ಪಾಕಿಸ್ತಾನ್ ತಂಡದಿಂದ ಮತ್ತೆ ಹೊರಬಿದ್ದ ಬಾಬರ್ ಆಝಂ
ಟಿ20 ವಿಶ್ವಕಪ್ ಸಿದ್ಧತೆಗಾಗಿ ಪಾಕಿಸ್ತಾನ್ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದೆ. ಈ ಪ್ರವಾಸದಲ್ಲಿ ಪಾಕ್ ಪಡೆಯುವ ಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದ್ದು, 15 ಸದಸ್ಯರುಗಳ ತಂಡದಲ್ಲಿ ಬಾಬರ್ ಆಝಂ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಬಾಬರ್ ಆಝಂ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಕಳೆದೊಂದು ವರ್ಷದಿಂದ ಪಾಕ್ ಟಿ20 ತಂಡದಿಂದ ಹೊರಗುಳಿದಿದ್ದ ಬಾಬರ್ ಆಝಂ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು. ಇದೀಗ ಟಿ20 ವಿಶ್ವಕಪ್ಗೂ ಮುನ್ನ ನಡೆಯಲಿರುವ ಸರಣಿಯಿಂದ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಇತ್ತ ಬಾಬರ್ ಆಝಂ ಅವರನ್ನು ತಂಡದಿಂದ ಹೊರಗಿಡಲು ಮುಖ್ಯ ಕಾರಣ ಅವರು ಬಿಗ್ ಬ್ಯಾಷ್ ಲೀಗ್ ಆಡುತ್ತಿರುವುದು ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಬಿಎಲ್ನಲ್ಲಿ ಬಾಬರ್ ಸಿಡ್ನಿ ಸಿಕ್ಸರ್ ಪರ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.
ಆದರೆ ಅದೇ ಬಿಗ್ ಬ್ಯಾಷ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿದ್ದ ಶಾದಾಬ್ ಖಾನ್ ಪಾಕಿಸ್ತಾನ್ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿಯೇ ಪಾಕ್ ಟಿ20 ತಂಡದಿಂದ ಬಾಬರ್ ಆಝಂ ಮತ್ತೆ ಹೊರಬಿದ್ದರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಪಾಕಿಸ್ತಾನ್-ಶ್ರೀಲಂಕಾ ಸರಣಿ ಯಾವಾಗ ಶುರು?
ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜನವರಿ 7 ರಿಂದ ಶುರುವಾಗಲಿದೆ. ಈ ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳು ದಂಬುಲ್ಲಾದಲ್ಲಿ ನಡೆಯಲಿವೆ . ಮೊದಲ ಪಂದ್ಯ ಜನವರಿ 7 ರಂದು, ಎರಡನೇ ಪಂದ್ಯ ಜನವರಿ 9 ರಂದು ಮತ್ತು ಮೂರನೇ ಪಂದ್ಯ ಜನವರಿ 11 ರಂದು ನಡೆಯಲಿದೆ. ಈ ಸರಣಿಯ ಬಳಿಕ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ಗೆ ಸಜ್ಜಾಗಲಿದೆ.
ಟಿ20 ವಿಶ್ವಕಪ್ನ ಮೊದಲ ಸುತ್ತಿನಲ್ಲಿ ಪಾಕಿಸ್ತಾನ್ ತಂಡವು ಭಾರತ, ನಮೀಬಿಯಾ , ನೆದರ್‌ಲೆಂಡ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಅಮೆರಿಕ ಂಡಗಳನ್ನು ಎದುರಿಸಲಿದೆ. ಇದೀಗ ಪಾಕ್ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲೂ ಕಾಣಿಸಿಕೊಳ್ಳುವುದು ಖಚಿತ.
ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಒಂದೇ ಓವರ್ನಲ್ಲಿ 30 ರನ್ ಚಚ್ಚಿದ ಕೀರನ್ ಪೊಲಾರ್ಡ್
ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ದುಲ್ ಸಮದ್ , ಅಬ್ರಾರ್ ಅಹ್ಮದ್ , ಫಹೀಮ್ ಅಶ್ರಫ್ , ಫಖರ್ ಝಮಾನ್ , ಖ್ವಾಜಾ ನಫೆ, ಮೊಹಮ್ಮದ್ ನವಾಝ್ , ಮೊಹಮ್ಮದ್ ಸಲ್ಮಾನ್ ಮಿರ್ಝ, ಮೊಹಮ್ಮದ್ ವಾಸಿಂ ಜೂನಿಯರ್ , ನಸೀಮ್ ಶಾ, ಸಾಹಿಬ್ಝಾದ ಫರ್ಹಾನ್ , ಉಸ್ಮಾನ್ ತಾರಿಖ್, ಸೈಮ್ ಅಯೂಬ್ , ಶಾದಾಬ್ ಖಾನ್, ಉಸ್ಮಾನ್ ಖಾನ್.
Published On - 1:18 pm, Sun, 28 December 25
