Paris Olympics 2024: ಭಾರತಕ್ಕೆ ಡಬಲ್ ಕಂಚು ತಂದುಕೊಟ್ಟ ಸ್ಟಾರ್ ಶೂಟರ್ ಮನು ಭಾಕರ್​​ಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ

ಭಾರತಕ್ಕೆ ಡಬಲ್​​​​ ಕಂಚು ತಂದುಕೊಟ್ಟ ಸ್ಟಾರ್ ಶೂಟರ್ ಮನು ಭಾಕರ್​​ಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ, ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಒಲಂಪಿಕ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಮನು ಭಾಕರ್ ಪಾತ್ರರಾಗಿದ್ದಾರೆ.

Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 07, 2024 | 11:02 AM

ಡಬಲ್ ಕಂಚಿನ ಪದಕ ಪಡೆದ ಸ್ಟಾರ್ ಶೂಟರ್ ಮನು ಭಾಕರ್ ಅವರು ಇಂದು ಭಾರತಕ್ಕೆ ಮರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲೀ ಭವ್ಯ ಸ್ವಾಗತ ಅವರಿಗೆ ಸಿಕ್ಕಿದೆ. ಈ ಮೂಲಕ ಕಂಚಿನ ಮಹಿಳೆ ಮನು ಭಾಕರ್ ತಾಯಿ ನಾಡಿಗೆ ಬಂದು ಖುಷಿಯನ್ನು ಹಂಚಿಕೊಂಡಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ, ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಒಲಂಪಿಕ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಮನು ಭಾಕರ್ ಪಾತ್ರರಾಗಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ಶೂಟರ್ ಸ್ವರ್ಧೆಯಲ್ಲಿ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತದ ಖಾತೆಯನ್ನು ತೆರೆದರು. ನಂತರ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಕಂಚಿನ ಪದಕವನ್ನು ಗೆದಿದ್ದಾರೆ. ಮನು ಭಾಕರ್ ಮೂರನೇ ಪದಕ ಗೆಲ್ಲುವ ಹಂತಕ್ಕೂ ಕೂಡ ತಲುಪಿದ್ದ, ಆದರೆ ಸ್ವಲ್ಪದರಲ್ಲೇ ಅದು ತಪ್ಪಿದೆ ಎಂದು ಹೇಳಿದ್ದಾರೆ.

2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತದ ಪತಾಕೆಯನ್ನು ಹಾರಿಸಿದ್ದಾರೆ. ಇದರ ಜತೆಗೆ ಪ್ಯಾರಿಸ್ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ಪ್ರಮುಖ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಆಗಸ್ಟ್ 11ಕ್ಕೆ ಮತ್ತೆ ಪ್ಯಾರಿಸ್​​​ಗೆ ಹೋಗಲಿದ್ದಾರೆ. ಭಾರತವು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಇನ್ನು ವಿನೇಶ್ ಫೋಗಟ್ ಅವರು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಫೈನಲ್​ ಪ್ರವೇಶಿಸಿ ಕುಸ್ತಿಪಟು ವಿನೇಶ್ ಫೋಗಟ್, ಭಾರತಕ್ಕೆ ಮತ್ತೊಂದು ಪದಕ ಖಾತ್ರಿ

ಇನ್ನು 2008ರಿಂದ ಭಾರತವು ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಆವೃತ್ತಿಯಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಕುಸ್ತಿಯಲ್ಲಿ ವಿನೇಶ್ ಫೋಗಟ್ ಅವರು ಭಾರತಕ್ಕೆ ಚಿನ್ನ ಪದಕ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಇವರು ಪೈನಲ್​​​ಗೆ ತಲುಪಿದ್ದು ಭಾರತದ ಚಿನ್ನದ ಕನಸನ್ನು ನನಸು ಮಾಡಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Wed, 7 August 24

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ