ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್​​ಗೆ ಆರಂಭವಾಯ್ತು ಎರಡನೇ ಸೀಸನ್; ಗೆದ್ದವರಿಗೆ 5 ಲಕ್ಷ ರೂಪಾಯಿ

ಟಿವಿ9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಎರಡನೇ ಸೀಸನ್ ಆರಂಭವಾಗಿದೆ. ಮೇ 15-17 ರಂದು ಹೈದರಾಬಾದ್‌ನ ಗೋಪಿಚಂದ್ ಅಕಾಡೆಮಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಉದ್ಯೋಗಿಗಳು ತಮ್ಮ ಕ್ರೀಡಾ ಮನೋಭಾವ ಪ್ರದರ್ಶಿಸಬಹುದು. ಪದ್ಮಭೂಷಣ ಪುಲ್ಲೇಲ ಗೋಪಿಚಂದ್ ಸಹಯೋಗದೊಂದಿಗೆ ನಡೆಯುವ ಈ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಿಗೆ 5 ಲಕ್ಷ ರೂಪಾಯಿ ಬಹುಮಾನವಿದೆ. ಈಗಲೇ ನೋಂದಾಯಿಸಿಕೊಳ್ಳಿ.

ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್​​ಗೆ ಆರಂಭವಾಯ್ತು ಎರಡನೇ ಸೀಸನ್; ಗೆದ್ದವರಿಗೆ 5 ಲಕ್ಷ ರೂಪಾಯಿ
ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್

Updated on: Apr 17, 2026 | 11:44 AM

ಟಿವಿ9 ನೆಟ್ವರ್ಕ್ ಈ ಮೊದಲು ಆಯೋಜಿಸಿದ್ದ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಯಶಸ್ವಿ ಆಗಿತ್ತು. ವೃತ್ತಿಪರತೆ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ತುಂಬಲು ಇದು ಸಹಕಾರಿ ಆಗಿತ್ತು. ಅಲ್ಲದೆ, ಉದ್ಯಮದ ನಾಯಕರನ್ನು ಒಂದು ಕಡೆ ಸೇರಿಸಿತ್ತು. ಸೀಸನ್ 1 ಯಶಸ್ಸಿನ ಬಳಿಕ ಈಗ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ಗೆ ಎರಡನೇ ಸೀಸನ್ ಆರಂಭ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮೊದಲ ಸೀಸನ್ ಅಲ್ಲಿ ಮೈಕ್ರೋಸಾಫ್ಟ್, ಇನ್​​ಫೋಸಿಸ್, ಅಮೇಜಾನ್, ಐಕಿಯಾ, ಮೇಕ್​​ ಮೈ ಟ್ರಿಪ್, ಟೈಮ್ಸ್ ಆಫ್ ಇಂಡಿಯಾ, ಎಬಿಬಿ, ಡಾಕ್ಟರ್​ ರೆಡ್ಡಿಸ್, ನೋವಾರ್ಟಿಸ್, ಡೆಲ್​, ಕ್ಯಾಬ್ಜಮಿನಿ, ಗ್ರೀಂಕೋ ಸೇರಿದಂತೆ ಹಲವು ಕಂಪನಿಗಳು ಭಾಗಿ ಆಗಿದ್ದವು. 1000 ಕ್ಕೂ ಹೆಚ್ಚು ಪಂದ್ಯಗಳು ನಡೆದವು.

ಈಗ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ಗೆ ಎರಡನೇ ಸೀಸನ್ ಬರುತ್ತಿದೆ. ಅದು ಕೂಡ ಮತ್ತಷ್ಟು ಹಿರಿದಾಗಿ. ಮೇ 15ರಿಂದ 17ರವರೆಗೆ ಹೈದರಾಬಾದ್​​ನ ಪ್ರತಿಷ್ಠಿತ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಈ ಚಾಂಪಿಯನ್​​ಶಿಪ್ ನಡೆಯಲಿದೆ.

ಭಾರತದ ಅತ್ಯಂತ ಗೌರವಾನ್ವಿತ ಬ್ಯಾಡ್ಮಿಂಟನ್ ಐಕಾನ್‌ಗಳಲ್ಲಿ ಒಬ್ಬರಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪುಲ್ಲೇಲ ಗೋಪಿಚಂದ್ ಅವರೊಂದಿಗಿನ ಸಹಯೋಗದಲ್ಲಿ ಚಾಂಪಿಯನ್‌ಶಿಪ್ ಮುಂದುವರಿಯುತ್ತಿದೆ. ಐತಿಹಾಸಿಕ ಆಲ್ ಇಂಗ್ಲೆಂಡ್ ಚಾಂಪಿಯನ್ (2001) ಮತ್ತು ಭಾರತದ ಬ್ಯಾಡ್ಮಿಂಟನ್ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿರುವ ಗೋಪಿಚಂದ್, ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ರೂಪಿಸುವಲ್ಲಿ ಮತ್ತು ಭಾರತದಲ್ಲಿ ಕ್ರೀಡೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಂಪಿಯನ್‌ಶಿಪ್‌ನೊಂದಿಗಿನ ಅವರ ಸಂಯೋಜಕತ್ವ ವೃತ್ತಿಪರತೆ, ವಿಶ್ವಾಸಾರ್ಹತೆ ಮತ್ತು ವಿಶ್ವ ದರ್ಜೆಯ ಪಂದ್ಯಾವಳಿಯ ಅನುಷ್ಠಾನಕ್ಕೆ ಸಹಕಾರಿ ಆಗಿದೆ.

ಚಾಂಪಿಯನ್​​ಶಿಪ್ ವಿಭಾಗ: ಚಾಂಪಿಯನ್​​ಶಿಪ್ ವಿಭಾಗದಲ್ಲಿ ಪುರುಷರ ಸಿಂಗಲ್ಸ್ ಹಾಗೂ ಪುರುಷರ ಡಬಲ್ಸ್ ನಡೆಯಲಿದೆ. ಕನಿಷ್ಠ 3 ಜನರು ಹಾಗೂ ಗರಿಷ್ಠ 5 ಜನರು ತಂಡದಲ್ಲಿ ಇರಲು ಅವಕಾಶವಿದೆ. ತಂಡದ ಎಲ್ಲ ಸದಸ್ಯರು ಒಂದೇ ಕಂಪನಿಗೆ ಸೇರಿರಬೇಕು.

ಮುಕ್ತ ವಿಭಾಗದ ಚಾಂಪಿಯನ್‌ಶಿಪ್: ಈ ವಿಭಾಗದಲ್ಲಿ ವೈಯಕ್ತಿಕವಾಗಿ ಭಾಗವಹಿಸಬಹುದು.

ಮಹಿಳಾ ಸಿಂಗಲ್ಸ್: ಭಾಗವಹಿಸುವವರು ಒಂದೇ ಅಥವಾ ಬೇರೆ ಕಂಪನಿಯಿಂದ ಆಗಿರಬಹುದು.

ಮಿಶ್ರ ಡಬಲ್ಸ್‌: ಭಾಗವಹಿಸುವವರು ಒಂದೇ ಅಥವಾ ಬೇರೆ ಕಂಪನಿಯಿಂದ ಆಗಿರಬಹುದು.

ಪ್ರತಿ ವಿಭಾಗದಲ್ಲಿ ವಿನ್ ಆದವರಿಗೆ 5 ಲಕ್ಷ ರೂಪಾಯಿ ಹಣ ಸಿಗಲಿದೆ.

ಚಾಂಪಿಯನ್‌ಶಿಪ್ ಎಲ್ಲಾ ವಿಭಾಗಗಳಲ್ಲಿ ಒಟ್ಟು 5 ಲಕ್ಷ ಬಹುಮಾನಗಳನ್ನು ನೀಡಲಾಗುತ್ತದೆ. ಆಕರ್ಷಕ ಟ್ರೋಫಿ ಕೂಡ ಸಿಗಲಿದೆ.

www.tv9x.com/corporatecup ಲಾಗಿನ್ ಆಗಿ ನೋಂದಣಿ ಮಾಡಿಕೊಳ್ಳಿ. ಯಾವುದೇ ಪ್ರಶ್ನೆಗಳಿಗೆ: corporatecup@tv9.com ಮೇಲ್ ಮಾಡಿ ಅಥವಾ 70320 03222 ಸಂಖ್ಯೆಗೆ ಕರೆ ಮಾಡಿದೆ.

ಈವೆಂಟ್ ಪಾಲುದಾರಿಕೆಗಳು ಮತ್ತು ಸಹಯೋಗಗಳಿಗಾಗಿ, ದಯವಿಟ್ಟು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ:

ಆಂಧ್ರ-ತೆಲಂಗಾಣ: ಎಂಎನ್​ ಚರ್ಯ: 9948299698
ಕರ್ನಾಟಕ: ಶ್ರೀಧರ್ : 9008026103
ಕೋಲ್ಕತ್ತಾ: ಮೊಹುವಾ ರಾಯ್: 8334872780
ದೆಹಲಿ: ವಿಕಾಸ್: 9810266385
ಗುಜರಾತ್: ಮೌಲಿಕ್ ಶಾ: 9909941607
ಮಹರಾಷ್ಟ್ರ: ಭೂಷಣ್: 9820139372

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us