CWG 2022: ಕಾಮನ್​ವೆಲ್ತ್​ ಕ್ರೀಡಾಕೂಟದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

Commonwealth Games 2022: ಈ ಹಿಂದೆ ಟೋಕಿಯೋ ಒಲಂಪಿಕ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ 2022 ರ ಹಕ್ಕನ್ನು ಪಡೆದಿದ್ದ ಸೋನಿ ನೆಟ್​ವರ್ಕ್​ ಇದೀಗ ಕಾಮನ್​ವೆಲ್ತ್ ಗೇಮ್ಸ್​ ನೇರ ಪ್ರಸಾರದ ಹಕ್ಕುಗಳನ್ನು ಕೂಡ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

CWG 2022: ಕಾಮನ್​ವೆಲ್ತ್​ ಕ್ರೀಡಾಕೂಟದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ
CWG 2022
Follow us
TV9 Web
| Updated By: Digi Tech Desk

Updated on:Jul 21, 2022 | 5:23 PM

ಜುಲೈ 28 ರಿಂದ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್​ ನಲ್ಲಿ (CWG 2022) ಈ ಬಾರಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲೂ ಭಾರತವನ್ನು 300 ಕ್ಕೂ ಹೆಚ್ಚು ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿಯೇ ಈ ಸಲ ಪದಕಗಳ ನಿರೀಕ್ಷೆ ಹೆಚ್ಚಿದೆ. ಅತ್ತ ಕಾಮನ್​ವೆಲ್ತ್ ಗೇಮ್ಸ್​ ಸಿದ್ದತೆಗಳು ಶುರುವಾಗುತ್ತಿದ್ದಂತೆ ಇತ್ತ ಭಾರತೀಯ ಉಪಖಂಡಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಪ್ರಸಾರ ಮಾಡುವ ಹಕ್ಕುಗಳನ್ನು ಸೋನಿ ನೆಟ್​ವರ್ಕ್​ ಪಡೆದುಕೊಂಡಿದೆ.

ಈ ಹಿಂದೆ ಟೋಕಿಯೋ ಒಲಂಪಿಕ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ 2022 ರ ಹಕ್ಕನ್ನು ಪಡೆದಿದ್ದ ಸೋನಿ ನೆಟ್​ವರ್ಕ್​ ಇದೀಗ ಕಾಮನ್​ವೆಲ್ತ್ ಗೇಮ್ಸ್​ ನೇರ ಪ್ರಸಾರದ ಹಕ್ಕುಗಳನ್ನು ಕೂಡ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಂತೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ನೇಪಾಳ, ಅಫ್ಘಾನಿಸ್ತಾನ ಮತ್ತು ಮಾಲ್ಡೀವ್ಸ್​ನಲ್ಲಿ ಸೋನಿ ನೆಟ್​ವರ್ಕ್​ ಚಾನೆಲ್​ಗಳಲ್ಲಿ ಕಾಮನ್​ವೆಲ್ತ್ ಗೇಮ್ಸ್ ಪ್ರಸಾರವಾಗಲಿದೆ.

ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು? ಕಾಮನ್​ವೆಲ್ತ್ ಗೇಮ್ಸ್ 2022 ರ ಸ್ಪರ್ಧೆಗಳನ್ನು ಸೋನಿ ಟೆನ್ 1, ಸೋನಿ ಟೆನ್ 2, ಸೋನಿ ಟೆನ್ 3, ಸೋನಿ ಸಿಕ್ಸ್​ ಮತ್ತು ಸೋನಿ ಟೆನ್ 4 ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಸೋನಿ LIV ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಸಹ ವೀಕ್ಷಿಸಬಹುದು.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Image
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Image
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಕಣದಲ್ಲಿರುವ ಭಾರತದ ಪ್ರಮುಖ ಸ್ಪರ್ಧಿಗಳು ಯಾರೆಲ್ಲಾ?

ಅಥ್ಲೆಟಿಕ್ಸ್:-

  • ಅವಿನಾಶ್ ಸೇಬಲ್ – ಪುರುಷರ 3000ಮೀ ಸ್ಟೀಪಲ್ ಚೇಸ್
  • ನಿತೇಂದರ್ ರಾವತ್ – ಪುರುಷರ ಮ್ಯಾರಥಾನ್
  • ಎಂ ಶ್ರೀಶಂಕರ್ – ಪುರುಷರ ಲಾಂಗ್ ಜಂಪ್
  • ಮುಹಮ್ಮದ್ ಅನೀಸ್ ಯಾಹಿಯಾ – ಪುರುಷರ ಲಾಂಗ್ ಜಂಪ್
  • ಅಬ್ದುಲ್ಲಾ ಅಬೂಬಕರ್ – ಪುರುಷರ ಟ್ರಿಪಲ್ ಜಂಪ್
  • ಪ್ರವೀಣ್ ಚಿತ್ರವೇಲ್ – ಪುರುಷರ ಟ್ರಿಪಲ್ ಜಂಪ್
  • ಎಲ್ಡೋಸ್ ಪಾಲ್ – ಪುರುಷರ ಟ್ರಿಪಲ್ ಜಂಪ್
  • ನೀರಜ್ ಚೋಪ್ರಾ – ಪುರುಷರ ಜಾವೆಲಿನ್ ಎಸೆತ
  • ಡಿಪಿ ಮನು – ಪುರುಷರ ಜಾವೆಲಿನ್ ಎಸೆತ
  • ರೋಹಿತ್ ಯಾದವ್ – ಪುರುಷರ ಜಾವೆಲಿನ್ ಎಸೆತ

ಬ್ಯಾಡ್ಮಿಂಟನ್​:-

  • ಪಿವಿ ಸಿಂಧು
  • ಆಕರ್ಷಿ ಕಶ್ಯಪ್
  • ಟ್ರೀಸಾ ಜಾಲಿ
  • ಗಾಯತ್ರಿ ಗೋಪಿಚಂದ್
  • ಅಶ್ವಿನಿ ಪೊನ್ನಪ್ಪ
  • ಲಕ್ಷ್ಯ ಸೇನ್
  • ಕಿಡಂಬಿ ಶ್ರೀಕಾಂತ್
  • ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ
  • ಚಿರಾಗ್ ಶೆಟ್ಟಿ
  • ಬಿ ಸುಮೀತ್ ರೆಡ್ಡಿ

ಹಾಕಿ:-

  • ಭಾರತೀಯ ಪುರುಷರ ಹಾಕಿ ತಂಡ
  • ಭಾರತೀಯ ಮಹಿಳಾ ಹಾಕಿ ತಂಡ

ಕ್ರಿಕೆಟ್:-

  • ಮಹಿಳಾ ಕ್ರಿಕೆಟ್ ತಂಡ

ವೈಟ್ ಲಿಫ್ಟಿಂಗ್:-

  • ಮೀರಾಬಾಯಿ ಚಾನು – ಮಹಿಳೆಯರ 49 ಕೆ.ಜಿ
  • ಬಿಂದ್ಯಾರಾಣಿ ದೇವಿ – ಮಹಿಳೆಯರ 55 ಕೆ.ಜಿ
  • ಪಾಪಿ ಹಜಾರಿಕಾ – ಮಹಿಳೆಯರ 59 ಕೆ.ಜಿ
  • ಉಷಾ ಕುಮಾರ – ಮಹಿಳೆಯರ 87 ಕೆ.ಜಿ
  • ಪೂರ್ಣಿಮಾ ಪಾಂಡೆ – ಮಹಿಳೆಯರ 87 ಕೆ.ಜಿ

Published On - 4:26 pm, Thu, 21 July 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್