ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡ ಪರಾಗ್-ತೇವಾಟಿಯಾ

ಕೋಲ್ಕತ್ತಾ 127ರನ್​​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನ ಮೊದಲ ಬಾಲ್​ಅನ್ನು ಸಿಕ್ಸರ್​ ಬಾರಿಸಿದರು.

ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡ ಪರಾಗ್-ತೇವಾಟಿಯಾ
ಸೆಲ್ಫೀ ತೆಗೆದುಕೊಂಡ ರಿಯಾನ್​ ಪರಾಗ್​ ಮತ್ತು ತೇವಾಟಿಯಾ
Follow us
ರಾಜೇಶ್ ದುಗ್ಗುಮನೆ
|

Updated on: Apr 24, 2021 | 10:05 PM

ರಾಜಸ್ಥಾನ್​ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ನಡೆದ ಪಂದ್ಯದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಯಾಟ್​ ಕಮ್ಮಿನ್ಸ್​ ಕ್ಯಾಚ್​ ಹಿಡಿದ ಖುಷಿಗೆ ರಿಯಾನ್ ಪರಾಗ್ ಹಾಗೂ ತೇವಾಟಿಯಾ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡಂತೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಮೊದಲು ಬ್ಯಾಟಿಂಗ್​ಗೆ ಇಳಿದ ಕೋಲ್ಕತ್ತಾ ನೈಟ್​ ರೈಡರ್ಸ್​ ಕಳಪೆ ಆರಂಭ ಕಂಡಿತ್ತು. ಎಲ್ಲರೂ ಬಹುಬೇಗ ಪೆವಿಲಿಯನ್​ ಸೇರಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲೂ ಕೆಕೆಆರ್​ ಕಳಪೆ ಆರಂಭ ಕಂಡಿತ್ತು. ದಿನೇಶ್​ ಕಾರ್ತಿಕ್​, ರಸೆಲ್​ ಹಾಗೂ ಕಮ್ಮಿನ್ಸ್ ಅದ್ಭುತ ಆಟ ತೋರಿ ಕೆಕೆಆರ್​ ರನ್​ ಹೆಚ್ಚಿಸಿದ್ದರು. ಹೀಗಾಗಿ, ಇಂದಿನ ಪಂದ್ಯಗಳಲ್ಲಿ ಈ ವಿಕೆಟ್​ಗಳನ್ನು ಪಡೆಯೋದು ಆರ್​ಆರ್​ಗೆ ತುಂಬಾನೇ ಮುಖ್ಯವಾಗಿತ್ತು.

ಕೋಲ್ಕತ್ತಾ 127ರನ್​​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನ ಮೊದಲ ಬಾಲ್​ಅನ್ನು ಸಿಕ್ಸರ್​ ಬಾರಿಸಿದರು. ಎರಡನೇ ಬಾಲ್​ ಕೂಡ ಸಿಕ್ಸ್​ ಹೊಡೆಯೋಕೆ ಹೋದರು. ಆದರೆ, ಈ ಬಾಲ್​ ರಿಯಾನ್ ಪರಾಗ್ ಕೈ ಸೇರಿತ್ತು. ಈ ಖುಷಿಗೆ ರಿಯಾನ್ ಪರಾಗ್ ಹಾಗೂ ರಾಹುಲ್​ ತೇವಾಟಿಯಾ ಸೆಲ್ಫೀ ತೆಗೆದುಕೊಂಡಂತೆ ನಟಿಸಿದರು.

ಇದನ್ನೂ ಓದಿ: IPL 2021 RCB vs KKR: ಅಬ್ಬರಿಸಿದ ಆರ್ಸಿಬಿ ಆಪತ್ಭಾಂದವ! ಕೊನೆಯ 5 ಓವರ್​ಗಳಲ್ಲಿ ಕೆಕೆಆರ್​ ಬೌಲರ್​ಗಳಿಗೆ ನರಕ ತೋರಿಸಿದ ಡಿವಿಲಿಯರ್ಸ್

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ