Wimbledon: ರಷ್ಯಾ-ಬೆಲಾರೂಸ್ ಟೆನಿಸ್ ಪ್ಲೇಯರ್ಸ್​ಗೆ ವಿಂಬಲ್ಡನ್ ನಿಷೇಧ: ಈ ನಿರ್ಧಾರ ಹುಚ್ಚುತನ ಎನ್ನುತ್ತಿರುವ ಆಟಗಾರರು

ಉಕ್ರೇನ್​ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ಆಲ್ ಇಂಗ್ಲೆಂಡ್​ ಕ್ಲಬ್​ ಖಂಡಿಸಿದ್ದು, ಈ ಕಾರಣದಿಂದ ರಷ್ಯಾ ಮತ್ತು ಬೆಲಾರಸಿಯನ್​ ಟೆನಿಸ್ ಆಟಗಾರರನ್ನು ಪ್ರತಿಷ್ಠಿತ ಟೂರ್ನಮೆಂಟ್​ನಿಂದ ಬ್ಯಾನ್ ಮಾಡಲಾಗಿದೆ.

Wimbledon: ರಷ್ಯಾ-ಬೆಲಾರೂಸ್ ಟೆನಿಸ್ ಪ್ಲೇಯರ್ಸ್​ಗೆ ವಿಂಬಲ್ಡನ್ ನಿಷೇಧ: ಈ ನಿರ್ಧಾರ ಹುಚ್ಚುತನ ಎನ್ನುತ್ತಿರುವ ಆಟಗಾರರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Vinay Bhat

Updated on: Apr 29, 2022 | 2:52 PM

ರಷ್ಯಾ ಹಾಗೂ ಬೆಲಾರೂಸ್ (Russian and Belarusian) ದೇಶಗಳ ಆಟಗಾರರನ್ನು ಈ ಬಾರಿಯ ವಿಂಬಲ್ಡನ್‌ (Wimbledon) ಟೆನಿಸ್ ಟೂರ್ನಿಯಲ್ಲಿ ಆಡದಂತೆ ನಿಷೇಧಿಸಲಾಗಿದೆ. ಉಕ್ರೇನ್​ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ಆಲ್ ಇಂಗ್ಲೆಂಡ್​ ಕ್ಲಬ್​ ಖಂಡಿಸಿದ್ದು, ಈ ಕಾರಣದಿಂದ ರಷ್ಯಾ ಮತ್ತು ಬೆಲಾರಸಿಯನ್​ ಟೆನಿಸ್ ಆಟಗಾರರನ್ನು ಪ್ರತಿಷ್ಠಿತ ಟೂರ್ನಮೆಂಟ್​ನಿಂದ ಬ್ಯಾನ್ ಮಾಡಲಾಗಿದೆ. ಇದರಿಂದ ಜೂನ್​ 27 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ 2022ರ ಗ್ರ್ಯಾಂಡ್​​ ಸ್ಲಾಮ್​ನಲ್ಲಿ​ ಈ ಎರಡೂ ರಾಷ್ಟ್ರಗಳ ಆಟಗಾರರು ಆಡುವುದು ಅಸಾಧ್ಯವಾಗಿದೆ. ವಿಂಬಲ್ಡನ್​ ಪ್ರಸ್ತುತ ಉಕ್ರೇನ್​ನಲ್ಲಿ ಯುದ್ದ ಆರಂಭವಾದ ಮೇಲೆ ರಷ್ಯಾ ಮತ್ತು ಬೆಲಾರಸ್​ನ ಆಟಗಾರರಿಗೆ ಸಂಪೂರ್ಣ ನಿಷೇಧ ಹೇರಿದ ಮೊದಲ ಟೂರ್ನಮೆಂಟ್​ ಆಗಿದೆ. ಇದರರ್ಥ ವಿಶ್ವದ ನಂ.2 ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ (Daniil Medvedev)​ ಕೂಡ ಗ್ರ್ಯಾಸ್​ಕೋರ್ಟ್​ ಟೂರ್ನಮೆಂಟ್​ ಆಡುವ ಅವಕಾಶ ತಪ್ಪಿಸಿಕೊಳ್ಳಲಿದ್ದಾರೆ. ಹಾಗೆಯೆ ಮಹಿಳೆಯರ ವಿಭಾಗದಲ್ಲಿ ಹೋದ ಸಲ  ಸೆಮಿಫೈನಲ್‌ ಪ್ರವೇಶಿಸಿದ್ದ ಬೆಲಾರೂಸ್‌ನ ಅರ್ಯಾನಾ ಸಬಲೆಂಕಾ ಕೂಡ ಈ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ವಿಂಬಲ್ಡನ್ ಸಂಘಟಕರ ಈ ನಿರ್ಧಾರಕ್ಕೆ ಸಾಕಷ್ಟು ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ವಿಂಬಲ್ಡನ್‌ ಟೆನಿಸ್ ಟೂರ್ನಿಯಿಂದ  ತಮ್ಮ ಹಾಗೂ ಬೆಲಾರೂಸ್  ಆಟಗಾರರನ್ನು ನಿಷೇಧಿಸಿರುವುದನ್ನು ರಷ್ಯಾ ಖಂಡಿಸಿದೆ. ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವಾ ಹೇಳಿದ್ದಾರೆ. ಮತ್ತೊಮ್ಮೆ ಅಥ್ಲೀಟ್‌ಗಳನ್ನು ಒತ್ತೆಯಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ರಾಜಕೀಯ ಪೂರ್ವಗ್ರಹ ಮತ್ತು ಹತಾಶೆ ಇಲ್ಲಿ ಕಾಣುತ್ತಿದೆ ಎಂದು ಡಿಮಿಟ್ರಿ ಕುಟುಕಿದ್ದಾರೆ.

ಸರ್ಬಿಯಾದ ಪ್ರಸಿದ್ಧ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೂಡ ಸಮಿತಿಯ ನಿರ್ಧಾರವನ್ನ ಹುಚ್ಚುತನ ಎಂದು ಟೀಕಿಸಿದ್ದಾರೆ. ವಿಂಬಲ್ಡನ್ ನಿರ್ಧಾರ ಕುರಿತು ಮಾತನಾಡಿರುವ ಇವರು, “ವಿಂಬಲ್ಡನ್ ನಿರ್ಧಾರವನ್ನು ಬೆಂಬಲಿಸಲು ಸಾಧ್ಯವಿಲ್ಲ. ಇದು ಹುಚ್ಚುತನ ಎಂದು ನಾನು ಭಾವಿಸುತ್ತೇನೆ. ರಾಜಕೀಯವು ಕ್ರೀಡೆಗೆ ಅಡ್ಡಿಪಡಿಸಿದಾಗ, ಫಲಿತಾಂಶವು ಉತ್ತಮವಾಗಿರುವುದಿಲ್ಲ. ‘ನಾನು ಎಂದಿಗೂ ಯುದ್ಧವನ್ನು ಬೆಂಬಲಿಸುವುದಿಲ್ಲ, ನಾನು ಯುದ್ಧದ ಮಗುವಾಗಿದ್ದೇನೆ, ಅದು ಎಷ್ಟು ಭಾವನಾತ್ಮಕ ಆಘಾತವನ್ನು ನೀಡುತ್ತದೆ ಎಂದು ನನಗೆ ತಿಳಿದಿದೆ. ಸೆರ್ಬಿಯಾದಲ್ಲಿ, 1999 ರಲ್ಲಿ ಏನಾಯಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ,” ಎಂದು ಹೇಳಿದ್ದಾರೆ.

ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಕೂಡ ಈ ನಿಷೇಧದ ನಿರ್ಧಾರವನ್ನು ವಿರೋಧಿಸಿದ್ದು, ರಷ್ಯಾ ಮತ್ತು ಬೆಲಾರೂಸ್ ಅಟಗಾರರಿಗೆ ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ  ಆಡುವ ಅವಕಾಶ ನೀಡಬೇಕು. ಅವರ ಮೇಲೆ ನಿಷೇಧ ಸಲ್ಲದು ಎಂದು ಹೇಳಿದ್ದಾರೆ. “ಆ ದೇಶಗಳ ಆಟಗಾರರನ್ನು ಸಂಪೂರ್ಣವಾಗಿ ನಿಷೇಧಿಸುವುದು ಬೇಡ. ಆದರೆ ಅವರು ರಷ್ಯಾ ಸರ್ಕಾರದ ಧೋರಣೆಯ ವಿರುದ್ಧ ಧ್ವನಿಯೆತ್ತಬೇಕು. ತಮ್ಮ ನಿಲುವು ಸ್ಪಷ್ಟಪಡಿಸಬೆಕು. ಅವರು ಸರ್ಕಾರದ ವಿರುದ್ಧ ಇದ್ದರೆ ವಿಂಬಲ್ಡನ್‌ನಲ್ಲಿ ಸ್ಪರ್ಧಿಸಲು ಅರ್ಹರು. ಈ ಸಂದರ್ಭದಲ್ಲಿ ರಷ್ಯಾ ಮತ್ತು ಬೆಲಾರೂಸ್ ಆಟಗಾರರು ತೋರಿರುವ ನಡವಳಿಕೆಯು ವಿಷಾದಕರ. ನಾನು ಹೇಗಿದ್ದೇನೆ, ಕುಟುಂಬದ ಸ್ಥಿತಿಗತಿ ಏನಿದೆ ಎಂದು ವಿಚಾರಿಸಿದವರನ್ನು  ಕೈಬೆರಳುಗಳಲ್ಲಿ ಎಣಿಸಬಲ್ಲೆ. ನಾವೆಲ್ಲರೂ ಸಹಆಟಗಾರರಲ್ಲವೇ. ಪರಸ್ಪರ ಸಹನುಭೂತಿಯಿಂದ ವರ್ತಿಸುವುದು ಮುಖ್ಯವಾಗುತ್ತದೆ,” ಎಂದಿದ್ದಾರೆ.

ವಿಂಬಲ್ಡನ್ ಯುನೈಟೈಡ್ ಕಿಂಗ್‌ಡಮ್‌ನ ಮೊದಲ ಪ್ರತ್ಯೇಕ ಟೆನಿಸ್ ಚಾಂಪಿಯನ್‌ಶಿಪ್ ಆಗಿದ್ದು, ಇದು ನೂರಾರು ವರ್ಷಗಳ ಇತಿಹಾಸವನ್ನ ಹೊಂದಿದೆ. ಪಂದ್ಯಾವಳಿಯನ್ನು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ AELTC ಆಯೋಜಿಸುತ್ತದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಪ್ರತಿಭಟಿಸಿ, ರಷ್ಯಾದಲ್ಲಿ ತನ್ನ ಪ್ರಭಾವವನ್ನು ಮಿತಿಗೊಳಿಸುವ ಸಲುವಾಗಿ ರಷ್ಯಾದ ಮತ್ತು ಬೆಲಾರೂಸಿಯನ್ ಆಟಗಾರರ ಮೇಲೆ ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಿದೆ ಎಂದು AELTC ಇತ್ತೀಚೆಗಷ್ಟೇ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿ ಸುಮಾರು ಎರಡು ತಿಂಗಳಾಗಿದೆ. ಆದರೂ ರಷ್ಯಾ ಉಕ್ರೇನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ. ನ್ಯಾಟೋಗೆ ಉಕ್ರೇನ್ ಪ್ರವೇಶವನ್ನು ರಷ್ಯಾ ಬಲವಾಗಿ ವಿರೋಧಿಸುತ್ತದೆ, ಉಕ್ರೇನ್ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ. ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ಐರೋಪ್ಯ ರಾಷ್ಟ್ರಗಳು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿವೆ. ಈ ಕ್ರಮದಲ್ಲಿ ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಲೇ ಇದ್ದವು. ರಷ್ಯಾ ಈಗಾಗಲೇ ಹಲವಾರು ವ್ಯಾಪಾರ, ಕ್ರೀಡೆ ಮತ್ತು ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಇದೀಗ ವಿಂಬಲ್ಡನ್ 2022 ಪಂದ್ಯಾವಳಿಯಿಂದ ರಷ್ಯಾ ಮತ್ತು ಬೆಲಾರೂಸಿಯನ್ ಆಟಗಾರರನ್ನು ನಿಷೇಧಿಸಲಾಗಿದೆ.

ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾವನ್ನು ಪ್ರತ್ಯೇಕಿಸಲು ಈಗಾಗಲೇ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕಠಿಣ ನಿಲುವು ತಳೆದು ವಿಶ್ವದಾದ್ಯಂತ ಕ್ರೀಡಾ ಒಕ್ಕೂಟಗಳಿಗೆ ದೊಡ್ಡ ಮನವಿ ಮಾಡಿದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ರಷ್ಯಾ ಮತ್ತು ಬೆಲಾರಸ್‌ನ ಅಧಿಕಾರಿಗಳು ಮತ್ತು ಆಟಗಾರರನ್ನು ಹೊರಗಿಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಎಲ್ಲಾ ಫೆಡರೇಶನ್‌ಗಳಿಗೆ ಶಿಫಾರಸು ಮಾಡಿದೆ. ಜಾಗತಿಕ ಕ್ರೀಡಾಕೂಟಗಳ ಸಮಗ್ರತೆ ಮತ್ತು ಎಲ್ಲಾ ಭಾಗವಹಿಸುವವರ ಸುರಕ್ಷತೆಯನ್ನು ರಕ್ಷಿಸಲು ಇದು ಅವಶ್ಯಕವಾಗಿದೆ ಎಂದು IOC ಹೇಳಿದೆ. ಈ ನಿರ್ಧಾರದಿಂದ ವಿಶ್ವ ಫುಟ್‌ಬಾಲ್‌ನ ಅತ್ಯುನ್ನತ ಸಂಸ್ಥೆಯಾದ ಫಿಫಾ ಮಾರ್ಚ್ 24 ರಂದು ನಡೆಯಲಿರುವ ವಿಶ್ವಕಪ್ ಅರ್ಹತಾ ಪಂದ್ಯದಿಂದ ರಷ್ಯಾವನ್ನು ಹೊರಗಿಡುವ ಚಿಂತನೆ ನಡೆಸಿದೆ. ಈ ಪೂರ್ವನಿರ್ಧರಿತ ಪಂದ್ಯದಲ್ಲಿ ಪೋಲೆಂಡ್ ಈಗಾಗಲೇ ರಷ್ಯಾ ವಿರುದ್ಧ ಆಡಲು ನಿರಾಕರಿಸಿತ್ತು. ಐಒಸಿಯ ಮನವಿಯು ರಷ್ಯಾದ ದಾಳಿಯನ್ನು ಬೆಂಬಲಿಸುತ್ತಿರುವ ಬೆಲಾರಸ್‌ನ ಆಟಗಾರರು ಮತ್ತು ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತದೆ.

Glenn Maxwell Vini Raman Wedding: ಮ್ಯಾಕ್ಸ್​ವೆಲ್ ವೆಡ್ಡಿಂಗ್ ಪಾರ್ಟಿಯಲ್ಲಿ ಆರ್​ಸಿಬಿ ಪ್ಲೇಯರ್ಸ್​ ಏನೆಲ್ಲ ಮಾಡಿದ್ರು?: ಫೋಟೋ ನೋಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ