BCCI ಕೊವಿಡ್ ಟಾಸ್ಕ್ ಫೋರ್ಸ್ಗೆ ರಾಹುಲ್ ದ್ರಾವಿಡ್ ಮುಂದಾಳತ್ವ
ವಿಶ್ವದಾದ್ಯಂತ ಕೊರೊನಾದಿಂದಾಗಿ ನಾಲ್ಕು ತಿಂಗಳಿಂದ ಯಾವುದೇ ಕ್ರೀಡಾ ಚಟುವಟಿಕೆ ನಡೆದಿಲ್ಲ. ಕೆಲವೊಂದಿಷ್ಟು ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದನ್ನ ಹೊರತುಪಡಿಸಿ ಬಹುತೇಕ ಎಲ್ಲವೂ ಸ್ತಬ್ಧವಾಗಿದೆ. ಆದರೆ, ಸದ್ಯದಲ್ಲೇ BCCI ಬೆಂಗಳೂರಿನಲ್ಲಿರುವ NCA (ನ್ಯಾಷನಲ್ ಕ್ರಿಕೆಟ್ ಅಕಾಡೆಮಿ)ನಲ್ಲಿ ಟ್ರೈನಿಂಗ್ ಕ್ಯಾಂಪ್ ನಡೆಸಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ, ಇಂಥ ಪರಿಸ್ಥಿತಿ ನಡುವೆಯೂ BCCI ಕಠಿಣ ನಿರ್ಧಾರವೊಂದನ್ನ ತೆಗೆದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ NCAನಲ್ಲಿ ಟ್ರೈನಿಂಗ್ ಕ್ಯಾಂಪ್ ಶುರುಮಾಡೋದಕ್ಕೆ ನಿರ್ಧರಿಸಿದೆ. ಈ ಮಧ್ಯೆ ಕೊವಿಡ್ ಟಾಸ್ಕ್ ಫೋರ್ಸ್ವೊಂದನ್ನ BCCI […]
ವಿಶ್ವದಾದ್ಯಂತ ಕೊರೊನಾದಿಂದಾಗಿ ನಾಲ್ಕು ತಿಂಗಳಿಂದ ಯಾವುದೇ ಕ್ರೀಡಾ ಚಟುವಟಿಕೆ ನಡೆದಿಲ್ಲ. ಕೆಲವೊಂದಿಷ್ಟು ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದನ್ನ ಹೊರತುಪಡಿಸಿ ಬಹುತೇಕ ಎಲ್ಲವೂ ಸ್ತಬ್ಧವಾಗಿದೆ. ಆದರೆ, ಸದ್ಯದಲ್ಲೇ BCCI ಬೆಂಗಳೂರಿನಲ್ಲಿರುವ NCA (ನ್ಯಾಷನಲ್ ಕ್ರಿಕೆಟ್ ಅಕಾಡೆಮಿ)ನಲ್ಲಿ ಟ್ರೈನಿಂಗ್ ಕ್ಯಾಂಪ್ ನಡೆಸಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ, ಇಂಥ ಪರಿಸ್ಥಿತಿ ನಡುವೆಯೂ BCCI ಕಠಿಣ ನಿರ್ಧಾರವೊಂದನ್ನ ತೆಗೆದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ NCAನಲ್ಲಿ ಟ್ರೈನಿಂಗ್ ಕ್ಯಾಂಪ್ ಶುರುಮಾಡೋದಕ್ಕೆ ನಿರ್ಧರಿಸಿದೆ. ಈ ಮಧ್ಯೆ ಕೊವಿಡ್ ಟಾಸ್ಕ್ ಫೋರ್ಸ್ವೊಂದನ್ನ BCCI ರಚನೆ ಮಾಡಿದೆ. ಈ ಕೊವಿಡ್ ಟಾಸ್ಕ್ ಫೋರ್ಸ್ನ ಮುಂದಾಳತ್ವವನ್ನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ವಹಿಸಿಕೊಳ್ಳಲಿದ್ದಾರೆ.
BCCI ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೂ 100 ಪುಟಗಳ ಗೈಡ್ಲೈನ್ಸ್ ಕಾಪಿಯನ್ನು ರವಾನಿಸಿದೆ. ಎಲ್ಲಾ ಆಟಗಾರರು ಇದನ್ನ ಪಾಲಿಸಬೇಕು ಅನ್ನೋ ನಿಟ್ಟಿನಲ್ಲಿ, ರಿಟರ್ನ್ ಟು ಟ್ರೈನಿಂಗ್ ಗೈಡ್ಲೈನ್ಸ್ ಹೆಸರಿನಲ್ಲಿ ಈ ಪ್ರತಿಗಳನ್ನು ಬಿಡುಗಡೆ ಮಾಡಿದ್ದಾರೆ. ಗೈಡ್ಲೈನ್ಸ್ನಲ್ಲಿ ಆಟಗಾರರು, ಟ್ರೈನಿಂಗ್ಗೆ ವಾಪಸ್ ಆದ ಮೇಲೆ ಯಾವ ಕ್ರಮಗಳನ್ನ ಪಾಲಿಸಬೇಕು ಎಂಬುದರ ಬಗ್ಗೆ ತಿಳಿಸಲಾಗಿದೆ. ಇಂಥ ಒಂದು ಪ್ರತಿಯನ್ನ NCAಗೂ ಕಳುಹಿಸಿಕೊಡಲಾಗಿದೆ.
ಕೊವಿಡ್ ಟಾಸ್ಕ್ ಫೋರ್ಸ್ ಎಲ್ಲರ ಮೇಲೂ ನಿಗಾ ಇಡಲಿದೆ. ಟ್ರೈನಿಂಗ್ನಲ್ಲಿ ಪಾಲ್ಗೊಳ್ಳುವ ಆಟಗಾರರು ತರಬೇತಿಗೂ ಮುನ್ನ ಪ್ರೀ-ಟ್ರೈನಿಂಗ್ ಪತ್ರಕ್ಕೆ ಸಹಿ ಹಾಕಬೇಕು. ಪ್ರತಿಯೊಬ್ಬ ಆಟಗಾರ ಹಾಗೂ ಸ್ಟಾಫ್ ಕೊವಿಡ್ ಪರೀಕ್ಷೆಗೆ ಒಳಗಾಗಬೇಕು. ಎಲ್ಲರೂ ಆರೋಗ್ಯ ಸೇತು ಌಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಇದು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೂ ಸಹ ಅನ್ವಯಿಸುತ್ತದೆ ಎಂದು BCCI ತಿಳಿಸಿದೆ.