AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi 2021-22: ಬೆಂಗಳೂರು ಬುಲ್ಸ್​ಗೆ ಪಟ್ನಾ ಪೈರೇಟ್ಸ್ ಸವಾಲು: ಯಾರು ಬಲಿಷ್ಠ..?

bengaluru bulls vs patna pirates head to head: ಅಷ್ಟೇ ಅಲ್ಲದೆ ಈ ಬಾರಿ ಆಡಿರುವ 10 ಪಂದ್ಯಗಳಲ್ಲಿ ಬೆಂಗಳೂರು 7 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಪಟ್ನಾ ತಂಡವು 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡಿದೆ.

Pro Kabaddi 2021-22: ಬೆಂಗಳೂರು ಬುಲ್ಸ್​ಗೆ ಪಟ್ನಾ ಪೈರೇಟ್ಸ್ ಸವಾಲು: ಯಾರು ಬಲಿಷ್ಠ..?
Bengaluru Bulls vs Patna Pirates
TV9 Web
| Updated By: ಝಾಹಿರ್ ಯೂಸುಫ್|

Updated on:Jan 16, 2022 | 4:15 PM

Share

ಪ್ರೋ ಕಬಡ್ಡಿ ಲೀಗ್​ನ 59ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಟ್ನಾ ಪೈರೇಟ್ಸ್​ ತಂಡಗಳು ಮುಖಾಮುಖಿಯಾಗಲಿದೆ. ಪಾಯಿಂಟ್ ಟೇಬಲ್​ನಲ್ಲಿ ಟಾಪ್ ತಂಡವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಬುಲ್ಸ್​ಗೆ ಇದು ಮೊದಲಾರ್ಧದ ಕೊನೆಯ ಪಂದ್ಯವಾಗಿದ್ದು, ಹೀಗಾಗಿ ಗೆಲ್ಲಲು ಭರ್ಜರಿ ಪೈಪೋಟಿ ನಡೆಸಲಿದೆ. ಇನ್ನೊಂದೆಡೆ ಪಟ್ನಾ ಪೈರೇಟ್ಸ್ ತಂಡವು ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದ್ದು, ಹಾಗಾಗಿ ಈ ಪಂದ್ಯದಲ್ಲಿ ಗೆದ್ದರೆ 2ನೇ ಸ್ಥಾನಕ್ಕೇರಬಹುದು. ಇದೇ ಕಾರಣದಿಂದ ಉಭಯ ತಂಡಗಳಿಗೂ ಈ ಪಂದ್ಯವು ಮಹತ್ವದ್ದು ಎನಿಸಿಕೊಂಡಿದೆ.

ಇನ್ನು ಉಭಯ ತಂಡಗಳು ಇದುವರೆಗೆ 17 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಬೆಂಗಳೂರು ಬುಲ್ಸ್ ಗೆದ್ದಿರುವುದು ಕೇವಲ 5 ಬಾರಿ ಮಾತ್ರ. ಇನ್ನು 10 ಪಂದ್ಯಗಳಲ್ಲಿ ಪಟ್ನಾ ಪೈರೇಟ್ಸ್ ಗೆದ್ದಿದೆ. ಹಾಗೆಯೇ ಎರಡು ಪಂದ್ಯಗಳು ಟೈ ಆಗಿವೆ. ಇಲ್ಲಿ ಒಟ್ಟಾರೆ ಮುಖಾಮುಖಿಯಲ್ಲಿ ಪಟ್ನಾ ಪೈರೇಟ್ಸ್​ ತಂಡವು ಮೇಲುಗೈ ಹೊಂದಿದೆ. ಆದರೆ ಕಳೆದ ಸೀಸನ್​ನಲ್ಲಿ ಎರಡೂ ಪಂದ್ಯಗಳಲ್ಲೂ ಬೆಂಗಳೂರು ಬುಲ್ಸ್ ತಂಡ​ ಪಟ್ನಾ ಪೈರೇಟ್ಸ್​ಗೆ ಸೋಲುಣಿಸಿತ್ತು ಎಂಬುದು ವಿಶೇಷ.

ಅಷ್ಟೇ ಅಲ್ಲದೆ ಈ ಬಾರಿ ಆಡಿರುವ 10 ಪಂದ್ಯಗಳಲ್ಲಿ ಬೆಂಗಳೂರು 7 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಪಟ್ನಾ ತಂಡವು 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂದರೆ ಈ ಸೀಸನ್​ನಲ್ಲಿನ ಉಭಯ ತಂಡಗಳು ಪ್ರದರ್ಶನ ಸಮಬಲ ಹೊಂದಿದೆ ಎಂಬುದು ಸ್ಪಷ್ಟ. ಹೀಗಾಗಿ ಎರಡೂ ತಂಡಗಳಿಂದ ಕಠಿಣ ಪೈಪೋಟಿ ಕಂಡು ಬರಲಿದೆ. ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲ ಹೊಂದಿದ್ದು, ಹೀಗಾಗಿ ರೋಚಕ ಕಾದಾಟವನ್ನು ನಿರೀಕ್ಷಿಸಬಹುದು.

ಜನವರಿ 16ರ ಪಂದ್ಯಗಳು:

ತಮಿಳ್ ತಲೈವಾಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್,  ಸಮಯ- 7.30 ಕ್ಕೆ

ಬೆಂಗಳೂರು ಬುಲ್ಸ್ vs ಪಟ್ನಾ ಪೈರೇಟ್ಸ್​,  ಸಮಯ- 8.30 ಕ್ಕೆ

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pro Kabaddi 2021 bengaluru bulls vs patna pirates head to head)

Published On - 4:15 pm, Sun, 16 January 22

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್