Pro kabaddi 2021-22: ಬೆಂಗಳೂರು ಬುಲ್ಸ್​ಗೆ ಸೋಲುಣಿಸಿದ ಪಟ್ನಾ ಪೈರೇಟ್ಸ್​

| Updated By: ಝಾಹಿರ್ ಯೂಸುಫ್

Updated on: Jan 16, 2022 | 9:48 PM

bengaluru bulls vs patna pirates: ಪವನ್ ಕುಮಾರ್ ಶೆಹ್ರಾವತ್ ಮೊದಲಾರ್ಧದಲ್ಲಿ 8 ನಿಮಿಷಕ್ಕೂ ಅಧಿಕ ಸಮಯ ಬೆಂಚ್ ಕಾಯಬೇಕಾಯಿತು. ಅಷ್ಟರಲ್ಲಾಗಲೇ ಮುನ್ನಡೆ ಸಾಧಿಸಿದ ಪಟ್ನಾ ಪೈರೇಟ್ಸ್ ತಂಡವು ಮೊದಲಾರ್ಧದಲ್ಲಿ 20 ಪಾಯಿಂಟ್ ಗಳಿಸಿತು.

Pro kabaddi 2021-22: ಬೆಂಗಳೂರು ಬುಲ್ಸ್​ಗೆ ಸೋಲುಣಿಸಿದ ಪಟ್ನಾ ಪೈರೇಟ್ಸ್​
bengaluru bulls vs patna pirates
Follow us on

ಪ್ರೋ ಕಬಡ್ಡಿ ಲೀಗ್​ನ 59ನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ದ ಬೆಂಗಳೂರು ಬುಲ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ಮೊದಲಾರ್ಧವನ್ನು ಪೂರ್ಣಗೊಳಿಸಿದೆ. ಇದಾಗ್ಯೂ ಆಡಿರುವ 11 ಪಂದ್ಯಗಳಲ್ಲಿ 7 ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಬುಲ್ಸ್ ಅಗ್ರಸ್ಥಾನದಲ್ಲಿದೆ. ಇನ್ನು ಭಾರೀ ಕುತೂಹಲಕ್ಕೆ ಕಾರಣವಾಗಿ ಈ ಪಂದ್ಯದಲ್ಲಿ ಆರಂಭದಲ್ಲಿ ಬೆಂಗಳೂರು ಬುಲ್ಸ್ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಪಟ್ನಾ ಪೈರೇಟ್ಸ್​ ಅತ್ಯುತ್ತಮ ಡಿಫೆನ್ಸ್ ಮೂಲಕ ಗಮನ ಸೆಳೆಯಿತು. ಇತ್ತ ಬೆಂಗಳೂರು ಬುಲ್ಸ್ ಸ್ಟಾರ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಆರಂಭದಲ್ಲೇ ಔಟ್ ಆಗಿದ್ದು ಬೆಂಗಳೂರು ತಂಡಕ್ಕೆ ಮುಳುವಾಯಿತು.

ಏಕೆಂದರೆ ಔಟ್ ಆಗಿದ್ದ ಪವನ್ ಕುಮಾರ್ ಶೆಹ್ರಾವತ್ ಮೊದಲಾರ್ಧದಲ್ಲಿ 8 ನಿಮಿಷಕ್ಕೂ ಅಧಿಕ ಸಮಯ ಬೆಂಚ್ ಕಾಯಬೇಕಾಯಿತು. ಅಷ್ಟರಲ್ಲಾಗಲೇ ಮುನ್ನಡೆ ಸಾಧಿಸಿದ ಪಟ್ನಾ ಪೈರೇಟ್ಸ್ ತಂಡವು ಮೊದಲಾರ್ಧದಲ್ಲಿ 20 ಪಾಯಿಂಟ್ ಗಳಿಸಿತು. ಆದರೆ ಬೆಂಗಳೂರು ಬುಲ್ಸ್ ಕಲೆಹಾಕಿದ್ದು ಕೇವಲ 16 ಪಾಯಿಂಟ್ ಮಾತ್ರ.

4 ಪಾಯಿಂಟ್​ಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಪಟ್ನಾ ಪೈರೇಟ್ಸ್ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಅದರಂತೆ ಪಟ್ನಾ ಪೈರೇಟ್ಸ್ ತಂಡವು ಬೆಂಗಳೂರು ಬುಲ್ಸ್ ಅನ್ನು ಆಲೌಟ್ ಮಾಡುವ ಮೂಲಕ 28-21 ಅಂತರವನ್ನು ಪಡೆದುಕೊಂಡರು. ಅಷ್ಟೇ ಅಲ್ಲದೆ ದ್ವಿತಿಯಾರ್ಧದಲ್ಲೂ ಅತ್ಯುತ್ತಮ ಡಿಫೆನ್ಸ್ ಆಟವನ್ನು ಪ್ರದರ್ಶಿಸಿದ ಪಟ್ನಾ ಪೈರೇಟ್ಸ್​ ಟ್ಯಾಕಲ್​ ಪಾಯಿಂಟ್​ಗಳ ಮೂಲಕ ಗಮನ ಸೆಳೆದರು. ಈ ಮೂಲಕ ಪವನ್ ಕುಮಾರ್ ಶೆಹ್ರಾವತ್ ಅವರನ್ನು ಕಟ್ಟಿಹಾಕಿದ ಪಟ್ನಾ ಪೈರೇಟ್ಸ್​ ಬಿಟ್ಟು ಕೊಟ್ಟಿದ್ದು ಕೇವಲ 10 ಪಾಯಿಂಟ್​. ಅದರಲ್ಲಿ 5 ಪಾಯಿಂಟ್ ಬಂದಿದ್ದು ಬೋನಸ್ ಮೂಲಕ ಎಂಬುದು ವಿಶೇಷ.

ಅಂತಿಮವಾಗಿ 38-31 ಪಾಯಿಂಟ್​ಗಳೊಂದಿಗೆ ಪಟ್ನಾ ಪೈರೇಟ್ಸ್​ ತಂಡವು 7 ಪಾಯಿಂಟ್​ಗಳ ಅಂತರದಿಂದ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್​ ಟೇಬಲ್​ನಲ್ಲಿ 2ನೇ ಸ್ಥಾನಕ್ಕೇರಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!