ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಕಣಕ್ಕಿಳಿದಿದ್ದ ಫುಟ್ಬಾಲ್ ಅಂಗಳದ ಮಾಂತ್ರಿಕ 75 ಪಂದ್ಯಗಳಲ್ಲಿ ಕೇವಲ 32 ಗೋಲುಗಳಿಸಲಷ್ಟೇ ಶಕ್ತರಾಗಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ