Paris Olympics 2024: ಭಾರತಕ್ಕೆ ಶುಭ ಸುದ್ದಿ; ಮಹಿಳೆಯರ 10 ಮೀ. ಏರ್​ಪಿಸ್ತೂಲ್​ನಲ್ಲಿ ಫೈನಲ್​ ಪ್ರವೇಶಿಸಿದ ಮನು ಭಾಕರ್

Paris Olympics 2024: ಒಲಿಂಪಿಕ್ಸ್​ಗೆ​ ಅಧಿಕೃತ ಚಾಲನೆ ಸಿಕ್ಕ ಮೊದಲ ದಿನವೇ ಶೂಟಿಂಗ್‌ನಲ್ಲಿ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಭಾರತದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಮನು ಅರ್ಹತಾ ಸ್ಪರ್ಧೆಯಲ್ಲಿ 600 ಅಂಕಗಳಿಗೆ 580 ಅಂಕಗಳನ್ನು ಗಳಿಸಿದ್ದು, ಪಟ್ಟಿಯಲ್ಲಿ ಮೂರನೆ ಸ್ಥಾನ ಪಡೆಯುವುದರೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

Paris Olympics 2024: ಭಾರತಕ್ಕೆ ಶುಭ ಸುದ್ದಿ; ಮಹಿಳೆಯರ 10 ಮೀ. ಏರ್​ಪಿಸ್ತೂಲ್​ನಲ್ಲಿ ಫೈನಲ್​ ಪ್ರವೇಶಿಸಿದ ಮನು ಭಾಕರ್
ಮನು ಭಾಕರ್
Follow us
|

Updated on:Jul 27, 2024 | 6:25 PM

33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದಿನಿಂದ ಅಧಿಕೃತ ಚಾಲನೆ ದೊರೆತಿದೆ. ಅದಾಗ್ಯೂ ಕ್ರೀಡಾಕೂಟದಲ್ಲಿ ಕೆಲವು ಕ್ರೀಡೆಗಳು ನಿನ್ನೆಯಿಂದಲೇ ಆರಂಭವಾಗಿದ್ದವು. ಇದೀಗ ಅಧಿಕೃತ ಚಾಲನೆಯ ಮೊದಲ ದಿನ ಶೂಟಿಂಗ್‌ನಲ್ಲಿ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಭಾರತದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಮನು ಅರ್ಹತಾ ಸ್ಪರ್ಧೆಯಲ್ಲಿ 600 ಅಂಕಗಳಿಗೆ 580 ಅಂಕಗಳನ್ನು ಗಳಿಸಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವುದರೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಒಟ್ಟು 45 ಅಥ್ಲೀಟ್‌ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಗಳಿಸಿದ ಮನು ಮೂರನೇ ಸ್ಥಾನ ಗಳಿಸಿದರೆ, ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಇನ್ನೋರ್ವ ಶೂಟರ್ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಶೂಟರ್ ಮನು ಭಾಕರ್ ಫೈನಲ್ ತಲುಪುವುದರೊಂದಿಗೆ ಪ್ಯಾರಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕದ ಭರವಸೆ ಮೂಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಂದರೆ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಇದೇ ಸ್ಪರ್ಧೆಯಲ್ಲಿ ಭಾಕರ್ 12 ನೇ ಸ್ಥಾನ ಗಳಿಸಿದ್ದರು. ಆದರೆ ಈಗ ಪದಕದ ರೇಸ್‌ನಲ್ಲಿದ್ದಾರೆ.

300 ಕ್ಕೆ 292 ಅಂಕ

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನ ಆರು ಸುತ್ತಿನಲ್ಲೂ ಮನು ಅದ್ಭುತ ಪ್ರದರ್ಶನ ನೀಡಿದರು. ಮೊದಲ ಸೀರಿಸ್​ನಲ್ಲಿ 100ಕ್ಕೆ 97 ಅಂಕ ಕಲೆಹಾಕಿದ ಮನು, ಎರಡನೇ ಸೀರಿಸ್​ನಲ್ಲಿ 97 ಅಂಕಗಳನ್ನು ಸಂಪಾಧಿಸಿದರು. ಈ ಅಮೋಘ ಪ್ರದರ್ಶನದ ಮೂಲಕ ಮನು, ಮೊದಲಾರ್ಧ ಮುಗಿಯುವ ವೇಳೆಗೆ 300ಕ್ಕೆ 292 ಅಂಕಗಳನ್ನು ಸಂಪಾಧಿಸಿ, ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು.

ಕೊನೆಯ ಮೂರು ಸೀರಿಸ್​ಗಳಲ್ಲಿ ಎಡವಿದ ರಿದಮ್ ಸಾಂಗ್ವಾನ್

ಒಟ್ಟು 45 ಶೂಟರ್​ಗಳು ಸ್ಪರ್ಧಿಸಿದ್ದ ಈ ಈವೆಂಟ್​ನಲ್ಲಿ ಭಾರತದಿಂದ ಮತ್ತೊಬ್ಬ ಸ್ಪರ್ಧಿಯಾಗಿ, ರಿದಮ್ ಸಾಂಗ್ವಾನ್ ಕೂಡ ಭಾಗವಿಸಿದ್ದರು. ರಿದಮ್ ಕೂಡ ಮೊದಲ ಮೂರು ಸೀರಿಸ್​ಗಳಲ್ಲಿ 97, 92 ಮತ್ತು 97 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಕೊನೆಯ ಮೂರು ಸೀರಿಸ್​ಗಳಲ್ಲಿ ಕೊಂಚ ಲಯ ಕಳೆದುಕೊಂಡ ಅವರಿಗೆ ಕೇವಲ 96, 95 ಮತ್ತು 96 ಅಂಕಗಳನ್ನು ಕಲೆಹಾಕಲು ಸಾಧ್ಯವಾಯಿತು. ಇದರಿಂದಾಗಿ ಅವರು ಒಟ್ಟು 573 ಅಂಕಗಳನ್ನು ಸಂಪಾಧಿಸಿ ಪಟ್ಟಿಯಲ್ಲಿ 15 ನೇ ಸ್ಥಾನವನ್ನು ಪಡೆದರು. ಈ ಮೂಲಕ ಅವರು ಫೈನಲ್​ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.

ಜುಲೈ 28 ರಂದು ಪದಕ ಸ್ಪರ್ಧೆ

ಇದೀಗ ಫೈನಲ್​ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಮನು ಭಾಕರ್ ಈಗ ಜುಲೈ 28 ರಂದು ನಡೆಯಲ್ಲಿರುವ ಪದಕ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಈ ಫೈನಲ್ ಸುತ್ತು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ನಡೆಯಲ್ಲಿದೆ. ಇದರಲ್ಲಿ ಮನು ಅವರು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ಹಂಗೇರಿಯ ಆಟಗಾರ್ತಿ ಮೇಜರ್ ವೆರೋನಿಕಾ ಮತ್ತು ಎರಡನೇ ಸ್ಥಾನ ಪಡೆದ ಹೊ ಯೆ ಜಿನ್ ಅವರಿಂದ ಕಠಿಣ ಪೈಪೋಟಿ ಎದುರಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Sat, 27 July 24

ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ