Pro Kabaddi 2021: ನಾಳೆಯಿಂದ ಕಬಡ್ಡಿ ಕಲರವ: ಬೆಂಗಳೂರು ಬುಲ್ಸ್ ಸಂಭಾವ್ಯ ಪ್ಲೇಯಿಂಗ್ ಸೆವೆನ್

Begaluru Bulls Team: ಬೆಂಗಳೂರು ಬುಲ್ಸ್ ತಂಡ ಹೀಗಿದೆ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್

Pro Kabaddi 2021: ನಾಳೆಯಿಂದ ಕಬಡ್ಡಿ ಕಲರವ: ಬೆಂಗಳೂರು ಬುಲ್ಸ್ ಸಂಭಾವ್ಯ ಪ್ಲೇಯಿಂಗ್ ಸೆವೆನ್
Pro Kabaddi 2021
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 21, 2021 | 8:44 PM

ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೋ ಕಬಡ್ಡಿ ಲೀಗ್ ಸೀಸನ್ 8 ಗೆ ಬುಧವಾರದಿಂದ ಚಾಲನೆ ಸಿಗಲಿದೆ. ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದ್ದು, ಕೊರೋನಾಂತಕದ ಕಾರಣ ಈ ಬಾರಿ ಪ್ರೇಕ್ಷಕರಿಗೆ ಅವಕಾಶವಿಲ್ಲ. ಇನ್ನು ಲೀಗ್​ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಬೆಂಗಳೂರು ಬುಲ್ಸ್ ತಂಡದ ಸಂಭಾವ್ಯ ಪ್ಲೇಯಿಂಗ್ 7 ಹೀಗಿರಲಿದೆ.

ಲೆಫ್ಟ್ ಕಾರ್ನರ್ – ಅಮಿತ್ ಶೆರಾನ್ ಕಳೆದೆರಡು ಸೀಸನ್​ನಲ್ಲಿ ಬೆಂಗಳೂರು ಬುಲ್ಸ್ ತಂಡದ ಎಡ ಮೂಲೆಯ ಡಿಫೆಂಡರ್ ಆಗಿದ್ದ ಅಮಿತ್ ಶೆರಾನ್ ಸ್ಥಿರ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಯು ಮುಂಬಾ ವಿರುದ್ದದ ಮೊದಲ ಪಂದ್ಯದಲ್ಲೂ ಲೆಫ್ಟ್ ಕಾರ್ನರ್​ ಅಮಿತ್ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಈ ಹಿಂದೆ ಅಮಿತ್ 24 ಪಂದ್ಯಗಳಲ್ಲಿ ಒಟ್ಟು 50 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

ಲೆಫ್ಟ್ ಇನ್ – ಚಂದ್ರನ್ ರಂಜಿತ್ ಮಾಜಿ ದಬಾಂಗ್ ಡೆಲ್ಲಿ ರೈಡರ್ ಚಂದ್ರನ್ ರಂಜಿತ್ ಅವರು ಈ ಬಾರಿ ಬುಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಚಂದ್ರನ್ ರಂಜಿತ್ ಪವನ್ ಕುಮಾರ್ ಶೆಹ್ರಾವತ್‌ಗೆ ಸರಿಯಾದ ಜೋಡಿಯಾಗಲಿದ್ದಾರೆ. ಡಿಫೆಂಡರ್‌ಗಳನ್ನು ಬೆರಗುಗೊಳಿಸುವ ತೀಕ್ಷ್ಣ ರೈಡರ್ ಆಗಿರುವ ರಂಜಿತ್ ಲೆಫ್ಟ್ ಇನ್​ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೆಫ್ಟ್ ಕವರ್ – ಮಹೇಂದರ್ ಸಿಂಗ್ ಮಹೇಂದರ್ ಸಿಂಗ್ ಲೆಫ್ಟ್ ಕವರ್​ನ ಬಲಿಷ್ಠ ಡಿಫೆಂಡರ್. ಕಳೆದ ಸೀಸನ್​ನಲ್ಲಿ 21 ಪಂದ್ಯಗಳಲ್ಲಿ 61 ಟ್ಯಾಕಲ್ ಪಾಯಿಂಟ್‌ಗಳನ್ನು ಕೂಡ ಗಳಿಸಿದ್ದಾರೆ. ಹೀಗಾಗಿ ಈ ಬಾರಿ ಮಹೇಂದರ್ ಸಿಂಗ್ ಲೆಫ್ಟ್ ಕವರ್​ನಲ್ಲಿ ಆಡಲಿದ್ದಾರೆ.

ಸೆಂಟರ್- ದೀಪಕ್ ನರ್ವಾಲ್ ಮಾಜಿ ಪಾಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಆಟಗಾರ ದೀಪಕ್ ನರ್ವಾಲ್ ಈ ಬಾರಿ ಬೆಂಗಳೂರು ಬುಲ್ಸ್ ಪರ ಆಡಲಿದ್ದಾರೆ. 19 ಪಂದ್ಯಗಳಲ್ಲಿ 79 ರೇಡ್ ಪಾಯಿಂಟ್​ಗಳಿಸಿರುವ ದೀಪಕ್, ಪವನ್ ಶೆಹ್ರಾವತ್ ಮತ್ತು ಚಂದ್ರನ್ ರಂಜಿತ್ ಅವರೊಂದಿಗೆ ಮೂರನೇ ರೈಡರ್ ಆಗಿ ಕಾರ್ಯನಿರ್ವಹಿಸಬಹುದು.

ರೈಟ್ ಕವರ್ – ಡಾಂಗ್ ಜಿಯೋನ್ ಲೀ ಬೆಂಗಳೂರು ಬುಲ್ಸ್ ಪರ ವಿದೇಶಿ ಆಟಗಾರನಾಗಿ ಡಾಂಗ್ ಜಿಯೋನ್ ಲೀ ಕಣಕ್ಕಿಳಿಯಬಹುದು. ಲೀ ಅತ್ಯುತ್ತಮ ರೈಡರ್ ಜೊತೆಗೆ ರೈಟ್ ಕವರ್​ನಲ್ಲಿ ಚಾಣಾಕ್ಷ ಆಟಗಾರ. ಹೀಗಾಗಿ ಇವರು ಕೂಡ ಪ್ಲೇಯಿಂಗ್ 7 ನಲ್ಲಿ ಕಾಣಿಸಿಕೊಳ್ಳಬಹುದು.

ರೈಟ್ ಕಾರ್ನರ್ – ಸೌರಭ್ ನಂದಲ್ ಪ್ರೊ ಕಬಡ್ಡಿ ಸೀಸನ್ 7 ರಲ್ಲಿ ಬೆಂಗಳೂರು ಬುಲ್ಸ್‌ಗಾಗಿ ತನ್ನ ಚೊಚ್ಚಲ ಅಭಿಯಾನದಲ್ಲಿ ಸೌರಭ್ ನಂದಲ್ ಬಲಿಷ್ಠ ರೈಟ್ ಕಾರ್ನರ್‌ ಆಟಗಾರನಾಗಿದ್ದರು. ಅಮಿತ್ ಶೆರಾನ್ ಅವರೊಂದಿಗೆ ಬಲವಾದ ಕಾರ್ನರ್ ರಕ್ಷಣಾತ್ಮಕ ಜೋಡಿ. ಹೀಗಾಗಿ ಸೌರಭ್ ನಂದಲ್ ಕೂಡ ಮೊದಲ ಪಂದ್ಯದಲ್ಲಿ ಅವಕಾಶ ಪಡೆಯಬಹುದು.

ರೈಟ್ ಇನ್- ಪವರ್ ಶೆಹ್ರಾವತ್ ಇನ್ನು ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ಕಳೆದ ಕೆಲವು ಸೀಸನ್​ಗಳಿಂದ ರೈಟ್ ಇನ್​ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರು ಈ ಸಲ ಕೂಡ ರೈಟ್ ಇನ್ ಆಟಗಾರನಾಗಿ ಅಂಗಳಕ್ಕೆ ಇಳಿಯಲಿದ್ದಾರೆ.

ಬೆಂಗಳೂರು ಬುಲ್ಸ್ ತಂಡ ಹೀಗಿದೆ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್.

ಇದನ್ನೂ ಓದಿ: PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: IPL 2022: ಬರೋಬ್ಬರಿ 13 ನಾಯಕರನ್ನು ಬದಲಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ

(Pro Kabaddi 2021: Predicting the playing 7 for Bengaluru Bulls)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್