ಸಿಯೋಲ್ ಒಲಿಂಪಿಕ್ಸ್‌: ಸೋತರೂ ಚಿನ್ನ ಗೆದ್ದ ಕಾರ್ಲ್ ಲೂಯಿಸ್

Seoul Olympics: ಸಿಯೋಲ್ ಒಲಿಂಪಿಕ್ಸ್​ನಲ್ಲಿ ಭಾರತದ ಒಟ್ಟು 46 ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಭಾರತೀಯ ಕ್ರೀಡಾಪಟುಗಳು ತೀವ್ರ ನಿರಾಸೆಯನ್ನು ಎದುರಿಸಬೇಕಾಯಿತು. 7 ಕ್ರೀಡೆಗಳಲ್ಲಿ ಕಣಕ್ಕಿಳಿದಿದ್ದ ಭಾರತೀಯರು ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 39 ಪುರುಷ ಮತ್ತು 7 ಮಹಿಳಾ ಸ್ಪರ್ಧಿಗಳು ಖಾಲಿ ಕೈಯಲ್ಲೇ ಭಾರತಕ್ಕೆ ಹಿಂತಿರುಗಿದ್ದರು.

ಸಿಯೋಲ್ ಒಲಿಂಪಿಕ್ಸ್‌: ಸೋತರೂ ಚಿನ್ನ ಗೆದ್ದ ಕಾರ್ಲ್ ಲೂಯಿಸ್
Seoul Olympics-Carl Lewis
Follow us
|

Updated on: Jul 21, 2024 | 1:48 PM

ಸಿಯೋಲ್ ಒಲಿಂಪಿಕ್ಸ್‌… 1964ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಸೌತ್ ಕೊರಿಯಾದ ರಾಜಧಾನಿ ಸಿಯೋಲ್ ವಿಶ್ವ ಕ್ರೀಡಾಕೂಟದ ಆತಿಥ್ಯವಹಿಸಿತ್ತು. ಇದು ಏಷ್ಯಾದಲ್ಲಿ ನಡೆಯುತ್ತಿರುವ 2ನೇ ಒಲಿಂಪಿಕ್ಸ್ ಆಗಿದ್ದರಿಂದ ಸಿಯೋಲ್ ಕ್ರೀಡಾಕೂಟ ಇಡೀ ವಿಶ್ವದ ಗಮನ ಸೆಳೆದಿತ್ತು. ಅಲ್ಲದೆ ಈ ಒಲಿಂಪಿಕ್ಸ್​​ನಲ್ಲಿ ಒಟ್ಟು 159 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

46 ಸ್ಪರ್ಧಿಗಳು:

ಸಿಯೋಲ್ ಒಲಿಂಪಿಕ್ಸ್​ನಲ್ಲಿ ಕಾಣಿಸಿಕೊಂಡ 159 ದೇಶಗಳಲ್ಲಿ ಭಾರತ ಕೂಡ ಒಂದು. ಭಾರತದ ಒಟ್ಟು 46 ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಆದರೆ ಭಾರತೀಯ ಕ್ರೀಡಾಪಟುಗಳು ತೀವ್ರ ನಿರಾಸೆಯನ್ನು ಎದುರಿಸಬೇಕಾಯಿತು.

7 ಕ್ರೀಡೆಗಳಲ್ಲಿ ಕಣಕ್ಕಿಳಿದಿದ್ದ ಭಾರತೀಯರು ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 39 ಪುರುಷ ಮತ್ತು 7 ಮಹಿಳಾ ಸ್ಪರ್ಧಿಗಳು ಖಾಲಿ ಕೈಯಲ್ಲೇ ಭಾರತಕ್ಕೆ ಹಿಂತಿರುಗಿದ್ದರು.

ಸಿಯೋಲ್​ನಲ್ಲಿ ಅತ್ಯಧಿಕ ಚಿನ್ನದ ಪದಕ ಗೆದ್ದವರು ಯಾರು?

ಏಷ್ಯಾದಲ್ಲಿ ಕ್ರೀಡಾಕೂಟ ನಡೆದರೂ, ಈ ಬಾರಿ ಕೂಡ ಸೋವಿಯತ್ ಒಕ್ಕೂಟದ ಸ್ಪರ್ಧಿಗಳು ಪಾರುಪತ್ಯ ಮೆರೆದಿದ್ದರು. ಪರಿಣಾಮ 55 ಚಿನ್ನದ ಪದಕಗಳೊಂದಿಗೆ ಸೋವಿಯತ್ ಒಕ್ಕೂಟ ಒಟ್ಟು 132 ಪದಕಗಳೊಂದಿಗೆ ಮೆಡಲ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರು.

ಇನ್ನು ಪೂರ್ವ ಜರ್ಮನಿ 37 ಚಿನ್ನದೊಂದಿಗೆ 102 ಪದಕಗಳನ್ನು ಗೆದ್ದು 2ನೇ ಸ್ಥಾನ ಪಡೆಯಿತು. ಅಮೆರಿಕ 36 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಅಲಂಕರಿಸಿತು.

ಹಾಗೆಯೇ ಸಿಯೋಲ್ ಒಲಿಂಪಿಕ್ಸ್​ಗೆ ಆತಿಥ್ಯವಹಿಸಿದ್ದ ಸೌತ್ ಕೊರಿಯಾ 12 ಚಿನ್ನ, 10 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ 4ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.

ಮಹಿಳಾ ಸ್ಪರ್ಧಿಗಳ ಮಿಂಚಿಂಗ್:

ಸಿಯೋಲ್ ಒಲಿಂಪಿಕ್ಸ್​ನಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದು, ಮಹಿಳಾ ಸ್ಪರ್ಧಿಗಳು. ಅದರಲ್ಲೂ ಮೊದಲ ಬಾರಿಗೆ ಕುದುರೆ ಸವಾರಿಯಲ್ಲಿ ಪದಕ ಗೆದ್ದ ಮೂವರೂ ಮಹಿಳೆಯರೇ ಆಗಿದ್ದರು. ಸ್ವೀಡಿಷ್ ಫೆನ್ಸರ್ ಕೆರ್ಸ್ಟಿನ್ ಪಾಮ್ ಕೂಡ ಇದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ದಾಖಲೆ ಬರೆದರು. ಅಲ್ಲದೆ 7 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡರು.

ಹೊಸ ಕ್ರೀಡೆಗಳ ಸೇರ್ಪಡೆ:

ಸಿಯೋಲ್ ಒಲಿಂಪಿಕ್ಸ್ ಮೂಲಕ ಟೇಬಲ್ ಟೆನ್ನಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಎಂಟ್ರಿ ಕೊಟ್ಟಿತು. ಹಾಗೆಯೇ 64 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಸಿಯೋಲ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟೆನಿಸ್ ಅನ್ನು ಸಹ ಸೇರಿಸಲಾಯಿತು. ಟೆನಿಸ್ ಫೈನಲ್​ನಲ್ಲಿ ಸ್ಟೆಫಿ ಗ್ರಾಫ್ ಮಹಿಳಾ ಟೆನಿಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಸೋತರೂ ಚಿನ್ನ ಗೆದ್ದ ಕಾರ್ಲ್​ ಲೂಯಿಸ್:

100 ಮೀಟರ್ ಸ್ಪ್ರಿಂಟ್ ಓಟವು ಪ್ರತಿ ಒಲಂಪಿಕ್ ಕ್ರೀಡಾಕೂಟದ ಅತೀ ದೊಡ್ಡ ಸ್ಪರ್ಧೆ. ಸಿಯೋಲ್ ಒಲಿಂಪಿಕ್ಸ್​ ಓಟದಲ್ಲಿ  ಕೆನಡಾದ ಬೆನ್ ಜಾನ್ಸನ್ ಅವರು ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದರು. ಆದರೆ, ಆನಂತರ ಜಾನ್ಸನ್ ಅವರ ಸ್ಟೀರಾಯ್ಡ್ ತೆಗೆದುಕೊಂಡಿರುವುದು ಪತ್ತೆಯಾಯಿತು. ಅಂದರೆ ಉದ್ದೀಪನಾ ಪರೀಕ್ಷೆಯ ವೇಳೆ ಅವರುಡ್ರಗ್ಸ್ ತೆಗೆದುಕೊಂಡಿರುವುದು ಕಂಡು ಬಂತು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಯಿತು.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ

ಅತ್ತ ಬೆನ್ ಜಾನ್ಸನ್ ಅನರ್ಹಗೊಂಡ ನಂತರ 2ನೇ ಸ್ಥಾನ ಪಡೆದಿದ್ದ ಕಾರ್ಲ್ ಲೂಯಿಸ್ ಸಿಯೋಲ್ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ಓಟದಲ್ಲಿ ಚಿನ್ನವನ್ನು ಪಡೆದರು. ಅಲ್ಲದೆ ಬೆನ್ ಜಾನ್ಸನ್ ಡ್ರಗ್ಸ್ ಬಳಸಿದ್ದಕ್ಕಾಗಿ ಅನರ್ಹಗೊಂಡ ವಿಶ್ವದ ಮೊದಲ ಕ್ರೀಡಾಪಟು ಎಂಬ ಅಪಖ್ಯಾತಿಗೂ ಒಳಗಾದರು.