
ಗುರುವಾರವಷ್ಟೆ ಭಾರತ ಪುರುಷರ ಹಾಕಿ ತಂಡ ಪ್ಲೇ ಆಫರ್ನಲ್ಲಿ ಜರ್ಮನಿ ವಿರುದ್ಧ ರೋಚಕ ಜಯ ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿ ವಿಶೇಷ ಸಾಧನೆ ಮಾಡಿತು. ಸದ್ಯ ಈಗ ಭಾರತ ಮಹಿಳಾ ಹಾಕಿ ತಂಡದ ಸರದಿ. ಕಂಚಿನ ಪದಕಕ್ಕಾಗಿ ರಾಣಿ ರಾಮ್ಪಾಲ್ ಪಡೆ ಇಂದು ಗ್ರೇಟ್ ಬ್ರಿಟನ್ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿ ನಿಂತಿದೆ. ಭಾರತ ಮಹಿಳಾ ಹಾಕಿ ತಂಡ ಗೆದ್ದು ಪದಕ ಪಡೆದಿದ್ದೆ ಆದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ವನಿತೆಯರಿಗೆ ಸಿಕ್ಕ ಚೊಚ್ಚಕ ಪದಕ ಇದಾಗಲಿದೆ.
ಪ್ರಥಮ ಬಾರಿಗೆ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದ ಭಾರತೀಯ ಮಹಿಳಾ ಹಾಕಿ ತಂಡ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಅರ್ಜೇಂಟಿನಾ ವಿರುದ್ಧ ಸೋಲು ಕಂಡಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮುನ್ನಡೆಯನ್ನು ಸಾಧಿಸಿದತಾದರೂ ಬಳಿಕ ಎದುರಾಳಿಗೆ ಎರಡು ಗೋಲು ಬಿಟ್ಟುಕೊಡುವ ಮೂಲಕ ಹಿನ್ನೆಡೆಯನ್ನು ಅನುಭವಿಸಿತು. 1-2 ಅಂತರದಿಂದ ಸೋಲು ಅನುಭವಿಸಿದ್ದು ಫೈನಲ್ ಪ್ರವೇಶಿಸಲು ವಿಫಲವಾಯಿತು.
ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಭಾರತೀಯ ಮಹಿಳಾ ತಂಡಕ್ಕಿತ್ತು. ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಈ ಪದಕ ಮುಡಿಗೇರಿಸಿಕೊಳ್ಳಲು ಭಾರತೀಯ ತಂಡ ಹವಣಿಸುತ್ತಿದೆ. ಮೂರನೇ ಸ್ಥಾನದಕ್ಕಾಗಿ ನಡೆಯುವ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಆಡಲಿದೆ. ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಈ ಪಂದ್ಯ ನಡೆಯಲಿದ್ದು ಇದರಲ್ಲಿ ಗೆದ್ದರೆ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕ ಕೊರಳಿಗೇರಿಸಿಕೊಳ್ಳಲಿದೆ.
IND vs ENG: ಮೊದಲ ಟೆಸ್ಟ್ಗೆ ವರುಣನ ಅವಕೃಪೆ; ಕೈಕೊಟ್ಟ ಕೊಹ್ಲಿ, ರಹಾನೆ, ಪೂಜಾರ.. ರಾಹುಲ್ ಏಕಾಂಗಿ ಹೋರಾಟ
(Tokyo Olympics 2021 India India womens hockey play for bronze)