Pro Kabaddi 2021: ಪ್ರೋ ಕಬಡ್ಡಿ ಲೀಗ್​ನ್ನು ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Pro Kabaddi 2021: ಪ್ರೋ ಕಬಡ್ಡಿ ಲೀಗ್​ನ್ನು ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ
Pro Kabaddi 2021

Pro Kabaddi 2021 Telecast Channel: ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

TV9kannada Web Team

| Edited By: Zahir PY

Dec 21, 2021 | 10:23 PM

ದೇಶೀಯ ಅಂಗಳದ ಕಬಡ್ಡಿ ಕದನ ಪ್ರೋ ಕಬಡ್ಡಿ ಲೀಗ್ ಸೀಸನ್ 8 ಗೆ ಬುಧವಾರದಿಂದ ಚಾಲನೆ ಸಿಗಲಿದೆ. ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಪಂದ್ಯಗಳು ನಡೆಯಲಿದೆ. ಇದೇ ಮೊದಲ ಬಾರಿಗೆ ಕೊರೋನಾಂತಕದ ಕಾರಣ ಈ ಬಾರಿ ಪ್ರೇಕ್ಷಕರಿಲ್ಲದೆ ಪ್ರೋ ಕಬಡ್ಡಿಯನ್ನು ಆಯೋಜಿಸಲಾಗುತ್ತಿದೆ. ಇನ್ನು ಡಿಸೆಂಬರ್ 22 ರಂದು ನಡೆಯುವಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ಮಾಜಿ ಚಾಂಪಿಯನ್ ಯು ಮುಂಬಾ ಮುಖಾಮುಖಿಯಾಗಲಿದೆ.

12 ತಂಡಗಳ ನಡುವೆ ಕಬಡ್ಡಿ ಕಾಳಗ: ಈ ಬಾರಿ 12 ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದೆ. ಅದರಂತೆ ಬೆಂಗಳೂರು ಬುಲ್ಸ್, ಯು ಮುಂಬಾ, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಬೆಂಗಾಲ್ ವಾರಿಯರ್ಸ್, ಯುಪಿ ಯೋಧಾ, ಗುಜರಾತ್ ಜೈಂಟ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.

ಮೊದಲಾರ್ಧದ ಆರಂಭ: ಡಿಸೆಂಬರ್ 22 ರಿಂದ ಮೊದಲಾರ್ಧ ಆರಂಭವಾಗುತ್ತಿದ್ದು, ಮೊದಲಾರ್ಧವು ಜನವರಿ 20, 2022 ರಂದು ಮುಕ್ತಾಯಗೊಳ್ಳಲಿದೆ. ಆ ಬಳಿಕ 2ನೇ ಸುತ್ತಿನ ಪಂದ್ಯಗಳು ಶುರುವಾಗಲಿದೆ. 2ನೇ ಸುತ್ತಿನ ಪಂದ್ಯಗಳಿಗಾಗಿ ಇನ್ನೂ ಕೂಡ ವೇಳಾಪಟ್ಟಿ ನಿಗದಿ ಮಾಡಿಲ್ಲ.

ಪಂದ್ಯದ ಸಮಯ: ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ಪ್ರಸಾರ: ಭಾರತ: ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಮಾ ಗೋಲ್ಡ್ ಮತ್ತು ಸ್ಟಾರ್ ಸುವರ್ಣ ಪ್ಲಸ್.

ಡಿಜಿಟಲ್ ಫ್ಲಾರ್ಟ್​ಫಾರ್ಮ್​: ಪ್ರೊ ಕಬಡ್ಡಿ 2021 ರ ಎಲ್ಲಾ ಪಂದ್ಯಗಳನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಹಾಗೆಯೇ ಪ್ರೊ ಕಬಡ್ಡಿ ಲೀಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭಿಮಾನಿಗಳು PKL ಪಂದ್ಯಗಳ ಲೈವ್ ಸ್ಕೋರ್‌ಗಳನ್ನು ವೀಕ್ಷಿಸಬಹುದು.

ಇದನ್ನೂ ಓದಿ: PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: IPL 2022: ಬರೋಬ್ಬರಿ 13 ನಾಯಕರನ್ನು ಬದಲಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ

(Pro Kabaddi 2021 Telecast Channel: Where to watch and live streaming details)

Follow us on

Most Read Stories

Click on your DTH Provider to Add TV9 Kannada