AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಪ್ರವಾಸ ತೆರಳಲಿರುವ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್​ ಕೋಚ್​ ಆಗಿದ್ದಾರೆ: ಸೌರವ್ ಗಂಗೂಲಿ

ಭಾರತದ ಪ್ರಮುಖ ಆಟಗಾರರು ಇಂಗ್ಲೆಂಡ್​ ಪ್ರವಾಸದಲ್ಲಿರುವ ಕಾರಣ ಶ್ರೀಲಂಕಾದ ಕಿರು ಪ್ರವಾಸಕ್ಕೆ ಶಿಖರ್ ಧವನ್ ನೇತೃತ್ವದಲ್ಲಿ ಭಾರತದ ಬೆಂಚ್​ ಸ್ಟ್ರೆಂಗ್ತ್ ಎನಿಸಿಕೊಂಡಿರುವ ಆಟಗಾರರು ಮತ್ತು ಕೆಲ ಹೊಸಮುಖಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ

ಶ್ರೀಲಂಕಾ ಪ್ರವಾಸ ತೆರಳಲಿರುವ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್​ ಕೋಚ್​ ಆಗಿದ್ದಾರೆ: ಸೌರವ್ ಗಂಗೂಲಿ
ರಾಹುಲ್ ದ್ರಾವಿಡ್​
TV9 Web
| Edited By: |

Updated on: Jun 15, 2021 | 10:00 PM

Share

ಮುಂಬೈ: ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್​ಗಳ ಎರಡು ಸರಣಿಗಳಿಗೆ ರಾಹುಲ್ ದ್ರಾವಿಡ್​ ಅವರು ಶಿಖರ್ ಧವನ್​ ನೇತೃತ್ವದ ಬಾರತೀಯ ತಂಡವನ್ನು ಕೋಚ್ ಮಾಡಲಿದ್ದಾರೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಮಂಗಳವಾರದದಂದು ಮುಂಬೈನಲ್ಲಿ ಹೇಳಿದರು. ‘ಶ್ರೀಲಂಕಾ ಪ್ರವಾಸ ಬೆಳಸಲಿರುವ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್​ ಆಗಿರುತ್ತಾರೆ,’ ಎಂದು ಪತ್ರಕರ್ತರೊಂದಿಗೆ ಮಾತಾಡುತ್ತಾ ಗಂಗೂಲಿ ಹೇಳಿದರು. ಪ್ರವಾಸ ತೆರಳಲಿರುವ ಭಾರತೀಯ ತಂಡದ 14-ದಿನಗಳ ಸಾಂಘಿಕ ಕ್ವಾರಂಟೀನ್ ಮಂಗಳವಾರದಂದು ಮುಂಬೈಯಲ್ಲಿ ಆರಂಭವಾಯಿತು. ಕಳೆದ ಕೆಲವು ವರ್ಷಗಳಿಂದ ದ್ರಾವಿಡ್​ ಅವರು 19-ವರ್ಷದೊಳಗಿನವರ ಭಾರತೀಯ ತಂಡ ಮತ್ತು ಭಾರತ ಎ ಟೀಮುಗಳಿಗೆ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಬೆಂಚ್ ಸ್ಟ್ರೆಂಗ್ತ್​ ಅನ್ನು ಬಲಪಡಿಸುತ್ತಿದ್ದಾರೆ.

ಇಂಡಿಯನ್ ಪ್ರಿಮೀಯರ್​ ಲೀಗ್​ನ ಉಳಿದ ಭಾಗವನ್ನು ಯನೈಟೆಡ್ ಅರಬ್ ಎಮಿರೇಟ್ಟ್ ಸೆಪ್ಟಂಬರ್​ನಲ್ಲಿ ಆಯೋಜಿಸುವುದು ಹೆಚ್ಚು ಕಡಿಮೆ ಖಚಿತವಾಗಿದ್ದರೂ, ಗಂಗೂಲಿ ಅದನ್ನು ದೃಢಪಡಿಸಲಿಲ್ಲ, ತೆರಿಗೆ ವಿನಾಯಿತಿ ನೀಡಬೇಕೆಂದು ಭಾರತ ಸರ್ಕಾರಕ್ಕೆ ಕೋರಲಾಗಿದೆ, ಸರ್ಕಾರದಿಂದ ಪ್ರತಿಕ್ರಿಯೆ ಬಂದ ನಂತರವೇ, ಐಪಿಎಲ್ ಮಿಕ್ಕ ಭಾಗವನ್ನು ಎಲ್ಲಿ ನಡೆಸುವ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುವುದೆಂದು ಗಂಗೂಲಿ ಹೇಳಿದರು.

‘ತೆರಿಗೆ ವಿನಾಯಿತಿ ಕೋರಿ ನಾವು ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಮತ್ತು ಸರ್ಕಾರದ ಉತ್ತರವನ್ನು ನಿರೀಕ್ಷಿಸುತ್ತಿದ್ದೇವೆ. ನಮಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಈ ಬಗ್ಗೆ ಅದಷ್ಟು ಬೇಗ ಬಿಸಿಸಿಯ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿದೆ,’ ಎಂದು ಗಂಗೂಲಿ ಹೇಳಿದರು.

ಭಾರತೀಯ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ ಆಯೋಜನೆ ಕುರಿತು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಮೂಲಗಳಿಂದ ಪ್ರಾಪ್ತವಾಗಿರುವ ಮಾಹಿತಿ ಪ್ರಕಾರ ಅದನ್ನು ಯುಎಈ ಆಯೋಜಿಸಲಿದೆ ಮತ್ತು ಅರ್ಹತಾ ಸುತ್ತಿನ ಪಂದ್ಯಗಳು ಓಮನ್​ನಲ್ಲಿ ನಡೆಯಲಿವೆ. ಬಿಸಿಸಿಐ ಹೋಟೆಲ್ ಬುಕಿಂಗ್​ಗಳನ್ನು ಬ್ಲಾಕ್ ಮಾಡಿದೆ. ಮತ್ತೊಂದು ಮೂಲದ ಪ್ರಕಾರ ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಈಗಾಗಲೇ ಓಮನ್ ಅನ್ನು ಸಂಪಕರ್ಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಅಯೋಜಿಸುವಂತೆ ಕೋರಿದೆ.

ಭಾರತದ ಪ್ರಮುಖ ಆಟಗಾರರು ಇಂಗ್ಲೆಂಡ್​ ಪ್ರವಾಸದಲ್ಲಿರುವ ಕಾರಣ ಶ್ರೀಲಂಕಾದ ಕಿರು ಪ್ರವಾಸಕ್ಕೆ ಶಿಖರ್ ಧವನ್ ನೇತೃತ್ವದಲ್ಲಿ ಭಾರತದ ಬೆಂಚ್​ ಸ್ಟ್ರೆಂಗ್ತ್ ಎನಿಸಿಕೊಂಡಿರುವ ಆಟಗಾರರು ಮತ್ತು ಕೆಲ ಹೊಸಮುಖಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ದೇವದತ್ ಪಡಿಕ್ಕಲ್ ಮತ್ತು ಕೃಷ್ಣಪ್ಪ ಗೌತಮ್ ಮೊದಲಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ

ತಂಡ ಹೀಗಿದೆ:

ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಎಸ್ ಸ್ಯಾಮ್ಸನ್ (ವಿಕೆಟ್ ಕೀಪರ್), ಯಜ್ವೇಂದ್ರ ಚಹಲ್, ರಾಹುಲ್ ಚಹರ್ , ಕೆ ಗೌತಮ್, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವ್​ದೀಪ್ ಸೈನಿ, ಚೇತನ್ ಸಕಾರಿಯಾ

ನೆಟ್ ಬೌಲರ್​ಗಳು:

ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್

ಇದನ್ನೂ ಓದಿ: ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಗೌರವಕ್ಕೆ ಬಿಸಿಸಿಐ ಪರಿಗಣಿಸಿದ್ದು ಬಹಳ ಹೆಮ್ಮೆಯ ವಿಷಯ: ಶಿಖರ್ ಧವನ್