ಟೋಕಿಯೋ ಒಲಿಂಪಿಕ್ಸ್ನಲ್ಲಿ (Tokyo Olympics) ನಿನ್ನೆ ಬುಧವವಾರ ಕಳಪೆ ಪ್ರದರ್ಶನ ತೋರಿದ್ದ ಭಾರತ ಇಂದು ಕಠಿಣ ಪೈಪೋಟಿ ನೀಡುತ್ತಿದೆ. ಒಂದು ಕಡೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಅವರು ಡೆನ್ಮಾರ್ಕ್ನ ಮಿಯಾ ಬಿಲ್ಚ್ಫೆಲ್ಡ್ಟ್ ವಿರುದ್ಧ ರೌಂಡ್ 16 ಪಂದ್ಯವನ್ನು ಆಡುತ್ತಿದ್ದಾರೆ. ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಇನ್ನೊಂದೆಡೆ ಭಾರತ ಪುರುಷರ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ಸೆಣೆಸಾಡುತ್ತಿದೆ.
ಇದರ ನಡುವೆ ರೋಯಿಂಗ್ ವಿಭಾಗದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಅರ್ಜುನ್ ಮತ್ತು ಅರವಿಂದ್ ಜೋಡಿಯ ಭಾರತದ ರೋಯಿಂಗ್ ತಂಡ 25 ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ.
ಇಂದು ಮುಂಜಾನೆ ರೋಯಿಂಗ್ ವಿಭಾಗದ ಡಬಲ್ಸ್ ಸ್ಕಲ್ಸ್ ಫೈನಲ್ ಬಿಯಲ್ಲಿ ಭಾಗವಹಿಸಿದ ಅರ್ಜುನ್ ಮತ್ತು ಅರವಿಂದ್ ಜೋಡಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟಾರೆ 11ನೇ ಸ್ಥಾನವನ್ನು ಪಡೆದುಕೊಂಡಿರುವ ಅರ್ಜುನ್ ಮತ್ತು ಅರವಿಂದ್ 6:29.66 ಟೈಮ್ ಮಾರ್ಕ್‌ನಲ್ಲಿ ಗುರಿಯನ್ನು ತಲುಪಿದರು.
ಭಾರತಕ್ಕೆ ಇಲ್ಲಿ ಪದಕ ಗೆಲ್ಲುವ ಅವಕಾಶ ಕೈತಪ್ಪಿತಾದರೂ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮುಟ್ಟದಂತಹ ಸ್ಥಾನವನ್ನು ಅರ್ಜುನ್ ಮತ್ತು ಅರವಿಂದ್ ಜೋಡಿ ಮುಟ್ಟಿ ನೂತನ ದಾಖಲೆ ಬರೆದರು.
ಇಂದಾದರೂ ಭಾರತೀಯರ ಕಡೆಯಿಂದ ಎರಡನೇ ಪದಕ ನಿರೀಕ್ಷಿಸಲಾಗುತ್ತಿದೆ. ಹಾಕಿಯಲ್ಲಿ ಭಾರತ ಹಾಗೂ ಅರ್ಜೆಂಟಿನಾ ಪಂದ್ಯ ನಡೆಯುತ್ತಿದೆ. ಮತ್ತೊಂದೆಡೆ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಆಡುತ್ತಿದ್ದು ಗೆದ್ದರೆ ಮುಂದಿನ ಸುತ್ತಿಗೆ ಎಂಟ್ರಿ ಕೊಡಲಿದ್ದಾರೆ. ಭಾರೀ ಕುತೂಹಲ ಕೆರಳಿಸಿರುವ ಬಾಕ್ಸರ್ ಮೇರಿ ಕೋಮ್ ಕೂಡ ಇಂದು ತಮ್ಮ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.
Tokyo Olympics: ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ಕೋಚ್: ವಿಡಿಯೋ ವೈರಲ್
(Tokyo Olympics Indian rowers finish at 11th position producing best-ever result at the Games)
Published On - 7:11 am, Thu, 29 July 21