PKL 12: ಬೆಂಗಳೂರು ಬುಲ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ? ತಂಡದ ಪೂರ್ಣ ವೇಳಾಪಟ್ಟಿ ಹೀಗಿದೆ
Bengaluru Bulls Pro Kabaddi 2025 Schedule: ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯಲ್ಲಿ ಆಗಸ್ಟ್ 29, 2025 ರಿಂದ ವಿಶಾಖಪಟ್ಟಣದಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಹೊಸ ತಂಡ ಮತ್ತು ಹೊಸ ತರಬೇತುದಾರರೊಂದಿಗೆ, ಲೀಗ್‌ನ ಮೊದಲ ದಿನವೇ ಪಂದ್ಯವನ್ನು ಆಡಲಿದೆ. ಅಂಕುಶ್ ರಾಥಿ ನಾಯಕತ್ವದಲ್ಲಿ ತಂಡ ಗೆಲುವಿನೊಂದಿಗೆ ಆರಂಭಿಸಲು ಉತ್ಸುಕವಾಗಿದೆ. ಈ ಲೇಖನದಲ್ಲಿ ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಮತ್ತು ಆಟಗಾರರ ಪಟ್ಟಿಯನ್ನು ನೀಡಲಾಗಿದೆ.

ಪ್ರೊ ಕಬಡ್ಡಿ ಲೀಗ್‌ನ 12ನೇ ಸೀಸನ್ (Pro Kabaddi League 2025) ಆಗಸ್ಟ್ 29, 2025ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಈ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹೊಸ ತಂಡ ಹಾಗೂ ಹೊಸ ಕೋಚ್ ಜೊತೆಗೆ ಅಖಾಡಕ್ಕಿಳಿಯಲು ಸಜ್ಜಾಗಿರುವ ಬುಲ್ಸ್ ಪಡೆ, ಲೀಗ್‌ನ ಮೊದಲ ದಿನವೇ ಪಂದ್ಯವನ್ನಾಡಲಿದೆ. ನಾಯಕ ಅಂಕುಶ ರಾಥಿ ನೇತೃತ್ವದಲ್ಲಿ ತಂಡ ಗೆಲುವಿನ ಶುಭಾರಂಭ ಮಾಡಲು ಪ್ರಯತ್ನಿಸಲಿದೆ. ಕಳೆದ ಆವೃತ್ತಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಹೀಗಾಗಿ ಕಳೆದ ಬಾರಿಯ ಕಹಿಯನ್ನು ಮರೆತು ಸೀಸನ್ ಆರಂಭಿಸಬೇಕಿದೆ. ಉಳಿದಂತೆ ತಂಡದಲ್ಲಿ ಯಾರೆಲ್ಲ ಇದ್ದಾರೆ. ಹಾಗೂ ಈ ಸೀಸನ್ನ ಲೀಗ್ ಹಂತದಲ್ಲಿ ತಂಡ ಯಾವ್ಯಾವ ದಿನ ಯಾವ ತಂಡವನ್ನು ಎದುರಿಸಲಿದೆ ಎಂಬುದರ ಪೂರ್ಣ ವೇಳಾಪಟ್ಟಿ ಇಲ್ಲಿದೆ.
ಬೆಂಗಳೂರು ಬುಲ್ಸ್ ತಂಡ
- ಚಂದ್ರನಾಯಕ್ ಎಂ
- ಲಕ್ಕಿ ಕುಮಾರ್
- ಮಂಜೀತ್
- ಪಂಕಜ್
- ಅಂಕುಶ ರಾಥಿ (ನಾಯಕ)
- ಯೋಗೇಶ್ ಬಿಜೇಂದರ್ ದಹಿಯಾ
- ಸಂಜಯ್ ಕ್ರಿಶನ್ ಧುಲ್
- ಧೀರಜ್
- ಅಲಿರೆಜಾ ಮಿರ್ಜೈಯಾನ್
- ಮನೀಶ್
- ಅಹ್ಮದ್ರೇಜಾ ಅಸ್ಗರಿ
- ಸತ್ಯಪ್ಪ ಮಟ್ಟಿ
- ಆಕಾಶ್ ಸಂತೋಷ್ ಶಿಂಧೆ
- ಮಹಿಪಾಲ್
- ಸಚಿನ್
- ಶುಭಂ ಬಿಟಕೆ
- ಅಮಿತ್ ಸಿಂಗ್ ಠಾಕೂರ್
- ಶುಭಂ ರಹತೆ
- ಸಾಹಿಲ್ ಸುಹಾಸ್ ರಾಣೆ
ವೇಳಾಪಟ್ಟಿ ಹೀಗಿದೆ
|
ದಿನಾಂಕ |
ಪಂದ್ಯ ಸಂಖ್ಯೆ | ಮುಖಾಮುಖಿ |
ಸ್ಥಳ |
| ಆಗಸ್ಟ್ 29, 2025 | ಪಂದ್ಯ 2 | ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ | ವೈಜಾಗ್ |
| ಸೆಪ್ಟೆಂಬರ್ 2, 2025 | ಪಂದ್ಯ 9 |
ದಬಾಂಗ್ ದೆಹಲಿ ಕೆ.ಸಿ. vs ಬೆಂಗಳೂರು ಬುಲ್ಸ್ |
ವೈಜಾಗ್ |
| ಸೆಪ್ಟೆಂಬರ್ 5, 2025 | ಪಂದ್ಯ 15 | ಯು ಮುಂಬಾ vs ಬೆಂಗಳೂರು ಬುಲ್ಸ್ | ವೈಜಾಗ್ |
| ಸೆಪ್ಟೆಂಬರ್ 6, 2025 | ಪಂದ್ಯ 17 | ಪಾಟ್ನಾ ಪೈರೇಟ್ಸ್ vs ಬೆಂಗಳೂರು ಬುಲ್ಸ್ | ವೈಜಾಗ್ |
| ಸೆಪ್ಟೆಂಬರ್ 8, 2025 | ಪಂದ್ಯ 21 | ಹರಿಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್ | ವೈಜಾಗ್ |
| ಸೆಪ್ಟೆಂಬರ್ 12, 2025 | ಪಂದ್ಯ 29 | ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್ | ಜೈಪುರ |
| ಸೆಪ್ಟೆಂಬರ್ 15, 2025 | ಪಂದ್ಯ 34 | ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ | ಜೈಪುರ |
| ಸೆಪ್ಟೆಂಬರ್ 16, 2025 | ಪಂದ್ಯ 36 | ತಮಿಳು ತಲೈವಾಸ್ vs ಬೆಂಗಳೂರು ಬುಲ್ಸ್ | ಜೈಪುರ |
| ಸೆಪ್ಟೆಂಬರ್ 22, 2025 | ಪಂದ್ಯ 45 | ಗುಜರಾತ್ ಜೈಂಟ್ಸ್ vs ಬೆಂಗಳೂರು ಬುಲ್ಸ್ | ಜೈಪುರ |
| ಸೆಪ್ಟೆಂಬರ್ 25, 2025 | ಪಂದ್ಯ 49 | ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್ | ಜೈಪುರ |
| ಅಕ್ಟೋಬರ್ 2, 2025 | ಪಂದ್ಯ 59 | ಪುಣೇರಿ ಪಲ್ಟನ್ vs ಬೆಂಗಳೂರು ಬುಲ್ಸ್ | ಚೆನ್ನೈ |
| ಅಕ್ಟೋಬರ್ 5, 2025 | ಪಂದ್ಯ 66 | ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್ | ಚೆನ್ನೈ |
| ಅಕ್ಟೋಬರ್ 11, 2025 | ಪಂದ್ಯ 77 | ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ | ಚೆನ್ನೈ |
| ಅಕ್ಟೋಬರ್ 12, 2025 | ಪಂದ್ಯ 80 | ಬೆಂಗಾಲ್ ವಾರಿಯರ್ಸ್ vs ಬೆಂಗಳೂರು ಬುಲ್ಸ್ | ಚೆನ್ನೈ |
| ಅಕ್ಟೋಬರ್ 16, 2025 | ಪಂದ್ಯ 88 | ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್ | ದೆಹಲಿ |
| ಅಕ್ಟೋಬರ್ 18, 2025 | ಪಂದ್ಯ 94 | ಬೆಂಗಳೂರು ಬುಲ್ಸ್ vs ದಬಾಂಗ್ ದೆಹಲಿ ಕೆ.ಸಿ. | ದೆಹಲಿ |
| ಅಕ್ಟೋಬರ್ 22, 2025 | ಪಂದ್ಯ 104 | ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ | ದೆಹಲಿ |
| ಅಕ್ಟೋಬರ್ 23, 2025 | ಪಂದ್ಯ 106 | ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್ |
ದೆಹಲಿ |
Published On - 7:38 pm, Thu, 28 August 25
